Friday, October 18, 2024

Latest Posts

ಸೆಪ್ಟೆಂಬರ್ 6 ರಂದು ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ ಎನ್-ಲೈನ್ ಕಾರು

- Advertisement -

Technology News:

ಹ್ಯುಂಡೈ ಇಂಡಿಯಾ ಕಂಪನಿಯು ಪರ್ಫಾಮೆನ್ಸ್ ಪ್ರಿಯರಿಗಾಗಿ ವೆನ್ಯೂ ಎನ್-ಲೈನ್ ಆವೃತ್ತಿಯನ್ನು ಪರಿಚಯಿಸುತ್ತಿದೆ. ಸೆಪ್ಟೆಂಬರ್ 6ರಂದು ಹೊಸ ಕಾರು ಬಿಡುಗಡೆಯಾಗಲಿದ್ದು, ಹೊಸ ಕಾರಿನ ವೆರಿಯೆಂಟ್, ಬಣ್ಣಗಳ ಆಯ್ಕೆ ಮತ್ತು ತಾಂತ್ರಿಕ ಸೌಲಭ್ಯಗಳ ಮಾಹಿತಿ ಇದಾಗಿದೆ.

ಹೊಸ ವೆನ್ಯೂ ಎನ್-ಲೈನ್ ಮಾದರಿಗಾಗಿ ಹ್ಯುಂಡೈ ಕಂಪನಿಯು ಈಗಾಗಲೇ ಬುಕಿಂಗ್ ಸಹ ಆರಂಭಿಸಿದೆ. ರೂ. 21 ಸಾವಿರ ಮುಂಗಡದೊಂದಿಗೆ ಬುಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಹೊಸ ಆವೃತ್ತಿಗಾಗಿ ಗ್ರಾಹಕರ ಆನ್‌ಲೈನ್ ಅಥವಾ ನೇರವಾಗಿ ಡೀಲರ್ಸ್‌ ಬಳಿಯಲ್ಲಿ ಮುಂಗಡ ಹಣ ಪಾವತಿ ಮಾಡಬಹುದು.

ವೆನ್ಯೂ ಎನ್-ಲೈನ್ ಮಾದರಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಅತ್ಯುತ್ತಮ ಫೀಚರ್ಸ ಮತ್ತು ಸ್ಪೋರ್ಟಿ ಡಿಸೈನ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ಫೀಚರ್ಸ್‌ಗಳಿಗೆ ಅನುಗುಣವಾಗಿ ಎನ್6 ಮತ್ತು ಎನ್8 ವೆರಿಯೆಂಟ್ ಹೊಂದಿರಲಿದೆ.

ಸ್ಟ್ಯಾಂಡರ್ಡ್ ವೆನ್ಯೂ ಮಾದರಿಗಳಿಗೆ ಹೋಲಿಸಿದರೆ ಎನ್-ಲೈನ್‌ನಲ್ಲಿ ಸಾಕಷ್ಟು ವಿನ್ಯಾಸ ಬದಲಾವಣೆಗಳಾಗಿದ್ದು, ಇದು ಡಾರ್ಕ್ ಕ್ರೋಮ್ ಫ್ರಂಟ್ ಗ್ರಿಲ್, ಸ್ಪೋರ್ಟಿ ಟೈಲ್‌ಗೇಟ್ ಸ್ಪಾಯ್ಲರ್, ಗ್ರಿಲ್‌ನಲ್ಲಿ ಎನ್-ಲೈನ್ ಬ್ಯಾಡ್ಜ್, ಸೈಡ್ ಫೆಂಡರ್‌ಗಳು ಮತ್ತು ಟೈಲ್‌ಗೇಟ್, 16-ಇಂಚಿನ ಮಿಶ್ರಲೋಹದ ಚಕ್ರಗಳು ಮತ್ತು ಎನ್ ಬ್ರ್ಯಾಂಡಿಂಗ್ ಹೊಂದಿರುತ್ತದೆ.

ಜೊತೆಗೆ ಸ್ಪೋರ್ಟಿ ಬಂಪರ್, ನವೀಕರಿಸಿದ ಫೆಂಡರ್‌ಗಳು, ಸೈಡ್ ಸಿಲ್ ಮತ್ತು ರೂಫ್ ರೈಲ್‌ಗಳು ಅಥ್ಲೆಟಿಕ್ ರೆಡ್ ಹೈಲೈಟ್‌ಗಳು, ಬ್ಲ್ಯಾಕ್ ಅಥ್ಲೆಟಿಕ್ ಸ್ಪೋರ್ಟಿ ವಿನ್ಯಾಸ ಪಡೆಯಲಿದ್ದು, ರೆಡ್ ಆಕ್ಸೆಂಟ್‌ನೊಂದಿಗೆ ಒಳಾಂಗಣ, ಮುಂಭಾಗದ ಬ್ರೇಕ್‌ನಲ್ಲಿ ರೆಡ್ ಕ್ಯಾಲಿಪರ್‌ಗಳನ್ನು ನೀಡಲಾಗಿದೆ.

ಹಾಗೆಯೇ ಹೊಸ ಕಾರಿನ ವೈಶಿಷ್ಟ್ಯಗಳ ಬಗೆಗೆ ಹೇಳುವುದಾದರೆ ಹೊಸ ವೆನ್ಯೂ ಎನ್-ಲೈನ್ ಮಾದರಿಯಲ್ಲಿ ಡ್ಯುಯಲ್ ಕ್ಯಾಮೆರಾಗಳೊಂದಿಗೆ ಡ್ಯಾಶ್‌ಕ್ಯಾಮ್ ಅನ್ನು ಹೊಂದಿರುತ್ತದೆ. ಹಾಗೆಯೇ ಬ್ಲೂಲಿಂಕ್ ಸಂಪರ್ಕಿತ ತಂತ್ರಜ್ಞಾನದ ಅಡಿಯಲ್ಲಿ 60 ಕ್ಕೂ ಹೆಚ್ಚು ಸಂಪರ್ಕಿತ ವೈಶಿಷ್ಟ್ಯಗಳು ಇದರಲ್ಲಿದ್ದು, ಇದು ಅಲೆಕ್ಸಾ ಮತ್ತು ಗೂಗಲ್ ವಾಯ್ಸ್ ಅಸಿಸ್ಟೆಂಟ್‌ನೊಂದಿಗೆ ಹೋಮ್ ಟು ಕಾರ್ ಸೌಲಭ್ಯವನ್ನು ಒದಗಿಸಲಾಗುತ್ತದೆ.

ಇದರೊಂದಿಗೆ ಪನೋರಮಿಕ್ ಸನ್‌ರೂಫ್, ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಂತಹ ವೈಶಿಷ್ಟ್ಯಗಳನ್ನು ಒದಗಿಸಲಾಗಿದ್ದು, ಇದು ಪೋಲಾರ್ ವೈಟ್ ಮತ್ತು ಶ್ಯಾಡೋ ಗ್ರೇ ಸೇರಿದಂತೆ ಮೂರು ಮೊನೊ ಟೋನ್‌ಗಳಲ್ಲಿ ಎರಡು ಮೊನೊ ಟೋನ್‌ಗಳಲ್ಲಿ ಲಭ್ಯವಾಗಲಿದೆ.

ಪೋಲಾರ್ ವೈಟ್ ಜೊತೆಗೆ ಪ್ಲಾಟಿನಿಯಂ ಬ್ಲ್ಯಾಕ್ ರೂಫ್, ಪೋಲಾರ್ ವೈಟ್ ಜೊತೆ ಫ್ಯಾಂಟಮ್ ಬ್ಲ್ಯಾಕ್ ರೂಫ್ ಮತ್ತು ಥಂಡರ್ ಬ್ಲೂ ಜೊತೆ ಶಾಡೋ ಬ್ಲ್ಯಾಕ್ ರೂಫ್ ಬಣ್ಣಗಳ ಆಯ್ಕೆ ಹೊಂದಿದ್ದು, ಇದು ಸ್ಟ್ಯಾಂಡರ್ಡ್ ಮಾದರಿಗಿಂತಲೂ ತುಸು ದುಬಾರಿಯಾಗಿರಲಿದೆ ಎನ್ನಲಾಗಿದೆ.

ಭಾರತದಲ್ಲಿ ಹ್ಯುಂಡೈ ಕಂಪನಿಯು ಈಗಾಗಲೇ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಎನ್-ಲೈನ್ ಆವೃತ್ತಿಯನ್ನು ಮಾರಾಟಗೊಳಿಸುತ್ತಿದ್ದು, ಈ ವರ್ಷಾಂತ್ಯದೊಳಗಾಗಿ ಮತ್ತೆರಡು ಹೊಸ ಕಾರು ಮಾದರಿಗಳಲ್ಲಿ ಹೊಸ ಪರ್ಫಾಮೆನ್ಸ್ ಆವೃತ್ತಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ರೈಲ್ವೇ ಪ್ರಯಾಣಿಕರು ವಾಟ್ಸ್ ಆಪ್ ನಲ್ಲಿ ಮಾಡಬಹುದು ಫುಡ್ ಆರ್ಡರ್…?!

ಜಿಯೋ ಧಮಾಕ ಆಫರ್…!

ಸೊಳ್ಳೆಗಳಿಂದ ಮುಕ್ತಿ ನೀಡುತ್ತೆ ಈ ಲ್ಯಾಂಪ್..!

- Advertisement -

Latest Posts

Don't Miss