Bank holiday :
ಸೆಪ್ಟೆಂಬರ್ ತಿಂಗಳ ಪ್ರಾರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಸೆಪ್ಟೆಂಬರ್ ತಿಂಗಳ ರಜಾಪಟ್ಟಿ ಬಿಡುಗಡೆ ಮಾಡಿದೆ. ಸೆಪ್ಟೆಂಬರ್ ನಲ್ಲಿ ಒಟ್ಟು 13 ದಿನಗಳ ಕಾಲ ಬ್ಯಾಂಕಿಗೆ ರಜೆಯಿದೆ. ಇದರಲ್ಲಿ ಭಾನುವಾರ, ಎರಡನೇ ಹಾಗೂ ನಾಲ್ಕನೇ ಶನಿವಾರಗಳ ರಜೆಗಳು ಕೂಡ ಸೇರಿವೆ. ಬ್ಯಾಂಕುಗಳಿಗೆ ಸಂಬಂಧಿಸಿ ಆರ್ ಬಿಐ ಪ್ರತಿ ತಿಂಗಳು ಹಾಲಿ ಡೇ ಲಿಸ್ಟ್ ಬಿಡುಗಡೆ ಮಾಡುತ್ತದೆ. ಬ್ಯಾಂಕಿಗೆ ರಜೆಯಿರುವ ದಿನ ಆನ್ ಲೈನ್ ವಹಿವಾಟಿಗೆ ಹಾಗೂ ಎಟಿಎಂ ವ್ಯವಹಾರಗಳಿಗೆ ಯಾವುದೇ ತೊಂದರೆ ಇರೋದಿಲ್ಲ. ಆದ್ರೆ ಬ್ಯಾಂಕಿಗೆ ಹೋಗಿ ಮಾಡುವ ಯಾವುದಾದ್ರೂ ಕೆಲಸವಿದ್ರೆ ಮಾತ್ರ ರಜಾಪಟ್ಟಿ ಗಮನಿಸಿ ಹೋಗೋದು ಉತ್ತಮ.
ಸೆಪ್ಟೆಂಬರ್ ತಿಂಗಳ ರಜಾಪಟ್ಟಿ :
ಸೆಪ್ಟೆಂಬರ್ 1: ಗಣೇಶ ಚತುರ್ಥಿ ಹಬ್ಬದ ಎರಡನೇ ದಿನದ ಆಚರಣೆ ಹಿನ್ನೆಲೆ ಪಣಜಿಯಲ್ಲಿ ಬ್ಯಾಂಕಿಗೆ ರಜೆ
ಸೆಪ್ಟೆಂಬರ್ 4: ಭಾನುವಾರ
ಸೆಪ್ಟೆಂಬರ್ 6: ಕರ್ಮ ಪೂಜೆ ಆಚರಣೆ ಹಿನ್ನೆಲೆ ರಾಂಚಿಯಲ್ಲಿ ಬ್ಯಾಂಕುಗಳಿಗೆ ರಜೆ.
ಸೆಪ್ಟೆಂಬರ್ 7: ಮೊದಲ ಓಣಂ ಹಬ್ಬದ ಹಿನ್ನೆಲೆ ಕೊಚ್ಚಿ ಹಾಗೂ ತಿರುವನಂತಪುರಂನಲ್ಲಿ ಬ್ಯಾಂಕುಗಳಿಗೆ ರಜೆ.
ಸೆಪ್ಟೆಂಬರ್ 8: ತಿರುಓಣಂ ಹಿನ್ನೆಲೆ ಕೊಚ್ಚಿ ಹಾಗೂ ತಿರುವನಂತಪುರಂನಲ್ಲಿ ಬ್ಯಾಂಕುಗಳಿಗೆ ರಜೆ.
ಸೆಪ್ಟೆಂಬರ್ 9: ಇಂದ್ರಜಾತ್ರ ಹಿನ್ನೆಲೆ ಗ್ಯಾಂಗ್ಟಕ್ ನಲ್ಲಿ ಬ್ಯಾಂಕುಗಳಿಗೆ ರಜೆ.
ಸೆಪ್ಟೆಂಬರ್ 10: ಶ್ರೀನಾರಾಯಣ ಗುರು ಜಯಂತಿ ಹಿನ್ನೆಲೆ ಕೊಚ್ಚಿ ಹಾಗೂ ತಿರುವನಂತಪುರಂನಲ್ಲಿ ಬ್ಯಾಂಕುಗಳಿಗೆ ರಜೆ. ಎರಡನೇ ಶನಿವಾರವಾದ ಕಾರಣ ದೇಶದ ಇತರ ಭಾಗಗಳಲ್ಲೂ ರಜೆ.
ಸೆಪ್ಟೆಂಬರ್ 11: ಭಾನುವಾರ
ಸೆಪ್ಟೆಂಬರ್ 18: ಭಾನುವಾರ
ಸೆಪ್ಟೆಂಬರ್ 21: ಶ್ರೀನಾರಾಯಣ ಗುರು ಸಮಾಧಿ ದಿನದ ಹಿನ್ನೆಲೆ ಕೊಚ್ಚಿ ಹಾಗೂ ತಿರುವನಂತಪುರಂನಲ್ಲಿ ರಜೆ
ಸೆಪ್ಟೆಂಬರ್ 24: ನಾಲ್ಕನೇ ಶನಿವಾರ
ಸೆಪ್ಟೆಂಬರ್ 25: ಭಾನುವಾರ
ಸೆಪ್ಟೆಂಬರ್ 26: ನವರಾತ್ರಿ ಸ್ಥಾಪನ ಹಿನ್ನೆಲೆಯಲ್ಲಿ ಇಂಫಾಲ್ ಹಾಗೂ ಜೈಪುರದಲ್ಲಿ ಬ್ಯಾಂಕುಗಳಿಗೆ ರಜೆ.