ಓಟಿಟಿ ವೀಕ್ಷಕರಿಗೆ ಈ ತಿಂಗಳು ಭರ್ಜರಿ ಟ್ರೀಟ್ ಸಿಗಲಿದೆ. ಸೆಪ್ಟೆಂಬರ್ ತಿಂಗಳಲ್ಲಿ ದೊಡ್ಡ ನಿರೀಕ್ಷೆ ಮೂಡಿಸಿರುವ ಐದು ಚಲನಚಿತ್ರಗಳು ವಿವಿಧ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆ ಆಗಲು ಸಜ್ಜಾಗಿವೆ. ಸ್ಟಾರ್ ನಟರ ಅಭಿನಯ, ವಿಭಿನ್ನ ಕಥಾವಸ್ತು ಹಾಗೂ ತಂತ್ರಜ್ಞಾನ ಶೈಲಿಯ ಚಿತ್ರಣದಿಂದ ಈ ಸಿನಿಮಾಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದಿವೆ.
ಈಗ ಈ ಎಲ್ಲ ಚಿತ್ರಗಳನ್ನು ಮನೆಬಾಗಿಲಿಗೇ ತರುತ್ತಿರುವ ಓಟಿಟಿ, ಸಿನಿಮಾ ಪ್ರೇಮಿಗಳಿಗೆ ಒಳ್ಳೆಯ ಅವಕಾಶ ಒದಗಿಸಿದೆ. OTT ಪ್ಲಾಟ್‌ಫಾರ್ಮ್‌ನಲ್ಲಿ ಒಂದಕ್ಕಿಂತ ಒಂದು ದೊಡ್ಡ ಸಿನಿಮಾಗಳು ಬಿಡುಗಡೆಯಾಗಲಿವೆ. ಸೆಪ್ಟೆಂಬರ್ ತಿಂಗಳಲ್ಲಿ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಟಾಪ್ ೫ ಸಿನಿಮಾಗಳು ಯಾವ್ದು ಅನ್ನೋದನ್ನ ನೋಡ್ತಾ ಹೋಗೋಣ
ಮೊದಲನೆಯದಾಗಿ
1. ಸೈಯಾರಾ
ಸೆಪ್ಟೆಂಬರ್ 12 ರಂದು ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ. ಮೋಹಿತ್ ಸೂರಿ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಮೂಲಕ ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ರೊಮ್ಯಾಂಟಿಕ್ ಡ್ರಾಮಾ ಪ್ರಕಾರದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಗಳಿಸಿದೆ. 2025ರ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಹೊರಹೊಮ್ಮಿದೆ. ಹೃದಯ ಮುಟ್ಟುವಂತಹ ಕಥೆ, ಹಿಟ್ ಹಾಡುಗಳು ಚಿತ್ರಕ್ಕೆ ವಿಶಿಷ್ಟತೆ ನೀಡಿದೆ.
2. ಮಲಿಕ್
ಮಲಿಕ್ ಸಿನಿಮಾ ಸೆಪ್ಟೆಂಬರ್ 5 ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ವಿಡಿಯೋ ಬಿಡುಗಡೆಯಾಗಲಿದೆ. ಪುಲ್ಕಿತ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ರಾಜ್‌ಕುಮಾರ್ ರಾವ್, ಪ್ರೊಸೆನ್ ಜಿತ್ ಚಟರ್ಜಿ ಮತ್ತು ಮಾನುಷಿ ಚಿಲ್ಲರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ನಿರಂತರ ತೀವ್ರತೆ, ಪ್ರಾಮಾಣಿಕ ಕಥಾವಸ್ತು ಮತ್ತು ಭರ್ಜರಿ ನಿರ್ವಹಣೆಯಿಂದ ಕೂಡಿದ ಈ ಚಿತ್ರ, ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದೆ.
3. ಇನ್ಸ್‌ಪೆಕ್ಟರ್ ಝೆಂಡೆ
ಈ ಸಿನೆಮಾ ಕೂಡ ಸೆಪ್ಟೆಂಬರ್ 5 ಕ್ಕೆ ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ. ಹಾಸ್ಯ ಹಾಗೂ ಥ್ರಿಲ್ಲರ್ ಮಿಶ್ರಣವಿರುವ ಈ ಚಿತ್ರವನ್ನು ಚಿನ್ಮಯ್ ಮಾಂಡ್ಲೇಕರ್ ಬರೆದು ನಿರ್ದೇಶಿಸಿದ್ದಾರೆ. ಮನೋಜ್ ಬಾಜ್‌ಪೇಯಿ ಇನ್ಸ್‌ಪೆಕ್ಟರ್ ಮಧುಕರ್ ಝೆಂಡೆ ಪಾತ್ರದಲ್ಲಿ ಮೆರೆದಿದ್ದಾರೆ. ಈ ಪಾತ್ರವು ಚಾರ್ಲ್ಸ್ ಶೋಭರಾಜ್‌ನಿಂದ ಪ್ರೇರಿತವಾಗಿದೆ.
4. ಕೂಲಿ
ಕೂಲಿ ಸಿನಿಮಾ ರಜನಿಕಾಂತ್ ಅವರ ಬಹುನಿರೀಕ್ಷಿತ ಚಿತ್ರ. ಈ ಚಿತ್ರದಲ್ಲಿ ನಾಗಾರ್ಜುನ, ಶ್ರುತಿ ಹಾಸನ್, ಸೌಬಿನ್ ಶಾಹಿರ್, ಸತ್ಯರಾಜ್, ಉಪೇಂದ್ರ ಮತ್ತು ರಚಿತಾ ರಾಮ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಲೋಕೇಶ್ ಕನಕರಾಜ್ ಅವರ ನಿರ್ದೇಶನ ಮಾಡಿದ್ದಾರೆ. ಇನ್ನು ಈ ಸಿನೆಮಾ ಸೆಪ್ಟೆಂಬರ್ 11ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ.
5. ಸು ಫ್ರಮ್ ಸೋ
ಕನ್ನಡ ಚಿತ್ರರಂಗದಲ್ಲಿ ಭರ್ಜರಿ ಯಶಸ್ಸು ಕಂಡ ಸಿನೆಮಾ. ರಾಜ್ ಬಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಜೆಪಿ ತುಮಿನಾಡ್ ನಿರ್ದೇಶಿಸಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸಾಕಷ್ಟು ಗಮನಸೆಳೆದಿದೆ. ಬೇರೆ ಬ್ರೆ ಭಾಷೆಗಳಲ್ಲೂ ಕೂಡ ಬಿಡುಗಡೆಯಾಗಿ ಅದ್ದೂರಿ ಪ್ರದರ್ಶನ ಕಂಡಿದೆ. ಇದೀಗ ಈ ಸಿನಿಮಾ ಕೂಡ ಈ ತಿಂಗಳು ಹಾಟ್ಸ್ಟಾರ್ ಒಟಿಟಿಯಲ್ಲಿ ಬಿಡುಗಡೆ ಆಗೋ ಸಾಧ್ಯತೆ ಇದೆ.
ವಿವಿಧ ಭಾಷೆಗಳಲ್ಲಿ, ವಿಭಿನ್ನ ಶೈಲಿಯಲ್ಲಿ ಮೂಡಿಬಂದ ಈ ಐದು ಪ್ರಮುಖ ಚಿತ್ರಗಳು ಪ್ರೇಕ್ಷಕರಿಗೆ ಮನೆಯಲ್ಲಿಯೇ ಮಲ್ಟಿಪ್ಲೆಕ್ಸ್ ಅನುಭವ ನೀಡಲಿವೆ. ಸೆಪ್ಟೆಂಬರ್ ತಿಂಗಳು ಸಿನಿಮಾ ಪ್ರೇಮಿಗಳಿಗೆ ನಿಜಕ್ಕೂ Entertainment fest ಆಗಲಿದೆ.

