Saturday, December 21, 2024

Latest Posts

‘ಸೆಪ್ಟಂಬರ್ 13′ ಚಿತ್ರದ ಪೋಸ್ಟರ್ ರಿಲೀಸ್ ಮಾಡಿ ಶುಭ ಹಾರೈಸಿದ ಮಮ್ಮುಟ್ಟಿ

- Advertisement -

Film News:

ಕೊರೋನಾ ಸಂದಿಗ್ದ ಪರಿಸ್ಥಿತಿಯಲ್ಲಿ ದಾದಿಯರ ಸೇವೆ, ತ್ಯಾಗವನ್ನು ಬಿಂಬಿಸುವ ಸೆಪ್ಟೆಂಬರ್ 13 ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಶೀಘ್ರದಲ್ಲಿಯೇ ತೆರೆಗೆ ಬರಲಿರುವ ಈ ಚಿತ್ರದ ಹೊಸ ಪೋಸ್ಟರ್ ನ್ನು ಮಾಲಿವುಡ್ ಚಿತ್ರರಂಗದ ಖ್ಯಾತ ನಟ ಮಮ್ಮುಟ್ಟಿ ಬಿಡುಗಡೆ ಮಾಡಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ರುಬಿ ಫಿಲ್ಮಂಸ್ ನಡಿ ಮಾಜಿ ಶಾಸಕ ಇವಾನ್ ನಿಗ್ಲಿ ಕಥೆ ಬರೆದು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.ಹೆಸರಾಂತ ನಿರ್ಮಾಪಕ ಡಾ.ರಾಜ ಬಾಲಕೃಷ್ಣನ್ ಈ ಸಿನಿಮಾಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಸಂಕಲನ, ಛಾಯಾಗ್ರಾಹಣ ಜವಾಬ್ದಾರಿಯನ್ನೂ ನಿಭಾಯಿಸಿ ಸಿನಿಮಾದಲ್ಲಿ ಖಳನಾಯಕನಾಗಿಯೂ ಬಣ್ಣ ಹಚ್ಚಿದ್ದಾರೆ.

‘ಸೆಪ್ಟಂಬರ್ 13′ ಸಿನಿಮಾದಲ್ಲಿ ಹಿರಿಯ ಕಲಾವಿದರಾದ ವಿನಯ ಪ್ರಸಾದ್, ಜೈ ಜಗದೀಶ್, ಯಮುನಾ ಶ್ರೀನಿಧಿ ನಟಿಸಿದ್ದು, ಶ್ರೀಯಾರಿಧಿಬನ್ ನಾಯಕಿಯಾಗಿ ಈ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರೀಗೆ ಪಾದಾರ್ಪಣೆ ಮಾಡಿದ್ದಾರೆ. ಉಳಿದಂತೆ ಒಂದಷ್ಟು ಯುವ ಪ್ರತಿಭೆಗಳು ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಶೀರ್ಘದಲ್ಲಿ ಸಿನಿಮಾವನ್ನು ತೆರೆಗೆ ತರಲು ಸಜ್ಜಾಗಿದೆ.

ಎದೆಬಡಿದುಕೊಂಡು ಗಳಗಳನೆ ಅತ್ತ ಜಯಶ್ರೀ…! ಬಿಗ್ ಬಾಸ್ ಮನೆಯಲ್ಲೊಂದು ಮನಕಳುಕುವ ಸಂಗತಿ..!

ಹೊನ್ನಾವರ ತಾಲೂಕಿನಲ್ಲಿ ದರ್ಶನ್ ಅಭಿಮಾನಿಗಳಿಂದ ಕ್ರಾಂತಿ ಸಿನಿಮಾ ಪ್ರೊಮೋಷನ್

ಸೋನು ಗೌಡ ಜೈಲಲ್ಲಿ ಸೆರೆಯಾಗಿದ್ದೇಕೆ..?!

- Advertisement -

Latest Posts

Don't Miss