Serial News : ಕಿರುತೆರೆ ಇತಿಹಾಸದಲ್ಲಿ ಆ ಒಂದು ಸೀರಿಯಲ್ ಇದೀಗ ಹೊಸ ದಾಖಲೆ ಬರೆದಿದೆ. ಟೈಟಲ್ ಸಾಂಗ್ ಮೂಲಕವೇ ಆ ಸೀರಿಯಲ್ ಇದೀಗ ಸದ್ದು ಮಾಡುತ್ತಿದೆ. ಕಿರುತೆರೆ ಸೀರಿಯಲ್ ತಂಡ ಒಂದು ವಿಭಿನ್ನ ಪ್ರಯತ್ನ ಮಾಡಿ ಸುದ್ದಿಯಲ್ಲಿದೆ ಹಾಗಿದ್ರೆ ಏನು ಆ ಹೊಸ ದಾಖಲೆ ಯಾವುದು ಆ ಸೀರಿಯಲ್ ಹೇಳ್ತೀವಿ ಈ ಸ್ಟೋರಿಯಲ್ಲಿ…..
ಜೀ ಕನ್ನಡದಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರಾವಾಹಿ ಇದೀಗ ಹೊಸ ಮೈಲಿಗಲ್ಲಿಗೆ ಹೆಜ್ಜೆ ಹಾಕಿದೆ. ಅಮೃತಧಾರೆ ಧಾರಾವಾಹಿ ಪ್ರಸಾರ ಆರಂಭಿಸಿ ಹಲವು ದಿನಗಳು ಕಳೆದಿವೆ. ಈಗ ಈ ಧಾರಾವಾಹಿ ಹೊಸ ಸಾಧನೆ ಮಾಡಿದೆ. ಧಾರಾವಾಹಿಗಳಿಗೆ ಟೈಟಲ್ ಸಾಂಗ್ ಬಹಳ ಮುಖ್ಯವಾಗುತ್ತದೆ.
ಅಮೃತಧಾರೆ ಹಾಡಿನ ಜೂಕ್ ಬಾಕ್ಸ್ ರಿಲೀಸ್ ಮಾಡಲಾಗಿದೆ. ಕಿರುತೆರೆ ಇತಿಹಾಸದಲ್ಲಿ ಧಾರಾವಾಹಿಯ ಹಾಡಿಗೆ ಜೂಕ್ ಬಾಕ್ಸ್ ರಿಲೀಸ್ ಆಗಿದ್ದು ಇದೇ ಮೊದಲು ಎಂದು ಜೀ ಕನ್ನಡ ವಾಹಿನಿ ಹೇಳಿಕೊಂಡಿದೆ. ಸಾಮಾನ್ಯವಾಗಿ ಸಿನಿಮಾ ಹಾಡುಗಳಿಗೆ ಜೂಕ್ ಬಾಕ್ಸ್ ಸಿದ್ಧಪಡಿಸಲಾಗುತ್ತದೆ. ಆದರೆ ಇಲ್ಲಿ ಧಾರಾವಾಹಿ ಹಾಡಿಗೆ ಜೂಕ್ ಬಾಕ್ಸ್ ಸಿದ್ಧವಾಗಿರೋದು ಹೊಸ ಮೈಲಿಗಲ್ಲು.
ಜೂಕ್ ಬಾಕ್ಸ್ ಅಂದರೆ ಎಲ್ಲಾ ಹಾಡುಗಳು ಒಂದೇ ಕಡೆಗೆ ಲಭ್ಯವಾಗುತ್ತವೆ. ಅದೇ ರೀತಿ, ಧಾರಾವಾಹಿಗೂ ಜ್ಯೂಕ್ಬಾಕ್ಸ್ ಸಿದ್ಧಪಡಿಸಲಾಗಿದೆ. ‘ಅಮೃತಧಾರೆ’ ಧಾರಾವಾಹಿಯ ‘ನಾ ಭುವಿಯಂತೆ ಕಾದೆ..’ ‘ಏನೋ ನವಿರಾದ ಭಾವ..’, ‘ನಿನ್ನವರ ನಗುವಲಿ..’, ‘ಒಡನಾಡಿ ಬೇಕಿದೆ..’, ‘ಸನಿಹ ಸೆಳೆದಂತೆ..’ ‘ಬೆಳಗುವ ದೀಪವು..’ ‘ಜೊತೆ ಸಾಗೋ ಕನಸಿದೆ..’, ‘ತನ್ನವರ ಬದುಕಲಿ..’, ‘ಯಾರೋ ಕರೆದಂತೆ ಹೆಸರ..’ ಹಾಡುಗಳು ಈ ಜೂಕ್ ಬಾಕ್ಸ್ನಲ್ಲಿ ಲಭ್ಯವಿದೆ. ‘ಅಮೃತಧಾರೆ’ ಧಾರಾವಾಹಿಯ ಜೂಕ್ ಬಾಕ್ಸ್ ಅವಧಿ 14:46 ನಿಮಿಷ ಇದೆ ಎನ್ನಲಾಗಿದೆ.
https://www.instagram.com/p/CvUbAn3B4re/
Baby movie: ಸದ್ಯದಲ್ಲೇ ಒಟಿಟಿಗೆ ಲಗ್ಗೆ ಇಡಲಿದೆ ತೆಲುಗಿನ ಬೇಬಿ ಸಿನಿಮಾ
Samyukta Hegde : ಕಿರಿಕ್ ಬೆಡಗಿಯ ಕಥೆ ಏನು..?! ಭಾವುಕ ಪೋಸ್ಟ್ ಹಿನ್ನೆಲೆ ಇದು….!
Dharshan : ವಿದೇಶದಲ್ಲಿ ಸ್ನೇಹಿತರ ಜೊತೆ ಜಾಲಿ ಮೂಡ್ ನಲ್ಲಿರುವ ದಚ್ಚು …..!

