www.karnatakatv.net : ಹುಬ್ಬಳ್ಳಿ: ಅದು ಅವಳಿನಗರದ ಬಹು ಮಹತ್ವಪೂರ್ಣ ಯೋಜನೆ. ಸಮಸ್ಯೆ ಬಗೆಹರೆಯುತ್ತದೆ ಎಂದುಕೊಂಡಿದ್ದ ಜನರಿಗೆ ಇದುವರೆಗೂ ಕನಸಾಗಿಯೇ ಉಳಿದಿದೆ. ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವ ಸಮಸ್ಯೆ ಬ್ರೇಕ್ ಬಿಳುತ್ತದೇ ಎಂದುಕೊಂಡಿದ್ದ ಯೋಜನೆ ಕಂಪ್ಲಿಟ್ ಆದರೂ ಕೂಡ ಉದ್ಘಾಟನೆ ಆಗದೇ ಉಳಿದಿದೆ.
ಅವಳಿನಗರದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ಫಜಲ್ ಪಾರ್ಕಿಂಗ್ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿತ್ತು. ಅಲ್ಲದೇ ಫೆಬ್ರವರಿ ತಿಂಗಳಲ್ಲಿ ಕಾರ್ಯಾರಂಭ ಮಾಡುವ ಭರವಸೆಯನ್ನು ಕೂಡ ನೀಡಿದ್ದರು. ಆದರೆ ಫೆಬ್ರವರಿ ತಿಂಗಳು ಕಳೆದು ಅಗಸ್ಟ ಬಂದರೂ ಇದುವರೆಗೂ ಕಾರ್ಯಾರಂಭ ಮಾಡಿಲ್ಲ. ಅಲ್ಲದೇ ಕಾಮಗಾರಿ ಪೂರ್ಣಗೊಂಡಿರುವ ಬಗ್ಗೆ ಗುತ್ತಿಗೆದಾರರು ಸ್ಮಾರ್ಟ್ ಸಿಟಿ ಇಲಾಖೆಗೆ ತಿಳಿಸಿದ್ದಾರೆ. ಆದರೆ ಸ್ಮಾರ್ಟ್ ಸಿಟಿ ಹಾಗೂ ಪಾಲಿಕೆಯ ಸಂವಹನದ ಕೊರತೆಯಿಂದ ಆರು ತಿಂಗಳು ಕಳೆದರೂ ಇದುವರೆಗೂ ಚಾಲನೆ ಸಿಕ್ಕಿಲ್ಲ. ಇನ್ನೂ ಈ ಬಗ್ಗೆ ಪಾಲಿಕೆ ಆಯುಕ್ತರೇ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನೂ ಹುಬ್ಬಳ್ಳಿ-ಧಾರವಾಡ್ ಸ್ಮಾರ್ಟ್ ಸಿಟಿ ಲಿಮಿಟೆಡ್ ಫಜಲ್ ಪಾರ್ಕಿಂಗ್ ಸೌಲಭ್ಯವನ್ನು ಒದಗಿಸುತ್ತಿದೆ. ಈ ಹಿನ್ನಲೆಯಲ್ಲಿ ಗುತ್ತಿಗೆದಾರರು ಪಾರ್ಕಿಂಗ್ ಸೌಲಭ್ಯ ನಿರ್ಮಾಣ ಮತ್ತು ನಿರ್ವಹಣೆಗಾಗಿ ಟೆಂಡರ್ ಸ್ವೀಕರಿಸಿದ್ದಾರೆ. ಆದರೆ ಕಾಮಗಾರಿ ಪೂರ್ಣಗೊಂಡರು ಕೂಡ ಕಾರ್ಯಾರಂಭ ಮಾಡಿಲ್ಲ. ಈ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿಯ ಯೋಜನೆ ಆಡೋಣ ಬಾ ಕೆಡಿಸೋಣ ಬಾ ಎನ್ನುವಂತಾಗಿದೆ. ನಿರ್ಮಾಣ ಕಾಮಗಾರಿ ಏನೋ ಚುರುಕುಗೊಂಡಿತ್ತು ನಿಜ. ಆದರೆ ಇದುವರೆಗೂ ಕಾರ್ಯಾರಂಭ ಮಾಡದೇ ಇರುವುದರಿಂದ ಗುತ್ತಿಗೆದಾರರು ನಿರ್ವಹಣೆ ವೆಚ್ಚ ಬರಿಸಲು ಹೆಣಗಾಡುವಂತಾಗಿದೆ. ಇನ್ನೂ ಈ ಕುರಿತು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದಲ್ಲಿ ಮೊದಲನೆಯದಾದ ಈ ಹೊಸ ಸೌಲಭ್ಯವನ್ನು 180 ಚದರ ಮೀಟರ್‌ನಲ್ಲಿ 4.59 ಕೋಟಿ ರೂ.ಗಳ ವೆಚ್ಚದಲ್ಲಿ ಮಹಾತ್ಮ ಗಾಂಧಿ ಉದ್ಯಾನದಲ್ಲಿ ನಿರ್ಮಿಸಲಾಗಿದೆ. ವಿದ್ಯುತ್ಕಾಂತೀಯ ಸೌಲಭ್ಯವು ವಾಹನಗಳನ್ನು ಎತ್ತುವಂತೆ ಮತ್ತು ಯಾವುದೇ ತೊಂದರೆಯಿಲ್ಲದೆ ಒದಗಿಸಲಾದ ಸೀಮಿತ ಪ್ರದೇಶದಲ್ಲಿ ನಿಲ್ಲಿಸಲು ಸಹಾಯ ಮಾಡುತ್ತದೆ. ಆದರೆ ಎಲ್ಲ ಪೂರ್ಣಗೊಂಡರು ಇದುವರೆಗೂ ಆರಂಭವಾಗದೇ ಇರುವುದು ವಿಪರ್ಯಾಸಕರ ಸಂಗತಿಯಾಗಿದೆ.
ಕರ್ನಾಟಕ ಟಿವಿ ಹುಬ್ಬಳ್ಳಿ