ರಾಜ್ಯದಲ್ಲಿ ಮುಂದಿನ ಕೆಲವು ದಿನಗಳು ಒಣಹವೆಯೇ ಮುಂದುವರಿಯಲಿದೆ. ವಾರಾಂತ್ಯದಲ್ಲಿ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದಲ್ಲದೆ, ಮಲಾಕ್ಕಾ ಜಲಸಂಧಿ–ಈಶಾನ್ಯ ಇಂಡೋನೇಷ್ಯಾ ಪ್ರದೇಶದಲ್ಲಿ ಉಂಟಾದ ‘ಸೆನ್ಯಾರ್’ ಚಂಡಮಾರುತದ ಪರಿಣಾಮವಾಗಿ ಈಗಿನ ದಿನಗಳಲ್ಲಿ ಚಳಿ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದೆ.
ಆದರೆ ಡಿಸೆಂಬರ್ 1ರಿಂದ ರಾಜ್ಯದಾದ್ಯಂತ ತಾಪಮಾನ ಕುಸಿದು ಚಳಿ ಭಾರಿಯಾಗಿ ಹೆಚ್ಚಲಿದೆ ಎಂದು ಇಲಾಖೆ ಎಚ್ಚರಿಸಿದೆ. ಸೆನ್ಯಾರ್ ಚಂಡಮಾರುತ ಕಳೆದ 6 ಗಂಟೆಗಳಲ್ಲಿ ಪಶ್ಚಿಮ-ನೈಋತ್ಯ ದಿಕ್ಕಿನಲ್ಲಿ ಗಂಟೆಗೆ ಸುಮಾರು 13 ಕಿಮೀ ವೇಗದಲ್ಲಿ ಚಲಿಸಿದೆ. ಇದು ಇಂಡೋನೇಷ್ಯಾ ಕರಾವಳಿಯನ್ನು ದಾಟಿದ್ದು, ನವೆಂಬರ್ 27ರ ಮುಂಜಾನೆವರೆಗೆ ತನ್ನ ತೀವ್ರತೆಯನ್ನು ಕಾಯ್ದುಕೊಳ್ಳುವ ಸಾಧ್ಯತೆಗಳಿವೆ.
ನಂತರ ಇದು ಪೂರ್ವಕ್ಕೆ ತಿರುಗಿ ದುರ್ಬಲಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಸೆನ್ಯಾರ್ ಚಂಡಮಾರುತದ ಪರಿಣಾಮವಾಗಿ ಬಂಗಾಳ ಉಪಸಾಗರದಿಂದ ಬರುವ ಗಾಳಿಯಲ್ಲಿ ತೇವಾಂಶ ಹೆಚ್ಚಾಗುವುದರಿಂದ ಈಗಿನ ದಿನಗಳಲ್ಲಿ ರಾತ್ರಿಯ ತಾಪಮಾನ ಸ್ವಲ್ಪ ಏರಿಕೆ ಕಂಡು ಚಳಿ ಕಡಿಮೆಯಾಗಲಿದೆ. ಆದರೆ ಡಿಸೆಂಬರ್ 1ರಿಂದ ರಾಜ್ಯದಾದ್ಯಂತ ಚಳಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಳಿ ಹೆಚ್ಚಾಗುವ ಅಲರ್ಟ್ ಎಲ್ಲೆಲ್ಲಿ ಇದೆ? ಅನ್ನೋದನ್ನ ನೋಡೋದಾದ್ರೆ
ಪ್ರಮುಖವಾಗಿ ಉತ್ತರ ಒಳನಾಡಲ್ಲಿ ಕಲಬುರ್ಗಿ, ಬೀದರ್, ವಿಜಯಪುರ, ಬಾಗಲಕೋಟೆ, ಧಾರವಾಡ, ರಾಯಚೂರು, ಯಾದಗಿರಿ , ಬೆಳಗಾವಿಯಲ್ಲಿ ಚಳಿ ಹೆಚ್ಚಾಗುತ್ತಿದೆ ಎಂದಿದ್ದಾರೆ ಹವಾಮಾನ ತಜ್ಞರು ತಿಳಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ

