Political News: ಪ್ರಜ್ವಲ್ ರೇವಣ್ಣ ಸಹೋದರ ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪವಿದ್ದು, ಹಾಸನದ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಎಫ್‌ಐಆರ್ ದಾಖಲಿಸಿದ್ದಾನೆ.
ಕೆಲಸ ಕೇಳಿಕೊಂಡು ಹೋಗಿದ್ದ ಯುವಕನ ಮೇಲೆ ಸೂರಜ್ ರೇವಣ್ಣ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪ ಮಾಡಲಾಗಿತ್ತು. ಸೂರಜ್ ರೇವಣ್ಣ ಆಪ್ತ ಶಿವಕುಮಾರ್, ಸಂತ್ರಸ್ತನ ವಿರುದ್ಧ ದೂರು ದಾಖಲಿಸಿದ್ದು, ಅವನು ನನ್ನ ಬಳಿ, ನಿಮ್ಮ ಬಾಸ್ ಹತ್ತಿರ ಕೆಲಸ ಕೊಡಿಸು ಎಂದು ಕೇಳಿದ್ದ. ಹಾಗಾಗಿ ಸೂರಜ್ ರೇವಣ್ಣ ಫೋನ್ ನಂಬರ್ ಕೊಟ್ಟು, ನೀನೇ ಕೆಲಸ ಕೇಳು ಎಂದಿದ್ದೆ. ಅವನು ಕೆಲಸ ಕೇಳಿದ್ದ. ಆದರೆ ಕೆಲಸ ಸಿಗದ ಕಾರಣ, ಈ ರೀತಿ ಮಾಡಿದ್ದಾನೆ.
ನನಗೆ ಹಣದ ಅವಶ್ಯಕತೆ ಇದೆ. ಆದರೆ ನಿಮ್ಮ ಬಾಸ್ ನನಗೆ ಕೆಲಸ ಕೊಡಲಿಲ್ಲ. ನಾನು ಅವರ ಮೇಲೆ ಕೇಸ್ ಹಾಕುತ್ತೇನೆ. 5 ಕೋಟಿ ಕೊಡಿಸು, ಸಾಧ್ಯವಾಗದೇ ಇದ್ದಲ್ಲಿ 3 ಕೋಟಿಯಾದರೂ ಕೊಡಿಸು. ನನ್ನ ಫ್ಯಾಮಿಲಿ ಕಷ್ಟದಲ್ಲಿದೆ. ನನಗೆ ದುಡ್ಡಿನ ಅವಶ್ಯಕತೆ ಇದೆ. ನನಗೆ ಹಣ ಸಿಗದಿದ್ದಲ್ಲಿ, ನಾನು ನಿಮ್ಮ ಬಾಸ್ ಮೇಲೆ ಆರೋಪ ಹಾಕಿ, ಕೇಸ್ ಹಾಕುತ್ತೇನೆ. ಮಾಧ್ಯಮದವರ ಬಳಿ ಹೋಗುತ್ತೇನೆ ಎಂದು ಹೇಳಿದ್ದನೆಂದು ಆರೋಪಿಸಿ, ಸೂರಜ್ ಆಪ್ತ ಶಿವಕುಮಾರ್, ಸಂತ್ರಸ್ತನ ವಿರುದ್ಧ ದೂರು ದಾಖಲಿಸಿದ್ದರು. ಇದೀಗ, ಸಂತ್ರಸ್ತ ಕೂಡ ಸೂರಜ್ ರೇವಣ್ಣ ವಿರುದ್ಧ ದೂರು ದಾಖಲಿಸಿದ್ದಾನೆ.
ಅಲ್ಲದೇ, ಸೂರಜ್ ರೇವಣ್ಣ ಮತ್ತು ಸಂತ್ರಸ್ತ ಮಾತನಾಡಿದ್ದಾರೆ ಅಂತ ಹೇಳಲಾಗಿರುವ ಆಡಿಯೋ ತುಣುಕು ಲಭ್ಯವಾಗಿದ್ದು, ಇದರಲ್ಲಿ ಸೂರಜ್ ಆ ಯುವಕನಿಗೆ ನಿನಗೆ ಬೇಕಾದಷ್ಟು ದುಡ್ಡು ಕೊಡುತ್ತೇನೆ ಸುಮ್ಮನಿರು ಅಂತಾ ಹೇಳಿದ್ದಾರೆನ್ನಲಾಗಿದೆ.