ಶಾರುಖ್‌ ಖಾನ್‌ ವಿನಯಕ್ಕೆ ನೆಟ್ಟಿಗರ ಮೆಚ್ಚುಗೆ!

ಬಾಲಿವುಡ್‌ನ ಕಿಂಗ್‌ ಎಂದೇ ಶಾರುಖ್‌ ಖಾನ್‌ ಖ್ಯಾತರಾಗಿದ್ದಾರೆ. 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದೆ. ಈ ಸಮಾರಂಭದಲ್ಲಿ ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದಾರೆ. ಅಮಿತಾಬ್‌ ಮತ್ತು ರಜನಿಕಾಂತ್‌ ಸಹ ಇದ್ದಾರೆ. ಈ ಸಮಾರಂಭಕ್ಕೆ ರಾಣಿ ಮುಖರ್ಜಿ ಸಹ ಆಗಮಿಸಿದ್ದಾರೆ.

ಅವರನ್ನು ನೋಡುತ್ತಿದ್ದಂತೆ ಶಾರುಖ್‌ ಕೈ ಮುಗಿದಿದ್ದಾರೆ. ಸಚಿನ್ ತೆಂಡೂಲ್ಕರ್‌ ಗೆ ಶೇಖ್ ಹ್ಯಾಂಡ್ ಮಾಡಿದ್ದಾರೆ. ಅಮಿತಾಬ್‌ ಬಚ್ಚನ್ ಹಾಗೂ ಜಯಾ ಬಚ್ಚನ್ ಅವರನ್ನು ಕಂಡ ಕೂಡಲೇ ಕಾಲಿಗೆ ನಮಸ್ಕರಿಸುತ್ತಾರೆ. ಶಾರುಖ್ ಖಾನ್ ಅವರ ಈ ನಡವಳಿಕೆ ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ.

ಶಾರುಖ್ ಖಾನ್ ಏಳು ಸಾವಿರ ಕೋಟಿ ರೂಪಾಯಿ ಆಸ್ತಿಗೆ ಒಡೆಯ ಭಾರತದ ಅತ್ಯಂತ ಶ್ರೀಮಂತ ನಟ. ಜಗತ್ತಿನ ಅತ್ಯಂತ ಶ್ರೀಮಂತ ನಟರ ಪಟ್ಟಿಯಲ್ಲಿ ಶಾರುಖ್‌ ಖಾನ್‌ ಹೆಸರಿದೆ. ಅವರು ನೀಡಿದ ಹಿಟ್ ಚಿತ್ರಗಳ ಸಾಲು ತುಂಬಾನೇ ದೊಡ್ಡದಿದೆ.

‘ಪಠಾಣ್’ ಹಾಗೂ ‘ಜವಾನ್’ ಎರಡೂ ಸಿನಿಮಾಗಳು ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿವೆ. ಅದುಕೂಡ ಒಂದೇ ವರ್ಷ. ಈ ರೀತಿಯ ಅಪರೂಪದ ದಾಖಲೆ ಶಾರುಖ್ ಖಾನ್ ಹೆಸರಲ್ಲಿದೆ. ಆದರೆ ಅವರು ಎಂದಿಗೂ ಅಹಂನಲ್ಲಿ ಮೆರೆದಿಲ್ಲ. ಅವರ ವ್ಯಕ್ತಿತ್ವ ಅನೇಕರಿಗೆ ಸ್ಫೂರ್ತಿಯಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author