ಶಕ್ತಿ ಯೋಜನೆಯಿಂದ ಆಟೋ ಚಾಲಕರು ಕಂಗಾಲು

ಹುಣಸೂರು : ಶಕ್ತಿಯೋಜನೆ ಜಾರಿಯಾದಾಗಿನಿಂದ ನಮ್ಮ ದುಡಿಮೆಗೆ ಕಲ್ಲು ಹಾಕಿದಂತಾಗಿದೆ ಎಂದು ಆಟೋ ಚಾಲಕರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಮಹಿಳೆಯರು ಮಾತ್ರಾನ ವೋಟ್ ಹಾಕಿರೋದು ಪುರುಷರು ಯಾರು ವೋಟ್ ಹಾಕಿಲ್ವಾ ಎಂಬುವುದಾಗಿ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಶಕ್ತಿಯೋಜನೆ ಮಾಡಿರುವುದು ಸರಿಯಲ್ಲ. ವಯಸ್ಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪ್ರಯಾಣ ಕೊಟ್ಟಿದ್ರೆ ತುಂಬಾ ಚೆನಾಗಿರ್ತಿತ್ತು. ಫ್ರೀ ಬಸ್ ಪ್ರಯಾಣ ಕೊಟ್ಟಿರುವುದರಿಂದ ನಮ್ಮ ಆಟೋರಿಕ್ಷಾಗಳಲ್ಲಿ ಮಹಿಳೆಯರು ಕೂಡ ಪ್ರಯಾಣ ಮಾಡುತ್ತಿಲ್ಲ. ಶಕ್ತಿ ಯೋಜನೆ ನಮ್ಮ ದುಡಿಮೆಗೆ ಕಲ್ಲು ಹಾಕಿರುವಂತಿದೆಅದರಿಂದ ಶಕ್ತಿ ಯೋಜನೆ ವಾಪಸ್ ತೆಗೆದುಕೊಂಡು ವಿದ್ಯಾರ್ಥಿಗಳಿಗೆ ವಯಸ್ಕರರಿಗೆ ಕೊಟ್ಟರೆ ಸಾಕು, ಶಕ್ತಿ ಯೋಜನೆ ಬಂದ ಮೇಲಿಂದ ನಮಗೆ ಸರಿಯಾದ ಸಮಯಕ್ಕೆ ಸಾಲಗಳನ್ನು ಕಟ್ಟುವುದಕ್ಕಾಗುತ್ತಿಲ್ಲ ಮನೆ ನೆಡೆಸಲು ಬಹಳ ಕಷ್ಟವಾಗ್ತಿದೆ.

ಮಹಿಳೆಯರೇ ಮಾತ್ರ ವೋಟ್ ಹಾಕಿದ್ದಾರಾ ಪುರುಷರು ಯಾರು ಕೂಡ ವೋಟ್ ಹಾಕಿಲ್ವಾ ಎನ್ನುವುದೇ ನಮ್ಮ ಪ್ರಶ್ನೆ ಎಂಬುವುದಾಗಿ ಬಹುವಾಗಿ ಆಟೋ ಚಾಲಕರು ಕರ್ನಾಟಕ ಟಿವಿ ಜೊತೆ ಅಳಲನ್ನು ತೋಡಿಕೊಂಡಿದ್ದಾರೆ.

ಈ 5 ಗುಣಗಳು ನಿಮ್ಮಲ್ಲಿದ್ದರೆ ನಿಮ್ಮ ಆರೋಗ್ಯ ಬೇಗ ಹಾಳಾಗುತ್ತದೆ..

ಹುಬ್ಬಳ್ಳಿಯಲ್ಲಿ ಯೂತ್ ಕಾಂಗ್ರೆಸ್ ನಿಂದ ಪ್ರತಿಭಟನೆ..!

ಕರಾವಳಿ ಮಳೆ ಹಾನಿಗೆ ಕೂಡಲೇ ಪರಿಹಾರ ಸೂಚಿಸುವಂತೆ ಸಿಎಂ ಸೂಚನೆ..!

About The Author