ಒಂದ್ ಕಥೆ ಹೇಳ್ಲಾ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿ ಇಟ್ಟ ಪ್ರತಿಭಾನ್ವಿತ ನಿರ್ದೇಶಕ ಕಮ್ ನಟ ಗಿರೀಶ್ ಜಿ ಸದ್ಯ ವಾವ್ಹಾ ಸಿನಿಮಾ ರಿಲೀಸ್‍ಗೆ ಎದುರು ನೋಡುತ್ತಿದ್ದಾರೆ. ಪ್ರಖ್ಯಾತ ಒಟಿಟಿಯಲ್ಲಿ ವಾವ್ಹಾ ಜುಲೈಗೆ ಕೊನೆಗೆ ರಿಲೀಸ್ ತಯಾರಿಯಲಿದ್ದು, ಇದೇ ಗ್ಯಾಪ್‍ನಲ್ಲಿ ಗಿರೀಶ್ ಮತ್ತೊಂದು ಸಿನಿಮಾಗೆ ಮುನ್ನುಡಿ ಬರೆದಿದ್ದಾರೆ. ಅದೇ ಶಾಲಿವಾಹನ ಶಕೆ.
ಮೊದಲ ಸಿನಿಮಾದಲ್ಲಿಯೇ ಗಿರೀಶ್ ತಮ್ಮದೆ ಶೈಲಿಯಲ್ಲಿ ಕಥೆ ಹೇಳಿ ತಾವೊಬ್ಬ ಪ್ರತಿಭಾನ್ವಿತ ನಿರ್ದೇಶಕ ಅನ್ನುವುದನ್ನು ತೋರಿಸಿಕೊಟ್ಟಿದ್ದರು. ಈ ಬಾರಿಯೂ ಅಂತಹದ್ದೇ ಒಂದು ಹೊಸಬಗೆಯ ಹಾಗೂ ವಿಶೇಷ ಕಥೆಯೊಂದಿಗೆ ಶಾಲಿವಾಹನ ಶಕೆ ಸಿನಿಮಾ ಮೂಲಕ ನಿಮ್ಮ ಮುಂದೆ ಹಾಜರಾಗಲು ಸಜ್ಜಾಗಿದ್ದು, ಅದರ ಮೊದಲ ಭಾಗವಾಗಿ ಚಿತ್ರದ ಟೈಟಲ್ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಡಿಜಿಟಲ್ ಸ್ಕೆಚ್ ಆರ್ಟ್ ಮೂಲಕ ತಯಾರಿಸಿರುವ ಮೋಷನ್ ಪೋಸ್ಟರ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.
ಟೈಮ್ ಥ್ರಿಲ್ಲರ್ ಕಥಾನಕದ ಈ ಸಿನಿಮಾ ಕನ್ನಡ ಇಂಡಸ್ಟ್ರೀ ಮಟ್ಟಿಗೆ ಹೊಸತದಿಂದ ಕೂಡಿದೆ. ಸದ್ಯ ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದು, ಒಂದಷ್ಟು ಹೊಸಬರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಗಿರೀಶ್ ಜಿ ಕಥೆ ಬರೆದು ನಿರ್ದೇಶನ ಮಾಡಿರುವ ಈ ಸಿನಿಮಾಗೆ ಶೈಲೇಶ್ ಕುಮಾರ್ ಎಂ.ಎಂ ಬಂಡವಾಳ ಹೂಡಿದ್ದು, ಅರುಣ್ ಸುರೇಶ್ ಛಾಯಾಗ್ರಹಣ, ಉಜ್ವಲ್ ಚಂದ್ರ ಸಂಕಲನ, ಕಾರ್ತಿಕ್ ಭೂಪತಿ-ಹರಿ ಅಜಯ್ ಸಂಗೀತ, ಪ್ರಶಾಂತ್ ವೈಎನ್ ಸಂಭಾಷಣೆ ಸಿನಿಮಾಕ್ಕಿದೆ. ಸದ್ಯ ಟೈಟಲ್ ಮೋಷನ್ ಪೋಸ್ಟರ್ ರಿಲೀಸ್ ಮಾಡಿರುವ ಚಿತ್ರತಂಡ ಶೀರ್ಘದಲ್ಲಿಯೇ ತಾರಾಬಳಗದ ಜೊತೆ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ.