ಕೊಳದ ಮಠದ ಶಾಂತವೀರ ಸ್ವಾಮೀಜಿ ಹೃದಯಾಘಾತದಿಂದ ನಿಧನ

ಬೆಂಗಳೂರು: ಕೊಳದ ಮಠದ ಡಾ.ಶಾಂತವೀರ ಸ್ವಾಮೀಜಿಯವು, ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವಂತ ಅವರ ಆಪ್ತ ಸಹಾಯಕ ವೆಂಕಟಪ್ಪ, ನಿನ್ನೆ ಸಂಜೆ ವಾಕಿಂಗ್ ಕರೆದುಕೊಂಡು ಹೋಗಿ ಬಂದಿದ್ದೆ. ರಾತ್ರಿ ತುಂಬಾ ನಮ್ಮೊಡನೆ ಚೆನ್ನಾಗಿ ಮಾತನಾಡಿದ್ರು.. ಇಂದು ಮುಂಜಾಗನ ಬಾಗಿಲು ತೆಗೆದಿರದ ಕಾರಣ, ಹೋಗಿ ನೋಡಿದೆ. ಅವರಿಗೆ ಎಚ್ಚರವಿರಲಿಲ್ಲ. ವೈದ್ಯರನ್ನು ಕರೆಸಿ, ಪರೀಕ್ಷೆ ಮಾಡಿಸಿದಾಗ, ಅವರು ಹೃದಯಾಘಾತದಿಂದ ನಿಧನರಾಗಿರೋದಾಗಿ ತಿಳಿಸಿದರು ಎಂದಿದ್ದಾರೆ.

ಅವರಿಗೆ ಯಾವುದೇ ಅನಾರೋಗ್ಯ ಸಮಸ್ಯೆ ಇರಲಿಲ್ಲ. ಆದ್ರೇ.. ಇಂದು ಬೆಳಿಗ್ಗೆ ಉಸಿರಾಡುತ್ತಿರಲಿಲ್ಲ. ಬೆಳಿಗ್ಗೆ ನೋಡಿದಾಗ ಅವರು ಇಹಲೋಕ ತ್ಯಜಿಸಿರೋದು ಗೊತ್ತಾಯಿತು ಎಂದು ಹೇಳುವ ಮೂಲಕ ಭಾವುಕರಾದರು.

 

About The Author