ವಿಕಟಕವಿ ಯೋಗರಾಜ್ ಭಟ್ಟರ ಬಹುನಿರೀಕ್ಷಿತ ಸಿನಿಮಾ ಗಾಳಿಪಟ-2. ಈಗಾಗ್ಲೇ ಒಮ್ಮೆ ಗಾಳಿಪಟ ಹಾರಿಸಿ ಸಕ್ಸಸ್ ಕಂಡಿರುವ ಭಟ್ಟರು, ಮತ್ತೆ ಹದಿಮೂರು ವರ್ಷದ ಬಳಿಕ ಗಾಳಿಪಟ-2 ಹಾರಿಸ್ತಿರೋದು ಗೊತ್ತೇ ಇದೆ.
ಗಣೇಶ್, ರಾಜೇಶ್ ಕೃಷ್ಣನ್ ಹಾಗೂ ದಿಂಗತ್ ಗಾಳಿಪಟ ಸಿನಿಮಾದಲ್ಲಿ ನಟಿಸಿದ್ದರು. ಆದ್ರೆ ಗಾಳಿಪಟ-2 ಸಿನಿಮಾದಲ್ಲಿ ರಾಜೇಶ್ ಕೃಷ್ಣನ್ ಬದಲಿಗೆ ಲೂಸಿಯಾ ಪವನ್ ಕುಮಾರ್ ನಟಿಸ್ತಿದ್ದು, ಉಳಿದಂತೆ ಗಣೇಶ್ ಹಾಗೂ ದಿಗಂತ್ ಇರಲಿದ್ದಾರೆ. ಬಟ್ ಈ ಮೂವರಿಗೆ ಯಾರು ನಾಯಕಿಯರು ಅನ್ನೋ ವಿಷ್ಯ ಮಾತ್ರ ರಿವೀಲ್ ಆಗಿರಲಿಲ್ಲ.
ಇದೀಗ ಗಾಳಿಪಟ-2 ನಟಿಮಣಿಯರ ಬಗ್ಗೆ ಇಂಟ್ ಸಿಕ್ಕಿದೆ. ಶರ್ಮಿಳಾ ಮಂಡ್ರೆ ಗಾಳಿಪಟ-2 ಸಿನಿಮಾದಲ್ಲಿ ಇರಲಿದ್ದಾರೆ ಅನ್ನೋದು ಗೊತ್ತಿತ್ತು. ಅದನ್ನ ಬಿಟ್ರೆ ಈ ಸಿನಿಮಾದಲ್ಲಿ ಮತ್ತಿಬ್ಬರು ನಾಯಕಿರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಇದೀಗ ಆ ನಟಿಮಣಿಯರ ಯಾರು ಅನ್ನೋದು ಗೊತ್ತಾಗಿದೆ.
ವೈಭವಿ ಶಾಂಡಿಲ್ಯ, ಮಲಯಾಳಂ ಚೆಲುವೆ ಸಂಯುಕ್ತಾ ಮೆನನ್ ಗಾಳಿಪಟ-2 ಸಿನಿಮಾದಲ್ಲಿ ನಟಿಸ್ತಿದ್ದಾರೆ. ಕಜಕಿಸ್ತಾನ ಹಾಗೂ ಯೂರೋಪ್ ನ ಇನ್ನು ಕೆಲವು ಸುಂದರ ಹಿಮಚ್ಛಾಧಿತ ಪ್ರದೇಶಗಳಲ್ಲಿ ಚಿತ್ರೀಕರಣದಲ್ಲಿ ಈ ನಟಿಮಣಿಯರು ಭಾಗಿಯಾಗಿದ್ದಾರೆ.