Film News: ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾದ ಪ್ರಿವ್ಯೂ ವೀಡಿಯೋ ಬಿಡುಗಡೆಯಾಗಿದೆ. ಈ ಸಿನಿಮಾಗಾಗಿ ಫ್ಯಾನ್ಸ್ ಕಾದು ಕುಳಿತಿದ್ದಾರೆ. ಈ ವಿಡಿಯೋದಲ್ಲಿ ಶಾರುಖ್ ಖಾನ್ ಅವರು ಹಲವು ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಬೋಳು ತಲೆ ಹೆಚ್ಚು ಗಮನ ಸೆಳೆದಿದೆ. ಬಾಲ್ಡ್ ಲುಕ್ ಅನ್ನು ಅಭಿಮಾನಿಗಳು ಇಷ್ಟಪಡುತ್ತಿದ್ದಾರೆ. ಇಷ್ಟೇ ಅಲ್ಲ, ಅವರ ತಲೆಯ ಮೇಲೆ ಬರೆದ ಒಂದು ವಿಚಾರ ಎಲ್ಲರ ಗಮನ ಸೆಳೆದಿದೆ.
ಶಾರುಖ್ ಟ್ಯಾಟೂದಲ್ಲಿ ‘ಮಾ ಜಗತ್ ಜನನಿ’ ಎಂದು ಬರೆದುಕೊಂಡಿದ್ದಾರೆ. ಅಂದರೆ ‘ಜಗದ ತಾಯಿ’ ಎಂದರ್ಥ. ಪ್ರಿವ್ಯೂ ವೀಡಿಯೋ ನೋಡಿದ ಅನೇಕರು ಶಾರುಖ್ ಅವರ ಹಚ್ಚೆಗೂ ಸಿನಿಮಾದ ಕಥೆಗೂ ವಿಶೇಷ ಸಂಬಂಧ ಇರಬಹುದು ಎಂದು ಹೇಳುತ್ತಿದ್ದಾರೆ. ಆ ನಂಟು ಏನೆಂಬುದು ಚಿತ್ರ ಬಿಡುಗಡೆಯ ನಂತರವಷ್ಟೇ ಗೊತ್ತಾಗಲಿದೆ.
The tattoo on #ShahRukhKhan's head from #JawanPrevue is "माँ जगत जननी " = Mother of the world.#Jawan pic.twitter.com/FOBUlxOwOl
— Manobala Vijayabalan (@ManobalaV) July 13, 2023
ShivarajKumar : ಶಿವರಾಜ್ ಕುಮಾರ್ ಕೈಯಲ್ಲಿರೋ ಸಿನಿಮಾಗಳೆಷ್ಟು ಗೊತ್ತಾ..?!
Shivaraj kumar- “ಕರಟಕ ದಮನಕ”ಹ್ಯಾಟ್ರಿಕ್ ಹೀರೋ ಶಿವಣ್ಣ ಹಾಗೂ ಡ್ಯಾನ್ಸ್ ಕಿಂಗ್ ಪ್ರಭುದೇವ