Thursday, November 21, 2024

Latest Posts

Gadag : ಬಾವಿಗೆ ಬಿದ್ದು 3 ದಿನವಾದ್ರೂ ಬದುಕಿದ್ಳು ; ಬೆಳ್ಳಂಬೆಳಗ್ಗೆ ಬಾವಿಗೆ ಬಿದ್ದಿದ್ದೇ ರೋಚಕ!

- Advertisement -

ಯಾರಾದ್ರೂ ಬಾವಿಗೆ ಬಿದ್ರೆ ಸಾಕು ಬದುಕುವುದೇ ಕಷ್ಟ. ಅಂತಹದ್ರಲ್ಲಿ ಬಾವಿಗೆ ಬಿದ್ರೂ ಸಾಯದೇ, ಅನ್ನ ನೀರಿಲ್ಲದೇ ಮೂರು ದಿನ ಕಾಲ ಇಲ್ಲೊಬ್ಬ ಮಹಿಳೆ ಬದುಕಿದ್ದಾಳೆ. ಮೂರು ದಿಳಗಳ ಕಾಲ ಈ ಮಹಿಳೆ ಬಾವಿಯಲ್ಲಿ ಹೇಗಿದ್ರು? ಗ್ರಾಮದಿಂದ ದೂರವಿದ್ದ ಬಾವಿಗೆ ಈಕೆ ಬೀಳಲು ಕಾರಣವಾದ್ರೂ ಏನು? ಗದಗದ ಮಹಿಳೆ ಸಾವನ್ನೇ ಗೆದ್ದು ಬಂದ ರೋಚಕ ಸ್ಟೋರಿ ತೋರಿಸ್ತೀವಿ ಇಂದಿನ ಈ ವೀಡಿಯೋದಲ್ಲಿ.

ಇದು ನಿಜಕ್ಕೂ ಅಚ್ಚರಿ ಪಡಲೇಬೇಕಾದ ಸಂಗತಿ. ಯಾಕಂದ್ರೆ ಬಾವಿಗೆ ಬಿದ್ದ 3 ದಿನದ ಬಳಿಕವೂ ಮಹಿಳೆ ಬದುಕಿ ಬಂದಿದ್ದಾರೆ. ಈಕೆಯ ಹೆಸ್ರು ಪಾರ್ವತಿ ವೀರಯ್ಯ ಕಲ್ಮಠ. ಮೂಲತಃ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ತೋಟಗಂಟಿ ಗ್ರಾಮದವರು. ಇವರ ಮನೆಯವ್ರು ಈಕೆ ಕಾಣೆಯಾಗಿದ್ದಾಳೆ ಎಂದು ಕಂಪ್ಲೇಟ್ ಸಹ ಕೊಟ್ಟಿದ್ದಾರೆ. ಆದರೆ ವಿಶೇಷ ಎಂಬಂತೆ ಗ್ರಾಮದಿಂದ ಸುಮಾರು ಒಂದೂವರೆ ಕಿ.ಮೀ ದೂರದ ಜಮೀನಿನಲ್ಲಿ, ಸುಮಾರು 60 ಅಡಿ ನೀರಿಲ್ಲದ ಬಾವಿಯಲ್ಲಿ 3ದಿನದ ಬಳಿಕ ಪತ್ತೆಯಾಗಿದ್ದಾಳೆ. ಸದ್ಯ ಬಾವಿಯಲ್ಲಿ ನೀರಿಲ್ಲದೆ ಇದ್ದರಿಂದ ಪ್ರಣಾಪಯಾದಿಂದ ಪರಾಗಿದ್ದಾಳೆ .

ಅಷ್ಷಕ್ಕೂ ಪಾರ್ವತಿ ಗ್ರಾಮದಿಂದ ದೂರದಲ್ಲಿದ್ದ ಬಾವಿಗೆ ಬಿದ್ದಿದಾದ್ರು ಹೇಗೆ ಅನ್ನೋದನ್ನ ಕೇಳಿದ್ರೆ ಅದು ಇನ್ನೂ ರಣರೋಚಕ. ಬೆಳಿಗ್ಗೆ ಸರಿಸುಮಾರು 5 ಗಂಟೆಗೆ ಮನೆಯಿಂದ ಹೊರಬಂದ ಪಾರ್ವತಿಗೆ, ಅಪರಿಚಿತ ಮಹಿಳೆ ಸಿಕ್ಕಿದ್ದಾಳೆ. ಆಕೆ ನೀನು ನನಗೆ ಬೇಕು, ನಿನ್ನ ಮಾಂಗಲ್ಯ ಸರ, ಕೈ ಬಳೆ, ಕಾಲುಂಗುರ ನನಗೆ ಕೊಡು ಎಂದು ಒತ್ತಾಯಿಸಿದ್ದಾಳಂತೆ. ಆದರೆ ಅದಕ್ಕೆ ಸಮ್ಮತಿಸದ ಪಾರ್ವತಿಯನ್ನ ಆ ಅಪರಿಚಿತ ಮಹಿಳೆ ಬಲವಂತವಾಗಿ ಕಣ್ಣು ಮುಚ್ಚಿ, ಕುತ್ತಿಗೆಗೆ ಕೈ ಹಾಕಿ ಏಳೆದಾಡಿ ಜಮೀನಲ್ಲಿದ್ದ ಬಾವಿಗೆ ದೂಡಿದ್ದಾಳಂತೆ. ಅಷ್ಟೇ ಮುಂದೆ ಏನಾಯ್ತು ಅಂತಾ ಪಾರ್ವತಿಗೆ ಗೊತ್ತೇ ಆಗಿಲ್ಲ.

ಆಶ್ಚರ್ಯ ಅಂದ್ರೆ ಬಾವಿಗೆ ಬಿದ್ದ 2 ದಿನಗಳವರೆಗೂ ಪಾರ್ವತಿಗೆ ಪ್ರಜ್ಞೆಯೇ ಇರಲಿಲ್ಲವಂತೆ. ಅನಂತರ ಬಂದ ಮಳೆಯಿಂದಾಗಿ ಎಚ್ಚರಗೊಂಡಿದ್ದಾಳೆ. ಆ ಬಳಿಕ ನರಳಾಡಿ, ಕೂಗಾಡಿದ್ರೂ ಯಾರಿಗೂ ಕೇಳಲಿಲ್ಲ. 3ನೇ ದಿನ ಜಮೀನಿನ ಕೆಲಸಕ್ಕೆ ಬಂದವರು ಕಿರುಚಾಟದ ಧ್ವನಿ ಕೇಳಿಸಿಕೊಂಡು ಬಾವಿ ಬಳಿ ಬಂದಿದ್ದಾರೆ. ವಿಪರ್ಯಾಸ ಅಂದ್ರೆ ಬಾವಿ ಬಳಿ ಬಂದ ಜನರಿಗೆ ಆಕೆ ಹೀನಾಯ ಸ್ಥಿತಿಯಲ್ಲಿ ಆಶ್ಚರ್ಯಗೊಂಡಿದ್ದಾರೆ. ಬಳಿಕ ಆಕೆಯ ಮಾಂಗಲ್ಯ ಸರ, ಕೈಬಳೆ, ಎಡಗಾಲಿನ ಒಂದು ಕಾಲುಂಗುರ ಇಲ್ಲದಿರುವುದು ಆಕೆಯ ಗಮನಕ್ಕೆ ಬಂದಿದೆ. ಅದು ಎಲ್ಲಿದೆ ಎಂದು ಕೇಳಿದಾಗ ನಡೆದ ವಿಚಾರವನ್ನು ತಿಳಿಸಿದ್ದಾಳೆ. ಆನಂತರದಲ್ಲಿ ಸ್ಥಳೀಯರು ಹಾಗೂ ಪೊಲೀಸರ ಸಹಾಯದಿಂದ ಬಾವಿಗೆ ಬಿದ್ದಿದ್ದ ಮಹಿಳೆಯನ್ನು ರಕ್ಷಿಸಿಲಾಗಿದೆ.

- Advertisement -

Latest Posts

Don't Miss