ದೆಹಲಿಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶೀಲಾ ದಿಕ್ಷಿತ್ ಮನೆಯನ್ನು ಬಾಡಿಗೆ ಪಡೆಯಲು ರಾಹುಲ್ ಗಾಂಧಿ ನಿರ್ದರಿಸಿದ್ದಾರೆ.ಪ್ರಧಾನಿ ಮೋದಿ ಉಪನಾಮಕ್ಕೆ ಸಂಬಂಧಿಸಿದಂತೆ ಸೂರತ್ ಹೈಕೋರ್ಟ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಸಂಸತ್ ನಿಂದ ಅನರ್ಹ ಗೊಳಿಸಿ 2 ವರ್ಷ ಜೈಲು ಶಿಕ್ಷೆ ವಿಧಿಸಿ ನಂತರ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿತ್ತು. ನಂತರ ಅನರ್ಹಗೊಂಡ ನಂತರ ಸರ್ಕಾರಿ ಅಧಿಕೃತ ನಿವಾಸದಿಂದ ಅವರು ಹೊರನಡೆದಿದ್ದಾರೆ.
ಈ ಆದೇಶವನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಅವರು ಗುಜರಾತ್ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಅದನ್ನು ಹೈಕೋರ್ಟ್ ವಜಾಗೊಳಿಸತ್ತು. ಅನರ್ಹಗೊಂಡ ನಂತರ ಸರ್ಕಾರ ಬಂಗಲೆಗಳಲ್ಲಿ ಇರುವಂತಿಲ್ಲ, ಈ ಕಾರಣಕ್ಕೆ ರಾಹುಲ್ ಗಾಂಧಿ ತುಘಲಕ್ ಲೇನ್‌ನಲ್ಲಿರುವ ತಮ್ಮ ಅಧಿಕೃತ ನಿವಾಸವನ್ನು ಖಾಲಿ ಮಾಡಿದ್ದಾರೆ. ಇದೀಗ ರಾಹುಲ್ ಗಾಂಧಿ ದಕ್ಷಿಣ ದೆಹಲಿಯಲ್ಲಿ ಹೊಸ ಮನೆಯನ್ನು ಬಾಡಿಗೆ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮಾಜಿ ಮುಖ್ಯಮಂತ್ರಿ ಶೀಲಾ ದಿಕ್ಷಿತ್ ಅವರು ಕೊನೆಯ ಕಾಲದಲ್ಲಿ ವಾಸವಾಗಿರುವ ಮನೆ ಹುಮಾಯನ್ ಸಮಾಧಿ ಹಿಂದೆಯಿರುವ ಮನೆಯನ್ನು ಬಾಡಿಗೆ ಪಡೆದುಕೊಳ್ಳಲು ಸಿದ್ದರಿದ್ದಾರೆ ಎಂದು ತಿಳಿದು ಬಂದಿದೆ.
Spain: ಭಾರ ಜಾಸ್ತಿ ಇದೆಯೆಂದು ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದ ಪೈಲೆಟ್
Karemma G Nayak-ನನಗೆ ಬೆದರಿಕೆ ಕರೆಗಳು ಬರುತ್ತಿವೆ- ಭದ್ರತೆ ಒದಗಿಸಿ