ಪಾಕಿಸ್ತಾನ: ನಾಳೆ ನಡೆಯಲಿರುವ ಪಾಕ್ ನ್ಯಾಷನಲ್ ಸಂಸತ್ ಅಧಿವೇಶನಕ್ಕೂ ಮುನ್ನ ಶೆಹಬಾಜ್ ಷರೀಫ್ ಅವರು ಜಂಟಿ ಪ್ರತಿಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಾಗಿದೆ.
ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ನ ಶೆಹಬಾಜ್ ಷರೀಫ್ ಅವರನ್ನು ವಿರೋಧ ಪಕ್ಷಗಳು ಸೋಮವಾರ (ಏಪ್ರಿಲ್ 11) ನಡೆಯಲಿರುವ ಪ್ರಧಾನಿ ಹುದ್ದೆಗೆ ತಮ್ಮ ಜಂಟಿ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿವೆ ಎಂದು ಪಾಕಿಸ್ತಾನದ ಸುದ್ದಿ ಮಾದ್ಯಮಗಳು ವರದಿ ಮಾಡಿದೆ.
ಪಾಕಿಸ್ತಾನ್ ಪ್ರಧಾನಿ ಹುದ್ದೆಯಿಂದ ಇಮ್ರಾನ್ ಖಾನ್ ಕೆಳಗೆ ಇಳಿದ ಒಂದೇ ದಿನದಲ್ಲಿ, ಈಗ ಆ ಸ್ಥಾನಕ್ಕೆ ಶೆಹಬಾಜ್ ಷರೀಫ್ ನಾಮನಿರ್ದೇಶನಗೊಂಡಿದ್ದಾರೆ.




