Friday, August 29, 2025

Latest Posts

ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ನಟಿ ಶಿಲ್ಪಾ ಶೆಟ್ಟಿ

- Advertisement -

www.karnatakatv.net : ರಾಜ್ ಕುಂದ್ರ ಅವರ  ಬ್ಲೂ ಫಿಲ್ಮ್ ದಂಧೆ ಪ್ರಕರಣದಲ್ಲಿ ಜೈಲು ಸೇರಿದ ಸಂಬಂಧ ತನ್ನ ವಿರುದ್ಧ ಮಾನಹಾನಿಕರ ವಿಷಯ ಪ್ರಕಟಿಸದಂತೆ ತಡೆಕೋರಿ ಮಾಧ್ಯಮ ಸಂಸ್ಥೆ, ಸಾಮಾಜಿಕ ಜಾಲತಾಣಗಳು ಮತ್ತು ವೆಬ್ ಸೈಟ್ ಗಳ ವಿರುದ್ಧ ಶಿಲ್ಪಾ ಶೆಟ್ಟಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಮಾನಹನಿಕರ ಸುದ್ದಿ ಪ್ರಕಟ ಮಾಡಿರುವ ಮಾಧ್ಯಮ ಸಂಸ್ಥೆಗಳು, ಸಾಮಾಜಿಕ ಜಾಲತಾಣಗಳು ಬೇಷರತ್ ಕ್ಷಮೆ ಕೇಳಬೇಕು, ಎಲ್ಲಾ ಮಾನಹಾನಿಕರ ವಿಷಯಗಳನ್ನು ಡಿಲೀಟ್ ಮಾಡಬೇಕು ಮತ್ತು 25 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇದರಲ್ಲಿ ಫೇಸ್ ಬುಕ್, ಯೂಟ್ಯೂಬ್ ಗಳಿಗೂ ಸೇರಿದ್ದು, ಇಂಥ ವಿಷಯ ಪ್ರಕಟಿಸಿದ ಫೇಸ್ ಬುಕ್ ಯೂಟ್ಯೂಬ್ ಗಳು ವಿಷಯವನ್ನು ಡಿಲೀಟ್ ಮಾಡಬೇಕೆಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

- Advertisement -

Latest Posts

Don't Miss