ಶಿವಮೊಗ್ಗ: ಮೀನುಗಾರಿಕೆಗೆ ವಿವಿಧ ಯೋಜನೆಗಳಡಿ ಧನಸಹಾಯ ಪಡೆಯಲು ಅರ್ಜಿ ಆಹ್ವಾನ

ಶಿವಮೊಗ್ಗ : ಮೀನುಗಾರಿಕೆ ಇಲಾಖೆಯು 2022-23ನೇ ಸಾಲಿನ ಜಿಲ್ಲಾವಲಯ ಯೋಜನೆಯಡೊ ಮೀನುಗಾರಿಕೆ ಸಲಕರಣೆ ಕಿಟ್ ಅಥವಾ ಫೈಬರ್ ಗ್ಲಾಸ್ ಹರಿಗೋಲು ಖರೀದಿ ಯೋಜನೆ ಹಾಗೂ ದ್ವಿಚಕ್ರ ವಾಹನ ಮತ್ತು ಐಸ್ ಬಾಕ್ಸ್ ಖರೀದಿಗೆ ಸಹಾಯಧನ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಆಸಕ್ತರು ಆನ್‍ಲೈನ್ http://shimoga.nic.in ಪೋರ್ಟಲ್ ಮೂಲಕ ದಿ:09/09/2022 ರೊಳಗಾಗಿ ಸಲ್ಲಿಸುವಂತೆ ಮೀನುಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ-9986040981, ಭದ್ರಾವತಿ-9743370815, ಶಿಕಾರಿಪುರ-9535386449, ಸಾಗರ, ಸೊರಬ ಮತ್ತು ಹೊಸನಗರ-9538044365, ತೀರ್ಥಹಳ್ಳಿ- 7411174772 ಗಳನ್ನು ಸಂಪರ್ಕಿಸುವುದು.

About The Author