ಶಿವಮೊಗ್ಗ: ಬಾಲಕಿಯರಿಗೆ ಆತ್ಮ ರಕ್ಷಣಾ ತರಬೇತಿ ನೀಡಲು ಮಹಿಳಾ ಟ್ರೈನರ್ಸ್‍ರಿಂದ ಅರ್ಜಿ ಆಹ್ವಾನ

ಶಿವಮೊಗ್ಗ : ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆಸುತ್ತಿರುವ ವಸತಿ ನಿಲಯಗಳಲ್ಲಿನ ಬಾಲಕಿಯರಿಗೆ ಆತ್ಮ ರಕ್ಷಣಾ ತರಬೇತಿ ಶಿಬಿರವನ್ನು ಏರ್ಪಡಿಸಿದ್ದು, ಜುಡೋ, ಕರಾಟೆ ಮತ್ತು ಟೇಕ್ವಾಂಡೋ ಕ್ರೀಡೆಗಳಲ್ಲಿ ನುರಿತ ಮಹಿಳಾ ಟ್ರೈನರ್‍ಗಳಿಂದ ಅರ್ಜಿ ಆಹ್ವಾನಿಸಿದೆ.

ಸರ್ಕಾರದ ಅಂಗೀಕೃತ ಸಂಸ್ಥೆಗಳಲ್ಲಿ ಜುಡೋ, ಕರಾಟೆ ಹಾಗೂ ಟೇಕ್ವಾಂಡೋ ಸರ್ಟಿಫಿಕೆಟ್ ಕೋರ್ಸ್ ಮಾಡಿರುವ ಹಾಗೂ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ ವಿಜೇತರಾಗಿರುವ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದ ಕನಿಷ್ಟ 21 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಆಯ್ಕೆಯಾದ ಟ್ರೈನರ್‍ಗಳು ಒಂದಕ್ಕಿಂತ ಹೆಚ್ಚು ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರಬೇಕು. ಈ ಆಯ್ಕೆಯು ತಾತ್ಕಾಲಿಕವಾಗಿದ್ದು, ಗೌರವಧನ ಹಾಗೂ ಕನಿಷ್ಠ ಪ್ರಯಾಣ ಭತ್ಯೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಪಾವತಿಸಲಾಗುವುದು.

ಆಸಕ್ತ ಜುಡೋ, ಕರಾಟೆ ಹಾಗೂ ಟೇಕ್ವಾಂಡೋ ಇತ್ಯಾದಿ ಮಾರ್ಷಲ್ ಆಟ್ರ್ಸ್ ಟ್ರೈನರ್‍ಗಳು ತಮ್ಮ ಸ್ವ ವಿವರಗಳೊಂದಿಗೆ ಅರ್ಜಿಗಳನ್ನು ದಿ: 22/07/2022 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಇಲಾಖೆಯನ್ನು ಖುದ್ದಾಗಿ ಅಥವಾ ದೂ.ಸಂ.: 08182-223328 ನ್ನು ಸಂಪರ್ಕಿಸುವುದು.

About The Author