ಜಾತ್ರಾ ಮಹೋತ್ಸವಕ್ಕೆ ಸಜ್ಜಾದ ಶಿರಸಿ ಮಾರಿಕಾಂಬ ಕ್ಷೇತ್ರ!

ಫೆಬ್ರುವರಿ 24 ರಿಂದ ನಡಿಯುವ ಕರ್ನಾಟಕದ ಸುಪ್ರಸಿದ್ಧ ಶಿರಸಿಯ ಮಾರಿಕಾಂಬ ಜಾತ್ರೆಯ ಕೆಲಸ ಕಾರ್ಯಗಳು ಮತ್ತು ದೇವಸ್ಥಾನ ಅಲಂಕಾರ ಭರದಿಂದ ಸಾಗಿದೆ. ಕರ್ನಾಟಕ ಟಿವಿಗೆ ಮಾಹಿತಿ ನೀಡಿದ ಶಿರಸಿ ಮಾರಿಕಾಂಬ ದೇವಿ ಟ್ರಸ್ಟ್ ಅಧ್ಯಕ್ಷರಾದ RG ನಾಯ್ಕ್ ಅವರು ದೇವಿ ಕೂರುವ ಗದ್ದುಗೆಯಲ್ಲಿ ಚಪ್ಪರ ಹಾಕಿ ಅದಕ್ಕೆ ಬೇಕಾಗುವ ಸಂಪೂರ್ಣ ವ್ಯವಸ್ಥೆ ಮಾಡಲಾಗಿದೆ.

ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಸರತಿ ಸಾಲುಗಳನ್ನು ನಿರ್ಮಿಸಲಾಗಿದೆ ಬರುವಂತ ಭಕ್ತಾದಿಗಳ ವಾಹನಕ್ಕೆ ಪಾರ್ಕಿಂಗ್ ವ್ಯವಸ್ಥೆಯು ಬಹಳ ಅಚ್ಚುಕಟ್ಟಾಗಿ ಮಾಡಲಾಗಿದೆ. ಭಕ್ತರಿಗೆ ಬೇಸಿಗೆ ಇರುವುದರಿಂದ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಪಾನಕ ವ್ಯವಸ್ಥೆ ಮಾಡಲಾಗಿದೆ. ಭಕ್ತಾದಿಗಳಿಗೆ ಮೂಲಭೂತ ಸೌಕರ್ಯದ ಯಾವುದೇ ಕೊರತೆ ಇಲ್ಲದ ಹಾಗೆ ನೋಡಿಕೊಳ್ಳಲಾಗುತ್ತದೆ.

ಅದೇರೀತಿ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಅಧಿಕಾರಿ ವರ್ಗದವರೊಂದಿಗೆ ಮಾತನಾಡಿ ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದ ಹಾಗೆ ವ್ಯವಸ್ಥೆ ಮಾಡಿಕೊಳ್ಳಲು ಸೂಚನೆ ನೀಡಿದೆ. ಮುಖ್ಯವಾಗಿ ಬರುವಂತ ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ಹೇಳಿದರು.

About The Author