Sunday, September 8, 2024

Latest Posts

ಶಿರೂರು ಗುಡ್ಡ ಕುಸಿತ ಪ್ರಕರಣ: ಕಾರ್ಯಾಚರಣೆ ಶುರು ಮಾಡಿದ ಈಶ್ವರ್ ಮಲ್ಪೆ ಟೀಂ

- Advertisement -

Ankola News: ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಶಿರೂರಿನಲ್ಲಿ ಗುಡ್ಡ ಕುಸಿದು, ಹಲವರು ಸಾವನ್ನಪ್ಪಿದ್ದಾರೆ. ಆದರೆ ಅದರಲ್ಲಿ ಕೆಲವರ ಮೃತದೇಹ ಪತ್ತೆಯಾಗಿದೆ. ಇನ್ನು ಕೆಲ ಮೃತದೇಹ ಪತ್ತೆಯಾಗಬೇಕಿದೆ. ಅದಕ್ಕಾಗಿ ಮೂರ್ನಾಲ್ಕು ದಿನದಿಂದ ಹುಡುಕಾಟ ನಡೆದಿದೆ.

ಈ ಮೊದಲೇ ಮಾಡಬೇಕಿದ್ದ ಕೆಲಸವನ್ನು ಇಲ್ಲಿನ ತಂಡ ಇದೀಗ ಮಾಡಿದೆ. ಅದೇನೆಂದರೆ, ಈಜುಪಟು, ಮುಳುಗುತಜ್ಞ, ಇಂಥ ಕೇಸ್‌ನಲ್ಲಿ ಎಕ್ಸ್‌ಪರ್ಟ್ ಆಗಿರುವ ಈಶ್ವರ್ ಮಲ್ಪೆ ಅವರನ್ನು ಇದೀಗ ಕಾರ್ಯಾಚರಣೆಗಾಗಿ ಕರೆಸಲಾಗಿದೆ. ಈಶ್ವರ್ ಮಲ್ಪೆ ಮತ್ತು ತಂಡ, ಕಾರ್ಯಾಚರಣೆ ಶುರು ಮಾಡಿದ್ದು, ಸ್ಕೂಬಾ ಡೈವಿಂಗ್ ಮೂಲಕ, ಹುಡುಕಾಟ ನಡೆಸಲಾಗುತ್ತಿದೆ.

ಸ್ಕೂಬಾ ಡೈವಿಂಗ್ ಅಲ್ಲದೇ, ಸ್ಪೆಶಲ್ ಡ್ರೋನ್ ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈಶ್ವರ್‌ಮಲ್ಪೆ ತಂಡದವರು ಸೇಫ್ ಆಗಿ ಹೊರಗೆ ಬರಲಿ, ಉಳಿದಿರುವ ಎಲ್ಲ ಕೆಲಸಗಳು ಆದಷ್ಟು ಬೇಗ ಮುಗಿಯಲಿ ಎಂದು ಇಲ್ಲಿನ ಕಾರ್ಯಾಚರಣೆ ತಂಡದವರು ಕೈ ಮುಗಿದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಪ್ರಕರಣ ನಡೆದು ಎರಡ್ಮೂರು ದಿನಗಳ ಬಳಿಕ ಕೇಂದ್ರ ಸಚಿವ ಹೆಚ್.ಡಿ.ಕುಮಾಾರಸ್ವಾಮಿ ಈ ಸ್ಥಳಕ್ಕೆ ಬಂದು, ಪರಿಶೀಲನೆ ಮಾಡಿ ಹೋಗಿದ್ದರು. ಅಲ್ಲದೇ, ಕೆಲ ವ್ಯವಸ್ಥೆಗಳನ್ನು ಮಾಡಿದ್ದರು. ಅದಾದ ಬಳಿಕ, ಸಿಎಂ ಸಿದ್ದರಾಮಯ್ಯ ಕೂಡ ಈ ಸ್ಥಳಕ್ಕೆ ಭೇಟಿ ಕೊಟ್ಟು, ಪರಿಸ್ಥಿತಿ ವಿಚಾರಿಸಿದ್ದರು.

ಇದೀಗ ಡ್ರೈವರ್‌ ಅರ್ಜುನನಿಗಾಗಿ ಮತ್ತು ಇತರರಿಗಾಗಿ ಹುಡುಕಾಟ ಶುರುವಾಗಿದ್ದು, ಯಾರಿಂದಲೂ ಸಾಧ್ಯವಾಗದ ಕಾರ್ಯ, ಈಶ್ವರ್ ಮಲ್ಪೆ ಅವರಿಂದ ಸಾಧ್ಯವಾಗುತ್ತದೆ ಅನ್ನೋ ನಂಬಿಕೆಯಲ್ಲಿ ಎಲ್ಲರೂ ಇದ್ದಾರೆ.

- Advertisement -

Latest Posts

Don't Miss