Saturday, July 27, 2024

Latest Posts

Collage : ಶಿರ್ವ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿಗೆ ನ್ಯಾಕ್ ಭೇಟಿ

- Advertisement -

Karkala News : ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜು ಶಿರ್ವದ ಇಲ್ಲಿಗೆ ನಾಲ್ಕನೆಯ ಬಾರಿಗೆ ನ್ಯಾಕ್ ಮಾನ್ಯತೆ ನೀಡುವ ಸಲುವಾಗಿ ಆಗಮಿಸಿದ ಪರಿವೀಕ್ಷಣಾ ಸಮಿತಿಯ ಅಧ್ಯಕ್ಷ ಉತ್ತರಾಖಂಡ್ ಸಂಸ್ಕøತ ವಿಶ್ವವಿದ್ಯಾನಿಲಯ, ಹರಿದ್ವಾರ ಇದರ ನಿವೃತ್ತ ಉಪ-ಕುಲಪತಿಗಳಾದ ಡಾ. ಪಿಯೂಷ್ ಕಾಂತ್ ದೀಕ್ಷಿತ್, ಸದಸ್ಯ ಸಂಯೋಜಕ ಡಾ. ಪಂಚಾನನ್ ದಾಸ್, ಪ್ರೊಫೆಸರ್, ಕಲ್ಕತ್ತಾ ವಿಶ್ವವಿದ್ಯಾನಿಲಯ ಹಾಗೂ ಸದಸ್ಯ ಡಾ. ಕುಂಡ್ಲಿಕ್ ಶಿಂಧೆ, ಪ್ರಾಂಶುಪಾಲರು, ರಾಯತ್ ಶಿಕ್ಷಣ ಸಂಸ್ಥಾ ಶ್ರೀ. ರಾವ್ ಸಾಹೇಬ್ ರಾಮ್ ರಾವ್ ಪಾಟೀಲ್ ಕಾಲೇಜ್, ಸಾವ್ಲಾಜ್, ಮಹಾರಾಷ್ಟ್ರ ಇವರು ಎರಡು ದಿನದ ಭೌತಿಕ ಪರಿಶೀಲನೆಯ ನಂತರ ನ್ಯಾಕ್ ಎಗ್ಸಿಟ್ ಮೀಟಿಂಗ್‍ನಲ್ಲಿ ಪರಿವೀಕ್ಷಣಾ ವರದಿಯನ್ನು ಕಾಲೇಜಿನ ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು.

ಸಮಿತಿಯ ಅಧ್ಯಕ್ಷ ಡಾ. ಪಿಯೂಷ್ ಕಾಂತ್ ದೀಕ್ಷಿತ್ ಇವರು ಮಾತನಾಡಿ ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಹಳೇ ವಿದ್ಯಾರ್ಥಿಗಳು ಸೇರಿ ಬೆಸೆದ ಇಂತಹ ನಿಕಟಪೂರ್ವ ಸಂಬಂಧ ಹೊಂದಿದ ಮತ್ತೊಂದು ಕಾಲೇಜನ್ನು ನನ್ನ 15 ವರ್ಷದ ನ್ಯಾಕ್ ಭೇಟಿಯ ಅನುಭವದಲ್ಲಿ ಎಲ್ಲಿಯೂ ನೋಡಿಲ್ಲ. ಕಾಲೇಜಿನ ಸಂಸ್ಥಾಪಕರ ಆಶಯದಂತೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಅತೀ ಕಡಿಮೆ ಶುಲ್ಕದಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ನೀಡುತ್ತಿರುವುದನ್ನು ಶ್ಲಾಘಿಸಿದರು.

ಸಮಿತಿಯ ಸದಸ್ಯ ಸಂಯೋಜಕ ಡಾ. ಪಂಚಾನನ್ ದಾಸ್, ಇವರು ಮಾತನಾಡಿ ಕಾಲೇಜಿನಲ್ಲಿ ಸಮೃದ್ಧವಾದ ಸಾಂಸ್ಕøತಿಕ ಹಾಗೂ ಸಾಮಾಜಿಕ ಪರಿಸರದ ಹಿನ್ನೆಲೆ ಇರುವ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿದ್ದು ಇದರ ಅಭೂತಪೂರ್ವವಾದ ಅಭಿವೃದ್ಧಿಗೆ ಕಾಲೇಜು ಕಳೆದ 42 ವರ್ಷಗಳಿಂದ ಸೀಮಿತವಾದ ಸೌಲಭ್ಯಗಳಲ್ಲಿಯೇ ತನ್ನ ಪ್ರಾಮಾಣಿಕ ಪ್ರಯತ್ನವನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು.

ಆಡಳಿತ ಮಂಡಳಿಯ ಸದಸ್ಯರು, ಕಾಲೇಜಿನ ಪ್ರಾಂಶುಪಾಲರು, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕರು, ಅಧ್ಯಾಪಕ-ಅಧ್ಯಾಪಕೇತರರು, ನಿವೃತ್ತ ಸಿಬ್ಬಂದಿಗಳು ಹಾಗೂ ಹಳೇ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Deer : ಬೆಳ್ತಂಗಡಿ : ಜಿಂಕೆ ದಾಳಿಗೆ ಆಡುಗಳು ಬಲಿ..!

Siddaramaiah : ಉಡುಪಿ : ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ : ಸಿದ್ದರಾಮಯ್ಯ

Siddaramaiah : ಉಡುಪಿ : ಪಡುಬಿದ್ರಿ ಬೀಚ್ ಬಳಿ ಸಿಎಂ ಪರಿಶೀಲನೆ

- Advertisement -

Latest Posts

Don't Miss