ಗಾಂಜಾ ಗ್ಯಾಂಗ್ ಹಿಡಿಯಲು ಆಂಧ್ರಕ್ಕೆ ತೆರಳುತ್ತಿದ್ದ ಶಿವಾಜಿನಗರ ಪೊಲೀಸ್ ವಾಹನ ಅಪಘಾತ: ಪಿಎಸ್ಐ ಸೇರಿ ಮೂವರು ಸಾವು

ಬೆಂಗಳೂರು: ಖಾಸಗಿ ಟ್ರಾವೆಲ್ಸ್ ನಿಂದ ಇನ್ನೋವಾ ಕಾರನ್ನು ಬಾಡಿಗೆ ಪಡೆದು, ಗಾಂಜಾ ಗ್ಯಾಂಗ್ ಹಿಡಿಯೋದಕ್ಕಾಗಿ ಆಂಧ್ರಪ್ರದೇಶಕ್ಕೆ ತೆರಳಿದ್ದಂತ ಶಿವಾಜಿನಗರ ಪೊಲೀಸರ ಕಾರಣ, ಚಿತ್ತೂರು ಬಳಿ ಅಪಘಾತಗೊಂಡಿದೆ. ಈ ಪರಿಣಾಮ ಕಾರಿನಲ್ಲಿದ್ದಂತ ಪಿಎಸ್ಐ ಸಹಿತ ಮೂವರು ಸಾವನ್ನಪ್ಪಿದ್ದಾರೆ. ಅಲ್ಲದೇ ನಾಲ್ವರು ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ.

ಗಾಂಜಾ ಪ್ರಕರಣದಲ್ಲಿ ಖಚಿತ ಮಾಹಿತಿ ಮೇರೆಗೆ ಗ್ಯಾಂಗ್ ಆಂಧ್ರಪ್ರದೇಶದ ಚಿತ್ತೂರು ಬಳಿಯಲ್ಲಿ ಇರುವ ಖಚಿತ ಮಾಹಿತಿ ಮೇರೆಗೆ ಶಿವಾಜಿನಗರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅವಿನಾಶ್, ಪ್ರೊಬೆಷನರಿ ಪಿಎಸ್ಐ ದೀಕ್ಷಿತ್, ಪೊಲೀಸ್ ಕಾನ್ಸ್ ಟೇಬರ್ ಅನಿಲ್ ಸೇರಿದಂತೆ 7 ಮಂದಿ ಕಾರಿನಲ್ಲಿ ತೆರಳಿದ್ದರು.

ಇಂದು ನಸುಕಿನ ಜಾವ ಆಂಧ್ರಪ್ರದೇಶದ ಚಿತ್ತೂರಿನಿಂದ ತಿರುಮಲಕ್ಕೆ ಹೋಗುವ ರಸ್ತೆಯ ಬಳಿಯಲ್ಲಿ ಡಿವೈಡರ್ ಗೆ ಡಿಕ್ಕಿಯಾಗಿ ಭೀಕರ ಅಪಘಾತ ಉಂಟಾಗಿದೆ. ಈ ಕಾರಣ ಕಾರು ಸಂಪೂರ್ಣ ಜಖಂ ಆಗಿ ಪಿಎಸ್ಐ ಸೇರಿ ಮೂವರು ಸಾವನ್ನಪ್ಪಿದ್ದಾರೆ. ಇನ್ನೂ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಅಂದಹಾಗೇ ಮೃತರನ್ನು ಸಬ್ ಇನ್ಸ್ ಪೆಕ್ಟರ್ ಅವಿನಾಶ್, ಕಾನ್ಸ್ ಟೇಬಲ್ ಅನಿಲ್ ಹಾಗೂ ಕಾರು ಚಾಲಕ ಎಂಬುದಾಗಿ ಗುರ್ತಿಸಲಾಗಿದೆ. ಈ ಘಟನೆಯನ್ನು ಪ್ರೊಬೇಷನರಿ ಪಿಎಸ್ಐ ದೀಕ್ಷಿತ್, ಕಾನ್ಸ್ ಟೇಬಲ್ ಶರಣಬಸವ ಗಾಯಗೊಂಡಿದ್ದಾರೆ.

About The Author