Wednesday, April 16, 2025

Latest Posts

ನಡೆದಾಡುವ ದೇವರ 4ನೇ ವರ್ಷದ ಪುಣ್ಯ ಸ್ಮರಣೆ..!

- Advertisement -

Special News:

ಜನವರಿ 21 ಧರೆಗಿಳಿದ ಸಾಕ್ಷಾತ್ ನಡೆದಾಡುವ ದೇವರು ಸಿದ್ದಗಂಗಾ ಮಠದ ಶಿವಕುಮಾರ್ ಶ್ರೀಗಳು ಲಿಂಗೈಕ್ಯರಾದ ದಿನ. ತ್ರಿವಿಧ ದಾಸೋಹಿಗಳು ಶಿವೈಕ್ಯರಾಗಿ ಇಂದಿಗೆ ಬರೊಬ್ಬರಿ 4 ವರ್ಷ ಉರುಳಿದೆ..ಇಂದು ಬೆಳಗ್ಗಿನಿಂದಲೇ ಶ್ರೀಗಳ ಸಂಸ್ಮರಣೋತ್ಸವವನ್ನು ಅತ್ಯಂತ ಶ್ರದ್ದಾಭಕ್ತಿಪೂರ್ವಕವಾಗಿ ಆಚರಿಸಲಾಗಿದೆ. ಶ್ರೀಗಳ ಗದ್ದುಗೆಯನ್ನು ದೀಪಾಲಂಕಾರ, ವಿಶೇಷ ಪುಷ್ಪ ಅಲಂಕಾರದಿಂದ ಸಿಂಗರಿಸಿ ಭಕ್ತಿ ಸಮರ್ಪಣೆ ಮಾಡಲಾಯಿತು.ಬೆಳಗ್ಗೆ 5.30 ಕ್ಕೆ ಮಹಾರುದ್ರಾಭಿಷೇಕ, ರಾಜೋಪಚಾರ, ಬಿಲ್ವಾರ್ಚನೆ ಮಾಡಲಾಯಿತು. ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮಿಗಳ ಉಪಸ್ಥಿತಿಯಲ್ಲಿ ಮಂತ್ರಘೋಷಗಳ ಮೂಲಕ ಮಹಾಮಂಗಳಾರತಿ ಮಾಡಿ ಭಕ್ತಿ ಅರ್ಪಿಸಿದರು. ಬೆಳಗ್ಗೆ 8.30 ಕ್ಕೆ ಶ್ರೀಮಠದ ಆವರಣದಲ್ಲಿ ರುದ್ರಾಕ್ಷಿ ರಥದಲ್ಲಿ ಶಿವಕುಮಾರ ಶ್ರೀಗಳ ಭಾವಚಿತ್ರವನ್ನಿಟ್ಟು ಮೆರವಣಿಗೆ ಮಾಡಿ ಸಹಸ್ರಾರು ಭಕ್ತರು ಪುನೀತರಾದರು..

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಕೇಂದ್ರ ಸಚಿವ ಭಗವಂತ ಖೂಬ,ಸಚಿವರುಗಳಾದ ಆರಗ ಜ್ಙಾನೇಂದ್ರ,ಬಿಸಿ ನಾಗೇಶ್,ವಿ.ಸೋಮಣ್ಣ,ಮಾಧುಸ್ವಾಮಿ,ಬಿಎಲ್ ಸಂತೋಷ್,ವಿಜಯೇಂದ್ರ,ಸೇರಿದಂತೆ ಅನೇಕ ನಾಯಕರು ಶ್ರೀಗಳ ಪುಣ್ಯಸ್ಮರಣೆಗೆ ಸಾಕ್ಷಿಯಾದರು..ಶ್ರೀಗಳ ಭವ್ಯ ಗದ್ದುಗೆಗೆ ನಮಿಸಿದ ಬಳಿಕ ಶ್ರೀಮಠದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ನಡೆದ ಸಂಸ್ಮರಣೋತ್ಸವದಲ್ಲಿ ಭಾಗಿಯಾದರು..ವೇದಿಕೆಯಲ್ಲಿ ಬೇಲಿಮಠದ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರು ದಿವ್ಯ ಸಾನಿಧ್ಯ ವಹಿಸಿದ್ದರು..ಈ ವೇಳೆ ಶಿವಕುಮಾರಸ್ವಾಮೀಜಿಗಳ ಕುರಿತ ಲೇಖನಗಳ ಸಂಗ್ರಹವಾದ ವಿಶ್ವಜ್ಯೋತಿ ಪುಸ್ತಕವನ್ನ ಗಣ್ಯರು ಲೋಕಾರ್ಪಣೆ ಗೊಳಿಸಿದರು..

ಬಸವಣ್ಣನವರ ತತ್ವಾದರ್ಶಗಳ ಬಗ್ಗೆ ಚಿಂತನೆ ಅತ್ಯಗತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಭಾಷಣದಲ್ಲಿ ಲಿಂಗೈಕ್ಯ ಶ್ರೀಗಳ ಜೀವನಾಧರ್ಶಗಳನ್ನ ತಿಳಿಸಿದರು..ಅಸಮಾನತೆ, ಲಿಂಗಭೇದ, ಮೇಲುಕೀಳುಗಳನ್ನು ಹೋಗಲಾಡಿಸಲು ನಾವೇನು ಮಾಡಬೇಕು ಎಂಬ ಬಗ್ಗೆ ಚಿಂತಿಸಬೇಕು. ಸಾಮಾಜಿಕ ಕ್ರಾಂತಿಯನ್ನುಂಟು ಮಾಡುವ ಕಾಯಕದಲ್ಲಿ ಮಠಗಳು ಮುಂಚೂಣಿಯಲ್ಲಿರಬೇಕು ಎಂದರು..ಶಿವಕುಮಾರ ಸ್ವಾಮೀಜಿಗಳು ತ್ರಿವಿಧ ದಾಸೋಹಿಗಳು, ಕಾಯಕ ಯೋಗಿಗಳಾಗಿದ್ದಾರೆ.ಬಡಮಕ್ಕಳು  ಶ್ರೀ ಕ್ಷೇತ್ರಕ್ಕೆ ಬಂದು ಅನ್ನ, ಆರೋಗ್ಯ, ವಿದ್ಯೆ, ಆಶ್ರಯ ಎಲ್ಲವನ್ನೂ ಪಡೆಯುತ್ತಿದ್ದಾರೆ.ಇದರೊಂದಿಗೆ ಸಂಸ್ಕಾರ, ಸಂಸ್ಕೃತಿಯನ್ನು ನೀಡುತ್ತಿದೆ. ಭಕ್ತರೇ ಮಠದ ಆಸ್ತಿ ಹಾಗೂ ಪರಮಾತ್ಮನೇ ಅಕ್ಷಯಪಾತ್ರೆ, ಎಲ್ಲ ಸೇವಾ ಕಾರ್ಯಗಳಿಗೆ ಶರಣರು, ದೀನದಲಿತರೇ ಒಡೆಯರು  ಎಂದು ಶಿವಕುಮಾರ ಸ್ವಾಮೀಜಿಗಳು ಎಂದು ನಂಬಿದವರು..ರಾಜ್ಯ ಸರ್ಕಾರದ ವತಿಯಿಂದಲೂ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಜನ್ಮದಿನದಂದು ದಾಸೋಹ ದಿನವೆಂದು ಆಚರಿಸಲಾಗುತ್ತದೆ.ಮಠಮಾನ್ಯಗಳಲ್ಲಿ ದಾಸೋಹಗಳನ್ನು ಮಾಡಲಾಗುತ್ತಿದೆ. ಈ ಕ್ಷೇತ್ರಕ್ಕೆ ದಾಸೋಹಕ್ಕೆ ವ್ಯವಸ್ಥೆಗಳನ್ನು ಮಾಡುವ ಮೂಲಕ ದಾಸೋಹ ದಿನವನವನ್ನು ಆಚರಿಸಲಾಗುವುದು.ವಿಶ್ವಮಟ್ಟದಲ್ಲಿಯೂ ದಾಸೋಹ ದಿನವನ್ನು ಆಚರಿಸುವ ಮೂಲಕ ವಿಶ್ವದಾಖಲೆಯನ್ನು ಮಾಡಲಾಗುವುದು ಎಂದರು..ಇನ್ನೂ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗಳು ಆಶಿರ್ವಚನ ನೀಡುತ್ತಾ,,ಈ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗವಹಿಸಿರೋದು ಬಹಳ ಸಂತಸ ತಂದಿದೆ,ಪರಮಪೂಜ್ಯರು ಎಷ್ಟು ತ್ಯಾಗಮಯಿ ಆಗಿದ್ರು ಅಂದ್ರೆ,ಅವರಿಗೆ ಒಂದು ಲೋಟ ಹಾಲು ಕೊಟ್ಟರೆ,ಏನಪ್ಪಾ ನನಗೆ ಒಂದು ಲೋಟ ಹಾಲು ಕೊಟ್ಟಿದ್ದೀಯ.ಇದನ್ನೇ ಹೆಪ್ಪು ಹಾಕಿದ್ರೆ ನಾಲ್ಕು ಮಕ್ಕಳು ಊಟ ಮಾಡಲು ಮೊಸರು ಆಗ್ತಿತ್ತು ಎನ್ನುತ್ತಿದ್ದರು,ಅಂತಹ ಪರಮಪೂಜ್ಯರ ಆಶೀರ್ವಾದ ನಮ್ಮ ಎಲ್ಲರ ಮೇಲಿರುತ್ತೆ ಎಂದು ನೆಚ್ಚಿನ ಗುರುವಿನ ಗುಣಗಾನ ಮಾಡಿದರು.. ಪುಣ್ಯಸ್ಮರಣೆಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಸಮೂಹವೇ ಹರಿದು ಬಂದಿತ್ತು.ಬೆಳಗ್ಗಿನಿಂದಲೇ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.ಸಾದರ ಕೊಪ್ಪಲು, ವಸ್ತು ಪ್ರದರ್ಶನ ಆವರಣ ಸೇರಿದಂತೆ ಒಟ್ಟು 5 ಕಡೆ ಪ್ರಸಾದದ ವಿತರಿಸಲಾಯಿತು.ಸಿಹಿ ಬೂಂದಿ, ಖಾರಾ ಬೂಂದಿ, ಪಾಯಸ, ಮಾಲ್ದಿ ವಿಶೇಷ ಖಾದ್ಯ  ಸವಿದು ಭಕ್ತರು ಶ್ರೀಗಳ ದಾಸೋಹವನ್ನು ನೆನೆದರು.ಸಿದ್ದಗಂಗಾ ಮಠದಲ್ಲಿ ಭಕ್ತಸಾಗರದ ಅಲೆಯೇ ಎದ್ದಿತ್ತು.ಸರದಿ ಸಾಲಿನಲ್ಲಿ ನಿಂತು ಗದ್ದುಗೆ ದರ್ಶನ ಪಡೆದು ದೇವರಿಲ್ಲದ ನಾಲ್ಕು ವರ್ಷವನ್ನು ನೆನೆದು ಸಾಂಗತ್ಯ ಸವಿಗಿಂತ…ನೆನಪಿನ ಸವಿ ಇನ್ನೂ ಹೆಚ್ಚು ಎಂಬಂತೆ ಭಕ್ತ ಸಮೂಹ ದೇವರನ್ನು ನೆನೆದು ಪಾವನವಾಗಿದೆ..

ಚಿತ್ರದುರ್ಗ: ಕ್ಷಮಾಳವಾದ್ಯ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ…!

“ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ” ಒಂದು ವಿಶಿಷ್ಠ ಕಾರ್ಯಕ್ರಮ: ಸುರೇಶ್ ಗೌಡ

ಚಿತ್ರದುರ್ಗ: 16ನೇ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

- Advertisement -

Latest Posts

Don't Miss