Wednesday, September 17, 2025

Latest Posts

“ಶಕ್ತಿ ಸೀಕ್ರೆಟ್” ಹೇಳಿದ ಶಿವಲಿಂಗೇಗೌಡ : ಶಕ್ತಿ ಯೋಜನೆ ರಹಸ್ಯ ವಿಶ್ವ ವಿಖ್ಯಾತಿ ತಂತಾ

- Advertisement -

ಅರಸೀಕೆರೆ ತಾಲ್ಲೂಕು ಕಚೇರಿಯ ಆವರಣದಲ್ಲಿ ನಡೆದ ಸರ್ಕಾರದ ಶಕ್ತಿ ಯೋಜನೆಯ ಫಲಾನುಭವಿಗಳ ಸಂಖ್ಯೆ 500 ಕೋಟಿ ಗಡಿ ದಾಟಿರುವ ಪ್ರಯುಕ್ತ ಸಂಭ್ರಮಾಚರಣೆಯನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಾಕ್ರಮದಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಪಾಲ್ಗೊಂಡು ಮಾತನಾಡಿ, ರಾಜ್ಯ ಸರ್ಕಾರದ ಶಕ್ತಿ ಯೋಜನೆಯೂ 500 ಕೋಟಿ ಜನಕ್ಕೆ ಪ್ರಯೋಜನವಾಗಿದ್ದು ಸಂಭ್ರಮದ ಸಂಗತಿಯಾಗಿದೆ. ವಿಶ್ವದಲ್ಲಿಯೇ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ನೀಡಿದ ಕಾಂಗ್ರೆಸ್ ಸರ್ಕಾರ ನಮ್ಮದಾಗಿದೆ ಎಂದಿದ್ದಾರೆ.

ಈ ಯೋಜನೆ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಇದು ದೊಡ್ಡ ಸಹಾಯವಾಗಿದ್ದು ಮಹಿಳೆಯರ ಜೀವನ ಮಟ್ಟವನ್ನು ಸುಧಾರಿಸಲು ಸಹಾಯವಾಗಿದೆ. ಈ ಯೋಜನೆಯಿಂದ ಮಹಿಳೆಯರು ತಮ್ಮ ಕೆಲಸ, ಶಿಕ್ಷಣ, ಮತ್ತು ಇತರ ಅಗತ್ಯ ಚಟುವಟಿಕೆಗಳಿಗೆ ಸುಲಭವಾಗಿ ಮತ್ತು ವೆಚ್ಚವಿಲ್ಲದೆ ಪ್ರಯಾಣಿಸಲು ಸಾದ್ಯವಾಗಿದ್ದು ನಮ್ಮ ಸರ್ಕಾರ ಇರುವರೆರೆಗೂ ಶಕ್ತಿ ಯೋಜನೆ ಮುಂದುವರಿಯಲಿದೆ. ಗ್ಯಾರಂಟಿಗಳಿಂದ ಯಾವ ಅಭಿವೃದ್ದಿ ಕಾರ್ಯಗಳು ವಿಳಂಬವಾಗದೇ ಎಲ್ಲ ಅಭಿವೃದ್ದಿ ಕಾರ್ಯಗಳು ಪ್ರಗತಿಯ ಪಂತದಲ್ಲಿ ಸಾಗುತ್ತ ಇದೆ. ಶಕ್ತಿ ಯೋಜನೆಯಿಂದ ನೌಕರರು ಹಾಗೂ ಸಿಬ್ಬಂದಿಗಳ ವೇತನಗಳನ್ನು ಬಾಕಿ ಉಳಿಸಿಕೊಳ್ಳದೇ ಆಯಾಯಾ ತಿಂಗಳು ಅಕೌಂಟ್ ಗೆ ಜಮಾವಾಗಿದೆ ಎಂದಿದ್ದಾರೆ.

ಗ್ಯಾರಂಟಿ ಯೋಜನೆ ಸಮಿತಿಯ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ ಮಾತನಾಡಿ ಶಕ್ತಿ ಯೋಜನೆಯ ಯಶಸ್ಸನ್ನು ಆಚರಿಸಲು ಸರ್ಕಾರ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು ಸಂಭ್ರಮಿಸಲಾಗುತ್ತಿದೆ.ತಾಲ್ಲೂಕಿನಲ್ಲಿ ಶಕ್ತಿ ಯೋಜನೆಯೂ 99 ರಷ್ಟು ಸಾಧನೆಯಾಗಿದ್ದು ನಮ್ಮ ಪದಾಧಿಕಾರಿಗಳು ಹಾಗೂ ಅಧಿಕಾರಿಗಳು ಎಲ್ಲರಿಗೂ ತಲುಪಿಸುವಲ್ಲಿ ಶ್ರಮ ವಹಿಸಿದ್ದಾರೆ. ಸರ್ಕಾರದ ಯೋಜನೆಯಿಂದ ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರಿಗೆ ಸಾಕಷ್ಟು ಅನೂಕೂಲಗಳಾಗಿವೆ ಎಂದು ಹೇಳಿದ್ದಾರೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss