Film News: ಕಾಂತರದ ಕಲಾಮಾಂತ್ರಿಕನ ಶಿವಮ್ಮನ ವರ್ಲ್ಡ್ ಟೂರ್ ಬಗ್ಗೆ ಇದೀಗ ಗಲ್ಲಾಪೆಟ್ಟಿಗೆ ತುಂಬೆಲ್ಲಾ ಸುದ್ದಿ ಹಬ್ಬುತ್ತಿವೆ. ಭಾರತದ ಗಡಿದಾಟಿ ಇದೀಗ ವಿಶ್ವದಲ್ಲೇ ಸದ್ದು ಮಾಡೋಕೆ ಶುರು ಮಾಡಿದ್ದಾಳೆ. ಜೊತೆಗೆ ಪ್ರಶಸ್ತಿಗಳ ಸುರಿಮಳೆಯನ್ನೇ ತಂದೊಡ್ಡುತ್ತಿದ್ದಾಳೆ . ಅರೆ ಏನಿದು ಶಿವಮ್ಮಣ ಟೂರ್ ಬಗ್ಗೆ ಹೀಗೇಕೆ ಚಿಂತೆ ಅನ್ಕೊಳ್ಳುತ್ತಿದ್ದೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್…….
ವಿಶ್ವದಲ್ಲೇ ಸದ್ದು ಮಾಡಿದ ಕಾಂತಾರ ಸಿನಿಮಾದ ಶಿವನಿಗೆ ಸೋಲದವರ್ಯಾರು ಹೇಳಿ ಹೌದು. ಕಾಂತಾರ ನಂತರ ರಿಷಬ್ ಶೆಟ್ಟಿ ಮುಟ್ಟಿದ್ದೆಲ್ಲಾ ಚಿನ್ನ. ಇದೀಗ ಕಾಂತಾರ ನಂತರ ರಿಷಬ್ ಶೆಟ್ಟಿ ನಿರ್ಮಾಣದ ಶಿವಮ್ಮ ಸದ್ದು ಮಾಡ್ತಿದೆ. ರಿಷಬ್ ಶೆಟ್ಟಿ ನಟನೆಯಷ್ಟೇ ಅಲ್ಲ. ಸಿನಿಮಾ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ಹಾಗಂತ ಕಮರ್ಷಿಯಲ್ ಸಿನಿಮಾಗಳನ್ನಷ್ಟೇ ಅಲ್ಲ, ಉತ್ತಮ ಕಂಟೆಂಟ್ ಇರುವ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಅದರಲ್ಲೊಂದು ‘ಶಿವಮ್ಮ’.
‘ಶಿವಮ್ಮ’ ಸಿನಿಮಾವನ್ನು ರಿಷಬ್ ಶೆಟ್ಟಿ ತಮ್ಮದೇ ನಿರ್ಮಾಣ ಸಂಸ್ಥೆ ‘ರಿಷಬ್ ಶೆಟ್ಟಿ ಫಿಲ್ಮ್ಸ್’ ಮೂಲಕ ನಿರ್ಮಾಣ ಮಾಡಿದ್ದಾರೆ. ಅಲ್ಲದೆ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದು, ಈ ಸಿನಿಮಾವನ್ನು ಜೈ ಶಂಕರ್ ಆರ್ಯರ್ ನಿರ್ದೇಶನ ಮಾಡಿದ್ದಾರೆ. ಸದ್ಯ ಈ ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕಾಂತಾರ ಯಶಸ್ಸಿನ ಬಳಿಕವೂ ಇಂತಹ ವಿಶಿಷ್ಟ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವುದಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಇನ್ನೊಂದು ಕಡೆ ಕಮರ್ಷಿಯಲ್ ಸಿನಿಮಾಗಳಲ್ಲಿ ಸಕ್ಸಸ್‌ಫುಲ್ ಆಗಿದ್ದರೂ, ಕಂಟೆಂಟ್ ಬೇಸ್ಡ್ ಸಿನಿಮಾ ಕಡೆಗೆ ಒಲವು ತೋರಿದ್ದಕ್ಕೆ ಖುಷಿಯಾಗಿದ್ದಾರೆ.
ಬಿಗ್ ಬಜೆಟ್ ಚಿತ್ರಗಳ ಭರಾಟೆಯಲ್ಲಿ ಕನ್ನಡದ ಕಂಟೆಂಡ್ ಸಿನಿಮಾಗಳು ಭಾರತದ ಗಡಿದಾಟಿ ಸದ್ದು ಮಾಡುತ್ತಿರುವುದು ಹೆಮ್ಮೆಯ ವಿಷಯ. ಶಿವಮ್ಮ ಕೂಡ ವರ್ಲ್ಡ್ ಟೂರ್ ಮುಂದುವರೆಸಿದೆ. ಪ್ರಮುಖ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಭಾಗಿಯಾಗುತ್ತಲೇ ಇದೆ. ಹೋದಲ್ಲೆಲ್ಲಾ ಪ್ರಶಸ್ತಿಗಳನ್ನು ಬಾಚಿಕೊಂಡು ಮುನ್ನುಗ್ಗುತ್ತಿದೆ. ಕನ್ನಡ ಚಿತ್ರರಂಗದ ಗರಿಯನ್ನು ಅಂತರಾಷ್ಟ್ರೀಯ ಮಟ್ಟಿದಲ್ಲಿ ಬಿತ್ತರಿಸುತ್ತಿದೆ.
ಜೈ ಶಂಕರ್ ಆರ್ಯರ್ ನಿರ್ದೇಶನಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೂವರೆಗೂ ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದು ಬೀಗಿದೆ.ಕೊಪ್ಪಳ ಜಿಲ್ಲೆಯ ಯಾರೇಹಂಚಿನಾಳ ಗ್ರಾಮದಿಂದ ಶುರುವಾಗಿದ್ದ ಈ ಜರ್ನಿ ಈಗ ಹತ್ತಾರು ದೇಶಗಳನ್ನು ಸುತ್ತಿ, ಹಲವಾರು ಪ್ರಶಸ್ತಿ, ಪ್ರಶಂಸೆಗಳನ್ನು ಗಳಿಸುತ್ತಿದೆ. ‘ಶಿವಮ್ಮ’ ದೇಶದಲ್ಲಷ್ಟೇ ಅಲ್ಲ. ವಿದೇಶಿಗರ ಪ್ರೀತಿಗೂ ಪಾತ್ರವಾಗಿದೆ.
‘ಶಿವಮ್ಮ’ ಚಿತ್ರ ತನ್ನ ಗೆಲುವಿನ ಪ್ರಯಾಣವನ್ನು ಮುಂದುವರಿಸಿದ್ದು, ಇದೂವರೆಗೂ ಗೆದ್ದ ಪ್ರಮುಖ ಪ್ರಶಸ್ತಿಗಳ ದೊಡ್ಡ ಪಟ್ಟಿ ಇಲ್ಲಿದೆ. ನ್ಯೂ ಕರೆಂಟ್ಸ್ ಪುರಸ್ಕಾರ, ಬುಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ,2022 ಯಂಗ್ ಜೂರಿ ಪುರಸ್ಕಾರ, ಫೆಸ್ಟಿವಲ್ ಡೆಸ್ 3 ಕಾಂಟಿನೆಂಟಸ್ , ನಾಂಟೆಸ್ 2022 ಅತ್ಯುತ್ತಮ ನಿರ್ದೇಶಕ, ಫಾಜರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಗ್ರಾಂಡ್ ಪ್ರಿಕ್ಸ್ ಅಟ್ ಜೆರ್ಕೋಲೊ ಹೈನಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಚೀನಾ ಬ್ಲಾಕ್ ಮೂವಿ , ಸ್ವಿಟ್ಜರ್ಲ್ಯಾಂಡ್ ಫಜರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ , ಇರಾನ್ ಗೋಥೆಂಬರ್ಗ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಸ್ಪೀಡನ್ ಫಿಲ್ಮ್ ಫೆಸ್ಟ್ ಮುಂಚಿಯನ್, ಮ್ಯುನಿಚ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಜೆರ್ಕಾಲೋ , ರಷ್ಯಾ ಇಮೆಜಿನ್ ಇಂಡಿಯಾ, ಸ್ಪೇನ್ ಅಲ್ಬರ್ಟಾ ಭಾರತೀಯ ಚಲನಚಿತ್ರೋತ್ಸವ, ಕೆನಡಾ ಇಂಡಿಯನ್ ಪಿಲ್ಮ್ ಫೆಸ್ಟಿವಲ್, ಮೆಲ್ಬೋರ್ನ್ ಅಂಡ್ರಿ ತರ್ಕೊವ್ಸ್ಕಿ ಅಂತರ್ರಾಷ್ಟ್ರೀಯ ಚಿತ್ರೋತ್ಸವ , ರಷ್ಯಾ.
‘ಶಿವಮ್ಮ’ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗೆದ್ದು ಸುದ್ದಿ ಮಾಡುತ್ತಿದೆ. ಹಾಗೇ ಮಾಡುವುದಕ್ಕೆ ಕಾರಣ ಶಿವಮ್ಮನ ಕಥೆ. ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿರೋ ಶಿವಮ್ಮನ ಕಥೆಯೇ ಈ ಸಿನಿಮಾ. 46 ವರ್ಷದ ಶಿವಮ್ಮ ಪಾರ್ಶ್ವವಾಯು ಪೀಡಿತನಾದ ತನ್ನ ಪತಿಯನ್ನು ಹಾಗೂ ತನ್ನ ಮಕ್ಕಳ ಭವಿಷ್ಯವನ್ನು ನೆಟ್ವರ್ಕ್ ಮಾರ್ಕೆಟಿಂಗ್ ವ್ಯಾಪಾರ ಮಾಡಿ ಬದುಕು ನಡೆಸುವ ಹೋರಾಟದ ಕಥೆ. ಮಹಿಳೆಯೊಬ್ಬಳ ಹೊರಾಟದ ಕಥೆಗೆ ವಿಶ್ವದಾದ್ಯಂತ ಮನ್ನಣೆ ಗಿಟ್ಟಿಸಿಕೊಂಡಿದೆ. ಸದ್ಯ ಪ್ರಪಂಚ ಪರ್ಯಟನೆ ಮಾಡುತ್ತಿರುವ ‘ಶಿವಮ್ಮ’, ಶೀಘ್ರದಲ್ಲಿ ಭಾರತಕ್ಕೆ ಮರಳುತ್ತಿದೆ. ಭಾರತದಲ್ಲೂ ಶಿವಮ್ಮ ಕಥೆ ನೋಡಿ ಪ್ರೇಕ್ಷಕರು ಮೆಚ್ಚುಗೆ ಸೂಚಿಸುತ್ತಾರೆ ಅನ್ನೋ ನಂಬಿಕೆ ರಿಷಬ್ ಮತ್ತು ತಂಡದವರದ್ದು.