ಸರ್ಕಾರಿ ನೌಕರರ ಸಂಘದಿಂದ ಗೋವುಗಳ ರಕ್ಷಣೆಗೆ 100 ಕೋಟಿ ಸಹಾಯಧನ : ಸಚಿವ ಪ್ರಭು ಚೌಹಾಣ್

ಶಿವಮೊಗ್ಗ: ಸರ್ಕಾರಿ ನೌಕರರ ಸಂಘದಿಂದ ಗೋವುಗಳ ರಕ್ಷಣೆಗೆ 100 ಕೋಟಿ ಸಹಾಯಧನ ನೀಡಲಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚೌಹಾನ್ ಹೇಳಿದ್ದಾರೆ. ಬಿಜೆಪಿ ಸರ್ಕಾರ ಬಂದ ಮೇಲೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಪುಣ್ಯದತ್ತು ಯೋಜನೆ ಜಾರಿಯಾಗಿದೆ, ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ಗೋವುಗಳನ್ನು ರಕ್ಷಿಸಲಾಗಿದೆ. 100 ಸರ್ಕಾರಿ ಗೋಶಾಲೆ ಆರಂಭಿಸುತ್ತೇವೆಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಭೆಯಲ್ಲಿ ಮಾಜಿ ಶಾಸಕ ಶ್ರೀಶೈಲಪ್ಪಗೆ ಹೃದಯಾಘಾತ : ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ನಿಧನ

ಡಿಸೆಂಬರ್ ಅಂತ್ಯದೊಳಗೆ 30 ಗೋಶಾಲೆಗಳನ್ನು ಆರಂಭಿಸುವುದಾಗಿ ಸಚಿವ ಪ್ರಭು ಚೌಹಾಣ್ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಜಾನುವಾರ ಚರ್ಮಗಂಟು ರೋಗ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗುತ್ತಿದೆ. ಲಸಿಕೆಗಾಗಿ ಸರ್ಕಾರ 13 ಕೋಟಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಗೋವುಗಳ ರಕ್ಷಣೆಗೆ ಸಹಾಯವಾಣಿ ಪ್ರಾರಂಭಿಸಲಾಗಿದೆ. ಬೆಂಗಳೂರು, ಬೆಳಗಾವಿ ವಿಭಾಗದಲ್ಲಿ ಚಾಲನೆ ನೀಡಲಾಗಿದೆ. ರಾಜ್ಯದಲ್ಲಿ 400 ಪಶು ವೈದ್ಯರ ನೇಮಕಾತಿಗೆ ಆದೇಶ ನೀಡಲಾಗಿದೆ ಪ್ರಭು ಚೌಹಾಣ್ ತಿಳಿಸಿದರು.

ಓಲಾ, ಊಬರ್ ಆಟೋಗಳಿಗೆ ದರ ನಿಗದಿ ಮಾಡಿದ ಸಾರಿಗೆ ಇಲಾಖೆ

ನಟ ಕಿಚ್ಚ ಸುದೀಪ್ ಅವರನ್ನು ಪುಣ್ಯಕೋಟಿ ದತ್ತು ಯೋಜನೆಗೆ ರಾಯಭಾರಿಯಾಗಿ ನೇಮಿಸಲಾಗಿದೆ. ನಿನ್ನೆ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರು ರಾಯಭಾರಿ ನೇಮಕಾತಿ ಲೆಟರ್ ಅನ್ನು ಸುದೀಪ್ ಅವರಿಗೆ ವಿತರಿಸಿದ್ದಾರೆ. ನಟ ಸುದೀಪ್ ಅವರು 31 ಗೋವುಗಳನ್ನು ದತ್ತು ಪಡೆಯುವುದಾಗಿ ಹೇಳಿದ್ದಾರೆ. ಪ್ರತಿ ಜಿಲ್ಲೆಗೊಂದರಂತೆ 31 ಗೋವುಗಳನ್ನು ಸರ್ಕಾರಿ ಗೋಶಾಲೆಗಳಿಂದ ದತ್ತು ಪಡೆಯಲಿದ್ದಾರೆ ಎಂದು ಸುದೀಪ್ ಅವರ ನಿವಾಸದಲ್ಲಿ ಗೋಪೂಜೆ ಮಾಡಿ ಹೇಳಿದ್ದಾರೆ.

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಭೆಯಲ್ಲಿ ಮಾಜಿ ಶಾಸಕ ಶ್ರೀಶೈಲಪ್ಪಗೆ ಹೃದಯಾಘಾತ : ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ನಿಧನ

ಅಕ್ರಮ ಹಣ ವರ್ಗಾವಣೆ ಪ್ರಕರಣ : ಯೆಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಪೂರ್ ಗೆ ಜಾಮೀನು

About The Author