Banglore news:
ಶಿವಮೊಗ್ಗದಲ್ಲಿ ನಡೆಯುತ್ತಿರುವ ಸಾವರ್ಕರ್ ವಿವಾದ ವಿಚಾರವು ಇದೀಗ ರಾಜಕೀಯ ನಾಯಕರ ಕಿತ್ತಾಟಕ್ಕೆ ಕಾರಣವಾಗುತ್ತಿದೆ. ಕಾಂಗ್ರೆಸ್ ಬಿಜೆಪಿ ನಾಯಕರು ಇದೇ ವಿಚಾರವಾಗಿ ಟಾಕ್ ವಾರ್ ಶುರುವಾಗಿದೆ.ಒಬ್ಬರ ಮೇಲೆ ಮತ್ತೊಬ್ಬರು ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ.ವಿಪಕ್ಷ ನಾಯಕ ಸಿದ್ಧರಾಮಯ್ಯ ಕೂಡ ಇದೀಗ ಈಶ್ವರಪ್ಪ ಮಾತಿಗೆ ತಿರುಗೇಟನ್ನು ಕೊಟ್ಟಿದ್ದಾರೆ.
“ಸಾವರ್ಕಾರ್ ರವರ ಜೊತೆ ಟಿಪ್ಪು ಫೋಟೋ ಕೂಡಾ ಹಾಕಬೇಕಿತ್ತು ಮೊದಲು ಕಿತಾಪತಿ ಮಾಡೋದು ಬಿಜೆಪಿಯವರೇ ಕಾಂಗ್ರೆಸ್ ಮೇಲೆ ಗೂಬೆ ಕೂರಿಸೋದು ಬೇಡ ಎಂದು ಈಶ್ವರಪ್ಪ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ. ಸರ್ಕಾರ ಇರೋದು ನಿಮ್ಮದೇ ಕ್ರಮ ತೆಗೆದುಕೊಳ್ಳಿ ”. ಎಂಬುವುದಾಗಿ ಸಿದ್ದರಾಮಯ್ಯ ಈಶ್ವರಪ್ಪ ವಿರುದ್ಧ ಕಿಡಿ ಕಾರಿದ್ದಾರೆ.
ಶಿವಮೊಗ್ಗದಲ್ಲಿ ಚಾಕು ಇರಿತ ಘಟನೆ: ತಪ್ಪಿತಸ್ಥರು ಯಾರೇ ಇದ್ದರೂ ಕಠಿಣ ಕ್ರಮ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಶಿವಮೊಗ್ಗ ಗಲಾಟೆ ಪ್ರಕರಣ: ಖುದ್ದು ಪರಿಸ್ಥಿತಿ ಅವಲೋಕಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ