Saturday, April 19, 2025

Latest Posts

ಶಿವಮೊಗ್ಗ: ಕುಂಕುಮ ನೋಡಿ ಅಮಾಯಕನ ಮೇಲೆ ಅಟ್ಯಾಕ್ ಮಾಡಿದ ಕಿಡಿಗೇಡಿಗಳು

- Advertisement -

ಶಿವಮೊಗ್ಗದಲ್ಲಿ ಅಮೃತ ಮಹೋತ್ಸವಕ್ಕೆ ಅಚಾತುರ್ಯವೊಂದು ನಡೆದಿದ್ದು  ಇನ್ನೂ ಪರಿಸ್ಥಿತಿ ಗಂಭೀರವಾಗಿದೆ.ಕುಂಕುಮ ನೋಡಿಯೇ ಚಾಕು ಇರಿತವಾಗಿದೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.

ನಂದಿ ಸಿಲ್ಕ್ ಸಾರಿ ಅಂಗಡಿಯಲ್ಲಿ  ಕೆಲಸ ಮಾಡುತ್ತಿದ್ದ ಪ್ರೇಮ್ ಸಿಂಗ್ ಮತ್ತೋರ್ವ ಶರವಣನ ಜೊತೆ ಅಂಗಡಿಯನ್ನು ಬಂದ್ ಮಾಡಿ ನಡೆಯುತ್ತಿದ್ದ ಗಲಾಟೆಯನ್ನು ನೋಡಲು ಬಂದಂತಹ ಸಂದರ್ಭದಲ್ಲಿ ಪೊಲೀಸರು  ಗುಂಪುಗಳನ್ನು ಚದುರಿಸುವ ಪ್ರಯತ್ನ ಮಾಡಿದರು ಈ ಸಂದರ್ಭ 2 ಗುಂಪುಗಳು ಓಡಿ ಹೋದವು. ಒಂದು ಗುಂಪು ಎಂಕೆಕೆ ಬಳಿ ಬಂದು ನಿಲ್ಲತ್ತೆ. ಪಕ್ಕದಲ್ಲೇ ಪ್ರೇಮ್ ಸಿಂಗ್ ಶರವಣ ಇಬ್ಬರೂ ಓಡಲಾರಂಭಿಸುತ್ತಾರೆ. ಪ್ರೇಮ್ ಸಿಂಗ್ ಕುಂಕುಮವನ್ನು ಇಟ್ಟಿದ್ದುದರಿಂದ ಆತ ಹಿಂದು ಎಂದು ಖಚಿತ ಪಡಿಸಿ ಆತನನ್ನು ಹಿಡಿದು ಚಾಕುವಿನಿಂದ ಚುಚ್ಚಿ  ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಅದೃಷ್ಟವಶಾತ್ ಶರವಣ ತಪ್ಪಿಸಿಕೊಂಡು ಬಚಾವ್ ಆಗಿದ್ದಾನೆ. ಪ್ರೇಮ್ ಸಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾನೆ.

ಶಿವಮೊಗ್ಗದಲ್ಲಿ ಗಲಬೆಗೆ ಮೂಲ ಕಾರಣವೇನು…?

ಶಿವಮೊಗ್ಗ ನಗರದ ವ್ಯಾಪ್ತಿಯಲ್ಲಿ ಆಗಸ್ಟ್ 18ರವರೆಗೆ ನಿಷೇಧಾಜ್ಞೆ ಜಾರಿ

- Advertisement -

Latest Posts

Don't Miss