Tuesday, April 15, 2025

Latest Posts

ಶಿವಮೊಗ್ಗ ಮೊರಾರ್ಜಿ ವಸತಿ ಶಾಲೆಯಲ್ಲಿ ಊಟದ ನಂತರ 80 ವಿದ್ಯಾರ್ಥಿಗಳು ಅಸ್ವಸ್ಥ

- Advertisement -

ಶಿವಮೊಗ್ಗ: ಜಿಲ್ಲೆಯ ಗೋಂದಿಚಟ್ನಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸುಮಾರು ಎಂಬತ್ತು ವಿದ್ಯಾರ್ಥಿಗಳು ನಿನ್ನೆ ಮಧ್ಯಾಹ್ನದ ಊಟ ಮುಗಿಸಿದ ನಂತರ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿಗಳು ಅಸ್ವಸ್ಥಗೊಳ್ಳಲು ಆಹಾರ ಕಾರಣವೇ ಅಥವಾ ನೀರು ಕಾರಣವೇ ಎನ್ನುವುದು ಸ್ಪಷ್ಟವಾಗಿಲ್ಲ. ಮೆಗ್ಗಾನ್‌ ಆಸ್ಪತ್ರೆಯ ಐದಕ್ಕೂ ಹೆಚ್ಚು ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳು ವಿದ್ಯಾರ್ಥಿಗಳನ್ನು ತಪಾಸಣೆ ಮಾಡಿದ್ದಾರೆ. ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್​ ನೇತೃತ್ವದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಇಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ..

ಮಧ್ಯಾಹ್ನದ ಚಪಾತಿ, ಅನ್ನ, ಸಾಂಬಾರು ಸೇವಿಸಿದ ಬಳಿಕ ಸಂಜೆ ಮಕ್ಕಳಲ್ಲಿ ವಾಂತಿ ಬೇಧಿ ಆರಂಭವಾಗಿದೆಈ ಎಂದು ವಿದ್ಯಾರ್ಥಿನಿಯೊಬ್ಬಳು ಮಾಹಿತಿ ನೀಡಿದ್ದಾಳೆ. ಬಹುತೇಕ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಊಟ ಸೇವಿಸಿದ ತಕ್ಷಣ ವಾಂತಿ ಬೇಧಿ ಕಾಣಿಸಿಕೊಂಡಿದೆ. ಇನ್ನು ಆಸ್ಪತ್ರೆಗೆ ಮಕ್ಕಳ ಪೋಷಕರು, ಅಧಿಕಾರಿಗಳು, ಶಾಲಾ ಶಿಕ್ಷಕರು, ಸಿಬ್ಬಂದಿಗಳು ಆಗಮಿಸಿದ್ದಾರೆ.

ಕೊಪ್ಪಳದಲ್ಲಿ ಇಂದು ಕಾಂಗ್ರೆಸ್ ಪ್ರಜಾಧ್ವನಿ ಕಾರ್ಯಕ್ರಮ : ಕೈ ನಾಯಕರ ಪ್ಲೆಕ್ಸ್ ಗಳಿಗೆ ಬಿಜೆಪಿ ವಿರೋಧ

ನಾಳೆಯಿಂದ ಮತ್ತೆ 18 ದಿನಗಳ ಕಾಲ ಪಂಚರತ್ನ ರಥಯಾತ್ರೆ..

- Advertisement -

Latest Posts

Don't Miss