Sunday, April 20, 2025

Latest Posts

River : ತುಂಬಿ ಹರಿಯುತ್ತಿದ್ದ ನದಿಗೆ ಹಾರಿ ಯುವಕನ ಹುಚ್ಚಾಟ..!

- Advertisement -

Shivamogga News: ಎಲ್ಲೆಡೆ ರಣ ಭೀಕರ ಮಳೆ ತಾಂಡವವಾಡುತ್ತಿದೆ.ಇತ್ತ ಸರಕಾರ ಪೊಲೀಸರು ಜನರಿಗೆ ಎಚ್ಚರಿಕೆ ನೀಡುತ್ತಿದ್ದರೆ, ಇಲ್ಲೊಬ್ಬ ತುಂಬಿ ಹರಿವ ನದಿಗೆ ಹಾರಿ ಹುಚ್ಚಾಟ ಮೆರೆದಿದ್ದಾನೆ.

ಮೈದುಂಬಿ ಹರಿಯುತ್ತಿರುವ ತುಂಗಾ ನದಿಗೆ ಯುವಕ ಹಾರಿರುವ ವಿಡಿಯೋ ಸಾಮಾಜಿಕ ಚಾಲತಾಣದಲ್ಲಿ ವೈರಲ್‌ ಆಗಿದೆ. ನಗರದ ಹೊಳೆ ಬಸ್‌ ನಿಲ್ದಾಣದ ಬಳಿ ಇರುವ ಹೊಸ ಸೇತುವೆ ತಡೆಗೋಡೆ ಮೇಲೆ ನಿಂತು ಯುವಕನೊಬ್ಬ ನದಿಗೆ ಹಾರಿದ್ದಾನೆ.

ಸೇತುವೆ ಮೇಲಿಂದ ಜಿಗಿದು ಸ್ವಲ್ಪ ಹೊತ್ತು ಈಜಿ ಬಳಿಕ ದಡಕ್ಕೆ ತಲುಪಿದ್ದಾನೆ. ರಭಸವಾಗಿ ಹರಿಯುತ್ತಿದ್ದ ನೀರಿನ ಹರಿವಿಗೆ ವಿರುದ್ಧ ದಿಕ್ಕಿನಲ್ಲಿ ಈಜುವ ದೃಶ್ಯ ಸೆರೆಯಾಗಿದೆ.

ಯುವಕ ನದಿಗೆ ಹಾರಿದ್ದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ನದಿಗೆ ಹಾರಿದ ಯುವಕನನ್ನು ಗಂಗಪ್ಪ ಎಂದು ಗುರುತಿಸಲಾಗಿದೆ. ಯುವಕನ ಹುಚ್ಚಾಟ ಕೆಲ ಕಾಲ ಆತಂಕ ಮೂಡಿಸಿತ್ತು ಎನ್ನಲಾಗಿದೆ.

KRS Dam : ಕೆಆರ್ ಎಸ್ ಡ್ಯಾಂ ನಲ್ಲಿ ಹೆಚ್ಚಾದ ನೀರು…! ಸಂತಸದಲ್ಲಿ ರೈತರು

Rain : ಅಡಿಕೆ ತೋಟ ನೋಡಲು ತೆರಳಿದ್ದ ವೃದ್ಧೆ ಶವ ಪತ್ತೆ

MB Pateel : ಮಮದಾಪುರಕೆರೆ ವ್ಯಾಪ್ತಿಯಲ್ಲಿ ಸುಮಾರು 56,000 ಗಿಡಗಳು ಅರಳುತ್ತಿವೆ..!

- Advertisement -

Latest Posts

Don't Miss