film News: ಇತ್ತೀಚೆಗಷ್ಟೇ ಹುಟ್ಟುಹಬ್ಬವನ್ನು ಆಚರಿಸಿ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ನೀಡಿದ ಹ್ಯಾಟ್ರಿಕ್ ಹೀರೋ ಇದೀಗ ಮತ್ತೆ ಚಿತ್ರರಂಗದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಮೇಲಿಂದ ಮೇಲೆ ತಮ್ಮ ಸಿನಿಮಾಗಳ ಪೋಸ್ಟರ್ ರಿಲೀಸ್ ಮಾಡಿ ಫ್ಯಾನ್ಸ್ ಗೆ ಫುಲ್ ಸರ್ಪ್ರೈಸ್ ಕೊಟ್ಟಿದ್ದಾರೆ. ಪರಭಾಷೆಯ ಕಡೆಗೂ ನಟನಾ ಒಲವನ್ನು ತೋರಿರೋ ಶಿವರಾಜ್ ಕೈಯಲ್ಲಿರೋ ಸಿನಿಮಾಗಳೆಷ್ಟು ..?
ಶಿವರಾಜ್ ಕುಮಾರ್ ಅವರ 61 ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದ್ದಾರೆ. ಈ ವಯಸ್ಸಿನಲ್ಲೂ ಕನ್ನಡದ ಅತ್ಯಂತ ಬ್ಯುಸಿ ಸೂಪರ್ ಸ್ಟಾರ್ ಆಗಿರುವ ಶಿವಣ್ಣ ಅವರ ನಟನೆಯ ಹಲವು ಸಿನಿಮಾಗಳ ಪೋಸ್ಟರ್, ಟೀಸರ್, ಲುಕ್, ಹೊಸ ಸಿನಿಮಾಗಳ ಘೋಷಣೆಗಳು ಆಗಿವೆ. ಇದರ ನಡುವೆ ಹೆಚ್ಚು ಗಮನ ಸೆಳೆದಿರುವುದು ಶಿವಣ್ಣ 34 ವರ್ಷಗಳ ಹಿಂದೆ ಮಾಡಿದ್ದ ಸಿನಿಮಾದ ಮುಂದಿನ ಭಾಗ ಘೋಷಣೆ ಆಗಿರುವುದು. 1989 ರಲ್ಲಿ ಬಿಡುಗಡೆ ಆಗಿದ್ದ ಇನ್ಸ್ಪೆಕ್ಟರ್ ವಿಕ್ರಂ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಆವರೆಗೆ ನೋಡಿರದ ರೀತಿಯ ಫನ್ನಿ ಆದರೆ ಬುದ್ಧಿವಂತ ಇನ್ಸ್ಪೆಕ್ಟರ್ ಪಾತ್ರದಲ್ಲಿ ಶಿವಣ್ಣ ಮಿಂಚಿದ್ದರು. ಕನ್ನಡದಲ್ಲಿ ಈವರೆಗೆ ಬಂದಿರುವ ಪೊಲೀಸ್ ಸಿನಿಮಾಗಳಲ್ಲಿ ಭಿನ್ನವಾದ ಸಿನಿಮಾ ಇನ್ಸ್ಪೆಕ್ಟರ್ ವಿಕ್ರಂ ಆಗಿದೆ. ಇದೇ ಸಿನಿಮಾವನ್ನು ಮೂಲವಾಗಿರಿಸಿಕೊಂಡು ಈಗ ಇನ್ಸ್ಟೆಪ್ಟರ್ ವಿಕ್ರಂ ರಿಟರ್ನ್ಸ್ ಹೆಸರಿನ ಸಿನಿಮಾವನ್ನು ಘೋಷಿಸಲಾಗಿದೆ.
ಒಂದೆಡೆ ಅಭಿಮಾನಿಗಳು ಶಿವರಾಜ್‌ಕುಮಾರ್ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸುತ್ತಿದ್ದರೆ, ಮತ್ತೊಂದೆಡೆ ಶಿವರಾಜ್‌ಕುಮಾರ್ ನಟಿಸುತ್ತಿರುವ ಮುಂದಿನ ಚಿತ್ರಗಳ ತಂಡಗಳು ತಮ್ಮ ನಟನ ಹುಟ್ಟುಹಬ್ಬದ ದಿನದಂದು ವಿಶೇಷ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳು ಸಂತಸ ಹಾಗೂ ಸರ್‌ಪ್ರೈಸ್‌ಗೆ ಒಳಗಾಗುವಂತೆ ಮಾಡಿದ್ದಾರೆ.
ಈ ದಿನದಂದು ಶಿವರಾಜ್‌ಕುಮಾರ್ ನಟಿಸಲಿರುವ ಹಲವಾರು ಚಿತ್ರಗಳ ಅಪ್‌ಡೇಟ್ ಹೊರಬಿದ್ದಿದ್ದು, ಅದರಲ್ಲಿ ಬಹುಮುಖ್ಯವಾಗಿ ಹೆಚ್ಚು ಸದ್ದು ಮಾಡುತ್ತಿರುವುದು ಘೋಸ್ಟ್ ಚಿತ್ರ. ಹೌದು, ಈ ಚಿತ್ರದ ಚಿತ್ರೀಕರಣ ಮುಗಿದು ಬಿಡುಗಡೆಗೆ ಸಿದ್ಧವಾಗಿದ್ದು, ಇಂದು ಶಿವರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಬಿಗ್ ಡ್ಯಾಡಿ ಟೀಸರ್ ಸಹ ಬಿಡುಗಡೆಗೊಂಡು ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ.
ಕೆ. ಎಸ್ ರವಿಕುಮಾರ್ ನಿರ್ದೇಶದನಲ್ಲಿ ಶಿವಣ್ಣ- ಗಣೇಶ್ ನಟನೆಯ ಸಿನಿಮಾ ಘೋಷಣೆ ಆಗಿದೆ. ಸೂರಪ್ಪ ಬಾಬು ಈ ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ಸೆಂಚುರಿ ಸ್ಟಾರ್ ಹಾಗೂ ಪ್ರಭುದೇವ ನಟನೆಯ ಹೊಸ ಸಿನಿಮಾ ಟೈಟಲ್ ರಿವೀಲ್ ಆ. ರಾಕ್‌ಲೈನ್ ಬ್ಯಾನರ್‌ನಲ್ಲಿ ಯೋಗರಾಜ್ ಭಟ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ತಮಿಳಿನ ‘ಕ್ಯಾಪ್ಟನ್ ಮಿಲ್ಲರ್’ ಹಾಗೂ ‘ಜೈಲರ್’ ಸಿನಿಮಾಗಳಿಂದ ಸ್ಪೆಷಲ್ ಪೋಸ್ಟರ್ ರಿಲೀಸ್ ಆಗಿದೆ.
ಶಿವರಾಜ್‌ಕುಮಾರ್ – ಗಣೇಶ್ ಕೊಂಬೊ: ಶಿವರಾಜ್‌ಕುಮಾರ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಇದೇ ಮೊದಲ ಬಾರಿಗೆ ಚಿತ್ರವೊಂದಕ್ಕಾಗಿ ಒಂದಾಗುತ್ತಿದ್ದು, ಈ ಚಿತ್ರಕ್ಕೆ ಇನ್ನೂ ಸಹ ಶೀರ್ಷಿಕೆಯನ್ನು ಇಟ್ಟಿಲ್ಲ. ಚಿತ್ರಕ್ಕೆ ಕೆ ಎಸ್ ರವಿಕುಮಾರ್ ಆಕ್ಷನ್ ಕಟ್ ಹೇಳಲಿದ್ದು, ಎಂ ಬಿ ಬಾಬು ಬಂಡವಾಳ ಹೂಡಲಿದ್ದಾರೆ. ಈ ಚಿತ್ರತಂಡ ಸಹ ಶಿವರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದೆ. ಶಿವರಾಜ್‌ಕುಮಾರ್ – ಶಿವರಾಜ್‌ಕುಮಾರ್ ಹಾಗೂ ಅಜೇಯ್ ರಾವ್ ಸಹ ಒಂದು ಮಲ್ಟಿಸ್ಟಾರರ್ ಚಿತ್ರಕ್ಕಾಗಿ ಒಂದಾಗುತ್ತಿದ್ದು, ಈ ಚಿತ್ರಕ್ಕೆ ಕಿರಣ್ ಎಂಬುವವರು ಬಂಡವಾಳ ಹೂಡಲು ಮುಂದಾಗಿದ್ದು, ಬಾಹುಬಲಿ ಎಸ್ ಕೆ ಆಕ್ಷನ್ ಕಟ್ ಹೇಳಲಿದ್ದಾರೆ.
ಶಿವರಾಜ್‌ಕುಮಾರ್ – ಪ್ರಭುದೇವ: ಶಿವರಾಜ್‌ಕುಮಾರ್ ಹಾಗೂ ಪ್ರಭುದೇವ ಒಂದೇ ಚಿತ್ರದಲ್ಲಿ ನಟಿಸುತ್ತಿರುವ ವಿಷಯ ಹಳೆಯದೇ. ಆದರೆ ಈ ಚಿತ್ರಕ್ಕೆ ಕರಟಕ ದಮನಕ ಎಂದು ಹೆಸರಿಡಲಾಗಿದ್ದು, ಇಲ್ಲಿಯವರೆಗೂ ಒಮ್ಮೆಯೂ ಸಹ ಚಿತ್ರತಂಡ ಶೀರ್ಷಿಕೆಯನ್ನು ಯಾವ ಪೋಸ್ಟರ್‌ನಲ್ಲಿಯೂ ಬಳಸಿರಲಿಲ್ಲ. ಆದರೀಗ ಈ ಟೈಟಲ್ ಅನ್ನು ಬಳಸಲು ಚಿತ್ರತಂಡ ಮುಂದಾಗಿದ್ದು, ಇಂದು ಶಿವಣ್ಣನ ಹುಟ್ಟುಹಬ್ಬದ ಪ್ರಯುಕ್ತ ಈ ಚಿತ್ರದ ವಿಶೇಷ ಪೋಸ್ಟರ್ ಬಿಡುಗಡೆಯಾಗಲಿದೆ.
ಇವುಗಳ ಜತೆಗೆ ಧೀರ ಚಿತ್ರ ಸಹ ಘೋಷಣೆಗೊಂಡಿದ್ದು, ನಿರ್ದೇಶಕರಾದ ಕಾರ್ತಿಕ್, ಬಾಹುಬಲಿ, ರಾಮ್ ಧುಲಿಪುಲಿ, ಕೊಟ್ರೇಶ್ ಹಾಗೂ ರವಿಕುಮಾರ್ ಜತೆ ಸಹ ಶಿವರಾಜ್‌ಕುಮಾರ್ ನಟಿಸಲಿರುವ ಚಿತ್ರಗಳ ಪೋಸ್ಟರ್ ಬಿಡುಗಡೆಗೊಂಡಿವೆ. ಈ ಯಾವ ಚಿತ್ರಗಳಿಗೂ ಸಹ ಶೀರ್ಷಿಕೆ ಇನ್ನೂ ಇಡಲಾಗಿಲ್ಲ. ಅತ್ತ ಈ ಹಿಂದೆಯೇ ಘೋಷಣೆಗೊಂಡಿದ್ದ ಶಿವಣ್ಣ ನಟಿಸಲಿರುವ ಚಿತ್ರಗಳಾದ ಕರಟಕ ದಮನಕ, ಭೈರತಿ ರಣಗಲ್ ಹಾಗೂ 45 ಚಿತ್ರಗಳೂ ಸಹ ವಿಶೇಷ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಶಿವಣ್ಣನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿವೆ.