www.karnatakatv.net : ತಮ್ಮ ಪ್ರೀತಿಯ ಸಹೋದರ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ ನೆರವೇರಿಸಿದ ಬಳಿಕ ಶಿವಣ್ಣ ಭಾವುಕರಾದ್ರು. ಅಂತ್ಯಕ್ರಿಯೆ ಬಳಿಕ ಮಾತನಾಡಿದ ಅವರು, ಅಪ್ಪು ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆ ಯಾವುದೇ ಅಡಚಣೆಯುಂಟಾಗದೆ ನೆರವೇರಿತು.
ಇದಕ್ಕೆ ಅಭಿಮಾನಿಗಳು, ಮಾಧ್ಯಮ, ಸರ್ಕಾರ ಹಾಗೂ ಪೊಲೀಸರಿಗೆ ಧನ್ಯವಾದ. ಇನ್ನು ಅಪ್ಪು ನಮ್ಮ ಜೊತೆ ಇಲ್ಲ ಅಂತ ಹೇಳೋದಕ್ಕೆ ನನಗೆ ತುಂಬಾ ಕಷ್ಟವಾಗ್ತಿದೆ. ಅಪ್ಪು ನಿಧನದಿಂದ ನನಗೆ ಬಹಳ ನೋವಾಗಿದೆ. ನಾನು ಪುನೀತ್ ಗಿಂತಲೂ 13 ವರ್ಷ ಹಿರಿಯನಾಗಿದ್ದು, ಅವನನ್ನ ನಾನು ಸಣ್ಣ ಮಗುವಿನಿಂದಲೂ ನೋಡಿದ್ದೆ. ಹೀಗಾಗಿ ನನ್ನ ಮಗುವನ್ನೇ ಕಳೆದುಕೊಂಡoತಾಗಿದೆ. ಇದನ್ನು ಅರಗಿಸಿಕೊಳ್ಳೋದಕ್ಕೆ ಆಗುತ್ತಿಲ್ಲ ಅಂತ ಶಿವಣ್ಣ ಭಾವುಕರಾದ್ರು.
ಇನ್ನು ಅಪ್ಪು ಸಮಾಧಿಗೆ ಹಾಲು ತುಪ್ಪವಾಗುವವರೆಗೂ ಅಭಿಮಾನಿಗಳಗೆ ಸಮಾಧಿಯ ದರ್ಶನಕ್ಕೆ ಅವಕಾಶವಿರೋದಿಲ್ಲ. ಹೀಗಾಗಿ ಮಂಗಳವಾರದವರೆಗೂ ಅಭಿಮಾನಿಗಳು ನಮ್ಮ ಜೊತೆ ಸಹಕರಿಸಬೇಕು, ನಿಮ್ಮ ಅಪ್ಪುನನ್ನ ನೀವು ನೋಡದೆ ಯಾರು ನೋಡ್ತಾರೆ ಅಂತ ಅಪ್ಪು ಅಭಿಮಾನಿಗಳಲ್ಲಿ ಶಿವಣ್ಣ ಮನವಿ ಮಾಡಿಕೊಂಡ್ರು. ಇನ್ನು ಪುನೀತ್ ಎಲ್ಲೂ ಹೋಗಿಲ್ಲ. ನಮ್ಮೆಲ್ಲರಲ್ಲೂ ಇದ್ದಾನೆ ಅಂತ ಹೇಳಿದ ಶಿವಣ್ಣ, ಆತ್ಮಹತ್ಯೆಯಂತಹ ಹೇಯ ನಿರ್ಧಾರಗಳನ್ನ ಅಪ್ಪು ಅಭಿಮಾನಿಗಳು ಮಾಡಬಾರದು. ಆತ್ಮಹತ್ಯೆಯಂತಹ ನಡೆ ಅಪ್ಪುಗೆ ಎಂದಿಗೂ ಇಷ್ಟವಾಗುತ್ತಿರಲಿಲ್ಲ. ಎಲ್ಲರಿಗೂ ನಿಮ್ಮದೇ ಆದ ಕುಟುಂಬವಿರುತ್ತೆ. ಅವರ ಜವಾಬ್ದಾರಿ ನಿಮ್ಮ ಮೇಲಿರುತ್ತೆ. ಜೀವನದಲ್ಲಿ ಬರುವ ನೋವನ್ನು ನುಂಗಿಕೊoಡು ಮುಂದೆ ಸಾಗಬೇಕು ಅಂತ ಮತ್ತೆ ಅಭಿಮಾನಿಗಳಲ್ಲಿ ಶಿವಣ್ಣ ವಿನಂತಿ ಮಾಡಿಕೊಂಡ್ರು.