Shivaraj Thangadagi : ವಿಪಕ್ಷದವರಿಗೆ ಬಾಯಿ ಚಪಲ: ಸಚಿವ ಶಿವರಾಜ್ ತಂಗಡಗಿ

Chithradurga News :ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತರುತ್ತಿದೆ. ಈಗಾಗಲೇ ಮೂರು ಗ್ಯಾರಂಟಿಗಳು ಜಾರಿಗೆ ಬಂದಿವೆ.‌ ಮುಂದಿನ‌ ತಿಂಗಳು ಪ್ರತಿ ಮಹಿಳೆಗೆ 2 ಸಾವಿರ ಹಣ ನೀಡುವ ಗೃಹ ಲಕ್ಷ್ಮೀ ಗ್ಯಾರಂಟಿ ಜಾರಿಗೆ ಬರಲಿದೆ. ಇದನ್ನು ಸಹಿಸಲು ಆಗದ ವಿಪಕ್ಷಗಳ ನಾಯಕರು ಬಾಯಿ ಚಪಲಕ್ಕೆ ಆರೋಪ ಮಾಡುತ್ತಿದ್ದಾರೆ‌.

ರಾಜ್ಯ ವಿಪಕ್ಷ ನಾಯಕರಿಗೆ ಆರೋಪ ಮಾಡುವುದು ಚಾಳಿಯಾಗಿದೆ. ರೈತರ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಏನೆಲ್ಲಾ ಕಾರ್ಯಕ್ರಮ ರೂಪಿಸಿದ್ದಾರೆ ಎಂಬುದು ಜನತೆಗೆ ಗೊತ್ತಿದೆ.

ಯಾವುದೇ ವಿಚಾರ ಇಲ್ಲದ ಕಾರಣಕ್ಕಾಗಿ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಈ ದೇಶದಲ್ಲಿ ರೈತರ ಕಲ್ಯಾಣ, ಬಡವ, ದಲಿತ, ಅಲ್ಪಸಂಖ್ಯಾತ, ಮಹಿಳೆಯ ಸಬಲೀಕರಣವಾಗಿದ್ದರೆ ಅದು ಕಾಂಗ್ರೆಸ್ ನಿಂದ ಮಾತ್ರ. ಬಿಜೆಪಿ ಮತ್ತು ಜೆಡಿಎಸ್ ನವರು ರೈತರು, ದಲಿತರಿಗೆ ಏನು ಮಾಡಿದ್ದಾರೆ ಎಂದು ಹೇಳಲಿ ಎಂದು ಸಚಿವರು ಮಾರ್ಮಿಕವಾಗಿ ಪ್ರಶ್ನಿಸಿದರು.

Shivaraj Thangadagi : ಎಂಪಿ ಚುನಾವಣೆಯಲ್ಲಿ ಬಿಜೆಪಿಗೆ ಚಿಪ್ಪು ಗ್ಯಾರಂಟಿ : ಸಚಿವ ಶಿವರಾಜ್ ತಂಗಡಗಿ

Sharavathi :ಶರಾವತಿ ಕಣಿವೆ ಜಲ ವಿದ್ಯುತ್ ಯೋಜನೆ ಸಂತ್ರಸ್ಥ ಕುಟುಂಬಗಳ ಬೇಡಿಕೆಗಳ ಕುರಿತ ಪರಿಶೀಲನಾ ಸಭೆ

Siddaramaiah : ದಲಿತರ ಹಿತ ಕಾಪಾಡುವಲ್ಲಿ ರಾಜಿ ಇಲ್ಲ: ಸಿಎಂ ಸಿದ್ದರಾಮಯ್ಯ

 

 

About The Author