ಸಿನಿಮಾ ಸುದ್ದಿ: ಹುಟ್ಟು ಹಬ್ಬಆಚರಿಸಿಕೊಂಡ ನಟ ಶಿವರಾಜ್ ಕುಮಾರ್ ಅವರಿಗೆ ಸಿನಿಮಾ ರಂಗದ ದಿಗ್ಗಜರು ಮಾತ್ರವಲ್ಲ, ರಾಜಕೀಯ ಗಣ್ಯರು ಕೂಡ ಶುಭಾಶಯ ಕೋರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಕಿಚ್ಚ ಸುದೀಪ್ ಸೇರಿದಂತೆ ಹಲವು ಗಣ್ಯರು ಶಿವಣ್ಣನ ಹುಟ್ಟು ಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ, ‘ಕನ್ನಡ ಚಿತ್ರರಂಗದ ಖ್ಯಾತ ಹಾಗೂ ಪ್ರತಿಭಾವಂತ ನಟ ಶಿವರಾಜ್ ಕುಮಾರ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ನಟನಾ ಕೌಶಲದಿಂದ ಮಾತ್ರವಲ್ಲ ತಮ್ಮ ವಿನಯಶೀಲ ನಡೆ ನುಡಿಗಳಿಂದಲೂ ಕೋಟ್ಯಂತರ ಜನರ ಪ್ರೀತಿ – ಅಭಿಮಾನಿಗಳಿಗೆ ಪಾತ್ರವಾಗಿರುವ ಶಿವರಾಜ್ ಕುಮಾರ್ ಅವರಿಗೆ ಆಯುಷ್ಯ ಮತ್ತು ಆರೋಗ್ಯದ ಭಾಗ್ಯ ಕೂಡಿ ಬರಲಿ ಎಂದು ಹಾರೈಸುತ್ತೇನೆ’ ಎಂದಿದ್ದಾರೆ.
ಕಿಚ್ಚ ಸುದೀಪ್ ಕೂಡ ಟ್ವೀಟ್ ಮಾಡಿದ್ದು, ‘ನಿಮ್ಮ ಉತ್ತರ ಆರೋಗ್ಯ, ಯಶಸ್ಸು, ಸಂತೋಷ ಸದಾ ಹೀಗೆ ಸಿಗುತ್ತಿರಲಿ. ಶಿವಣ್ಣ ಹುಟ್ಟು ಹಬ್ಬದ ಶುಭಾಶಯಗಳು. ಸದಾ ಎಲ್ಲರಿಗೂ ಹೀಗೆ ಸ್ಫೂರ್ತಿ ತುಂಬುತ್ತೀರಿ’ ಎಂದಿದ್ದಾರೆ
ಕಲಾ ಪರಂಪರೆಯ ಕುಡಿ ನಟ ಡಾ.ಶಿವರಾಜ್ ಕುಮಾರ್ ಅವರ ಹುಟ್ಟು ಹಬ್ಬಕ್ಕೆ ಹಾರ್ದಿಕ ಶುಭಾಶಯಗಳು. ಕಲಾ ಪ್ರಪಂಚಕ್ಕೆ ನೀವು ಕೊಟ್ಟಿರುವ ಕೊಡುಗೆ ಅಪಾರ. ಹೀಗೆ ಅಭಿಮಾನಿಗಳನ್ನು ರಂಜಿಸುತ್ತಾ ಇರಲಿ ಎಂದು ಹಾರೈಸುವೆ. ಹುಟ್ಟು ಹಬ್ಬದ ದಿನದಂದು ನಡೆಯುತ್ತಿರುವ ನಿಮ್ಮ ಹೊಸ ಸಿನಿಮಾಗಳ ಎಲ್ಲ ಕಾರ್ಯಕ್ರಮಗಳಿಗೆ ಶುಭ ಕೋರುವೆ’ ಎಂದು ಫೇಸ್ ಬುಕ್ ನಲ್ಲಿ ಡಾ.ಅಂಬರೀಶ್ ಅವರ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ ಸುಮಲತಾ ಅಂಬರೀಶ್.