ಇದಕ್ಕೆ ಇವ್ರು ದೊಡ್ಮನೆಯವರು ಅನ್ನೋದು..!!
ಗೀತಾ ಅವರು ಸೆಟ್‌ಗೆ ಭೇಟಿ ನೀಡಿದಾಗ ಅಲ್ಲಿದ್ದ ಪ್ರತಿಯೊಬ್ಬರಿಗೂ ಸಹಿ ತಿಂಡಿಗಳನ್ನು ತಂದು ಕೊಡುತ್ತಿದ್ದರಂತೆ. ಒಬ್ಬರಿಗೆ ಸಿಕ್ಕಿ ಮತ್ತೊಬ್ಬರಿಗೆ ಸಿಕ್ಕಿಲ್ಲ ಅಂದ್ರೆ ಬೇಸರ ಆಗಬಾರದು ಎಂದು ಇಡೀ ಸೆಟ್‌ನಲ್ಲಿರುವವರಿಗೆ ತರುತ್ತಿದ್ದಂತೆ.
ಮನೆ ಪ್ರೊಡಕ್ಷನ್ ಅಂತ ಬಂದಾಗ ಅಮ್ಮನೂ ಹಾಗೆ ಇದ್ದರು. ಏನೇ ಮಾಡಿದ್ದರು ಶಿಸ್ತಿನಿಂದ ಮಾಡುತ್ತಿದ್ದರು. ದೊಡ್ಡ ಕಲಾವಿದರಿಗೆ ಮಾತ್ರ ಗೌರವವಲ್ಲ ಪ್ರತಿಯೊಬ್ಬ ಸಹ ಕಲಾವಿದರಿಗೂ ಅಮ್ಮ ಮಾಡುತ್ತಿದ್ದ ರೀತಿಯಲ್ಲಿ ನಡೆಯುತ್ತಿರುವುದು.
ನಾನು ಗೀತಾ ಜೀವನವನ್ನು ಎಂಜಾಯ್ ಮಾಡುತ್ತೀವಿ. ಹಣ ಮಾಡಬೇಕು ಗಂಟು ಕಟ್ಟಿಕೊಂಡು ಇಟ್ಟಿಕೊಳ್ಳಬೇಕು ಆ ಬುದ್ಧಿ ನಮಗೆ ಇಲ್ಲ. ದುಡ್ಡಿದ್ದರೆ ಹೋಗಬೇಕು ಅಷ್ಟೆ. ಜೀವನದಲ್ಲಿ ನಮಗೆ ಲೆಕ್ಕಾಚಾರನೇ ಇಲ್ಲ. ಒಂದು ಸಮಯದಲ್ಲಿ ಅಪ್ಪಾಜಿ ಮನೆಗೆ ಬಂದು ಗೀತಾಗೆ ಕಂದಾ ನಿನ್ನ ಗಂಡ ಕೆಲಸಗಳನ್ನು ನೋಡಿಕೋ ಎಂದು ಹೇಳಿದ್ದರು ಆಗ ಗೀತಾ ಶುರು ಮಾಡಿದ್ದು. ಇದು ನಮಗೆ ಗೊತ್ತಾಗಲ್ಲ ಅಮ್ಮ ಏನು ಮಾಡಿದ್ದರು ಅದನ್ನು ಪಾಲಿಸುತ್ತಿರುವುದು. ಪೂರ್ಣಿಮಾ ಹೆಸರಿನಲ್ಲಿ ಯೂನಿಟ್ ಇತ್ತು ಶ್ರೀಮುತ್ತು ಅಂತ ಮಾಡಿದ್ದಾಗ ಅಪ್ಪಾಜಿ ಖುಷಿ ಪಟ್ಟರು ಆಮೇಲೆ ಎಡಿಟಿಂಗ್ ರೂಮ್ ಓಪನ್ ಮಾಡಿದೆವು. ನಮ್ಮ ಜೀವನ ಶಾಶ್ವತವಲ್ಲ ನಾಳೆ ನಾವು ಹೋಗಬೇಕಿದ್ದರೆ ಎಲ್ಲೋ ಒಬ್ಬರಿಗೆ ಒಳ್ಳೆಯದು ಮಾಡಿದ್ದೀನಿ ಅಂತ ಮನಸ್ಸಿನಲ್ಲಿ ಇರಬೇಕು