ಮನೆಯಲ್ಲೇ ಗುಂಪು ಗುಂಪಾಗಿ ಕುಳಿತು ಟಿವಿಯಲ್ಲಿ ನೆಚ್ಚಿನ ಚಿತ್ರಗಳನ್ನು ವೀಕ್ಷಿಸಿ ಜಾಗರಣೆ ಆಚರಿಸುತ್ತಾರೆ. ಸದ್ಯ ಇದೇ ಮಾದರಿಯಲ್ಲಿ ಚಿತ್ರಮಂದಿರಗಳಲ್ಲೇ ಶಿವರಾತ್ರಿ ಜಾಗರಣೆ ಪ್ರಯುಕ್ತ ಹಿಟ್ ಚಿತ್ರಗಳನ್ನು ಪ್ರದರ್ಶನವನ್ನು ಏರ್ಪಡಿಸುವ ಟ್ರೆಂಡ್ ಹುಟ್ಟುಕೊಂಡಿದೆ.

ಸ್ಟಾರ್ ನಟರ ಹಿಟ್ ಚಿತ್ರಗಳ ಪ್ರದರ್ಶನಗಳನ್ನು ಶಿವರಾತ್ರಿ ಹಬ್ಬದ ದಿನ ಮಧ್ಯರಾತ್ರಿಯಂದು ಆಯೋಜಿಸಲಾಗುತ್ತೆ. ಇನ್ನು ಜಾಗರಣೆಯನ್ನು ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವ ಮೂಲಕ ಆಚರಿಸಲು ಇಚ್ಛಿಸುವವರು ಹಾಗೂ ತಮ್ಮ ನೆಚ್ಚಿನ ನಟರ ಚಿತ್ರಗಳನ್ನು ಮತ್ತೆ ದೊಡ್ಡ ಪರದೆ ಮೇಲೆ ನೋಡಲು ಇಷ್ಟಪಡುವವರು ಈ ವಿಶೇಷ ಪ್ರದರ್ಶನಗಳ ಟಿಕೆಟ್ ಖರೀದಿಸಿ ಚಿತ್ರ ನೋಡಿ ಸಂಭ್ರಮಿಸುತ್ತಾರೆ

ಪುನೀತ್ ರಾಜ್ ಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ಕಾಂಬೊದ ರಾಜಕುಮಾರ – ಪೀಣ್ಯದ ಭಾರತಿ ಚಿತ್ರಮಂದಿರದಲ್ಲಿ – 12.30 AM
ಹೈದರಾಬಾದ್ : ಕಾಂತಾರ – ಸಪ್ತಗಿರಿ ಚಿತ್ರಮಂದಿರ – 12 AM & 3 AM
ಇನ್ನು ಅನೇಕ ಸ್ಟಾರ್ ನಟರ ಸಿನಿಮಾಗಳು ನೀವು ನೋಡಬಹುದು




