Saturday, October 12, 2024

Latest Posts

ಜಿಂದಾಲ್ ಭೂಮಿಗೆ ಕಮೀಷನ್ ಪಡೆದ್ರಾ ಡಿಕೆಶಿ, ಜಾರ್ಜ್…??

- Advertisement -

ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಶೋಭಾ ಕರಂದ್ಲಾಜೆ ಆರೋಪಗಳ ಸುರಿಮಳೆ ಗೈದಿದ್ದಾರೆ. ಮೈತ್ರಿ ಸರ್ಕಾರ ಮಾಡಿಕೊಂಡಿರೋ ಕಾಂಗ್ರೆಸ್ ಜೆಡಿಎಸ್ ನಲ್ಲೇ ಕಿತ್ತಾಟದಿಂದ ಅಭಿವೃದ್ಧಿಯಾಗ್ತಿಲ್ಲ ಅಂತ ಶೋಭಾ ಮೈತ್ರಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಅಲ್ಲದೆ ಜಿಂದಾಲ್ ಗೆ ಭೂಮಿ ಪರಭಾರೆ ಮಾಡಿರೋದರ ಹಿಂದೆ ಡಿಕೆಶಿ, ಜಾರ್ಜ್ ಕೈವಾಡ ಇದೆ ಅಂತ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೇ, ಕಾಂಗ್ರೆಸ್-ಜೆಡಿಎಸ್ ಆಂತರಿಕ ಕಚ್ಚಾಟದಿಂದ ಅಭಿವೃದ್ಧಿಗೆ ಭಾರಿ ಹಿನ್ನಡೆಯಾಗಿದೆ. ಇನ್ನು ಜಿಂದಾಲ್ ಕಂಪನಿಗೆ ಸರ್ಕಾರ ಕಡಿಮೆ ದರದಲ್ಲಿ 3,666 ಎಕರೆ ಭೂಮಿ ಕೊಡುತ್ತಿದೆ. ಯಾವ ಆಧಾರದಲ್ಲಿ ಶುದ್ಧ ಕ್ರಯಪತ್ರ ಮಾಡಿ ಭೂಮಿ ಕೊಟ್ರಿ ಅಂತ ಪ್ರಶ್ನಿಸಿದ ಶೋಭಾ ಕರಂದ್ಲಾಜೆ. ಶುದ್ಧ ಕ್ರಯಪತ್ರ ಮಾಡಿದ ಮೇಲೆ ಸರ್ಕಾರಕ್ಕೆ ಆ ಭೂಮಿ ಮೇಲೆ ಒಡೆತನ ಇರೋದಿಲ್ಲ.

ಅಲ್ಲದೆ ಗಣಿಗಾರಿಕೆ ವಿರುದ್ಧ ಹೋರಾಟ ಮಾಡ್ತಿದ್ದ ಸಿದ್ದು ಈ ಭೂಮಿಯಲ್ಲಿ ಕಬ್ಬಿಣದ ನಿಕ್ಷೇಪ ಇದೆ. ಇದಕ್ಕಾಗಿಯೇ ಎಚ್ ಕೆ ಪಾಟೀಲ್ ಇದನ್ನು ವಿರೋಧಿಸಿ ಪತ್ರ ಬರೆದರು. ಆದ್ರೆ ಅವರ ಪತ್ರಕ್ಕೆ ಗೌರವವೇ ಇಲ್ಲ.ಕೆ ಜೆ ಜಾರ್ಜ್, ಡಿಕೆಶಿ ಇಬ್ರೂ ಕಮೀಷನ್ ಹೊಡೆದು ಜಿಂದಾಲ್ ಗೆ ಭೂಮಿ ಕೊಟ್ಟಿದ್ದಾರೆ. ಇದಕ್ಕೇನಾ ಡಿಕೆಶಿ‌ ಬಳ್ಳಾರಿ ಉಸ್ತುವಾರಿ ವಹಿಸಿಕೊಂಡಿದ್ದು? ಇದು ಡಿಕೆಶಿ, ಜಾರ್ಜ್‌ ನಡೆಸಿದ ವ್ಯವಹಾರವೋ ಅಥವಾ ಸರ್ಕಾರ ನಡೆಸಿರೋ ಅವ್ಯವಹಾರವೋ ಅಂತ ಶೋಭಾ ಕರಂದ್ಲಾಜೆ ಕಟುಕಿದ್ದಾರೆ.

ಅನ್ನಭಾಗ್ಯ ಅಕ್ಕಿಗೆ ಬೀಳುತ್ತಾ ಕನ್ನ…??ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=dZt5NTcgSh4
- Advertisement -

Latest Posts

Don't Miss