Thursday, November 21, 2024

Latest Posts

ಧಾರವಾಡ ರೈತರಿಗೆ ಶಾಕ್: ಜಾಮೀನು ಪಹಣಿಯಲ್ಲಿ ವಕ್ಫ್ ಹೆಸರು ದಾಖಲು

- Advertisement -

Dharwad News: ಧಾರವಾಡ: ಎಲ್ಲೆಡೆ ವಕ್ಫ್ ಆಸ್ತಿ ಕಾಯ್ದೆ ಚರ್ಚೆ ನಡೆಯುತ್ತಿದ್ದು, ಏಕಾಏಕಿಯಾಗಿ ಕೆಲವರ ಆಸ್ತಿ ವಕ್ಫ್ ಬೋರ್ಡ್ ಪಾಲಾಗಿರುವ ಸುದ್ದಿ ಪ್ರತಿದಿನ ಕೇಳುತ್ತಿದ್ದೇವೆ.

ಇದೀಗ ಧಾರವಾಡ ರೈತರಿಗೆ ವಕ್ಫ್ ಬೋರ್ಡ್ ಶಾಕ್ ನೀಡಿದ್ದು, ರೈತರ ಜಾಮೀನುಗಳ ಪಹಣಿಯಲ್ಲಿ ವಕ್ಫ ಹೆಸರು ದಾಖಲಾಗಿದೆ.  ನೂರಾರು ವರ್ಷಗಳಿಂದ ಉಳುಮೆ ಮಾಡುತ್ತ ಬಂದಿರೊ ರೈತರಿಗೆ ಆತಂಕ ಎದುರಾಗಿದೆ.  ಏಕಾಏಕಿಯಾಗಿ ರೈತರ ಪಹಣಿ ಪತ್ರದಲ್ಲಿ ವಕ್ಫ ಆಸ್ತಿಗೆ ಒಳಪಟ್ಟಿದೆ ಎಂದು ಪಹಣಿ ಪತ್ರದ 11 ನೇ ಕಾಲಂ‌ನಲ್ಲಿ ನಮೂದಿಸಲಾಗಿದೆ.

ಧಾರವಾಡ ತಾಲೂಕಿನ ಉಪ್ಪಿನಬೇಟಗೇರಿ ಗ್ರಾಮದ ರೈತರ ಪಹಣಿಯಲ್ಲಿ ಈ ರೀತಿಯಾಗಿದ್ದು, ಸರ್ವೇ ನಂ 20, ಮರಬಸಪ್ಪ ಮಲ್ಲಪ್ಪ ಮಸೂತಿ 3 ಎಕರೆ 13 ಗುಂಟೆ, ಸರ್ವೇ ನಂ 141/2, ಜವಳಗಿ ಬಾಳಪ್ಪ ರುದ್ರಪ್ಪ 26ಗುಂಟೆ, ಸರ್ವೇ ನಂ 141/3 ಜವಳಗಿ ಸರೋಜಾ ಕೊಂ ಕರಿಬಸಪ್ಪ 2ಎಕರೆ 12ಗುಂಟೆ, ಸರ್ವೇ ನಂ 141/4 ಜವಳಗಿ ಗಂಗಪ್ಪ ರುದ್ರಪ್ಪ 3ಎಕರೆ 21ಗುಂಟೆ ರೈತರ ಪಹಣಿಯಲ್ಲಿ ವಕ್ಫ್ ಹೆಸರು ಸೇರ್ಪಡೆಯಾಗಿದೆ.

4ರೈತರ ಪಹಣಿ ಪತ್ರದಲ್ಲಿ ವಕ್ಫ್ ಹೆಸರು ದಾಖಲಾಗಿದ್ದು, ಈ ಘಟನೆ ಗೊಂದಲಕ್ಕೆ ಕಾರಣವಾಗಿದೆ. ಈ ಹಿಂದೆ ವಿಜಯಪುರದಲ್ಲಿಯೂ ಸಹ ಇದೇ ರೀತಿ ರೈತರ ಜಾಗದಲ್ಲಿ ವಕ್ಫ್ ಹೆಸರು ಬೆಳಕಿಗೆ ಬಂದಿತ್ತು. ಇದೀಗ ಧಾರವಾಡ ರೈತರು ಕೂಡ ಈ ಕಾರಣಕ್ಕೆ ಆತಂಕಗೊಂಡಿದ್ದಾರೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ, ಮತ್ತಷ್ಟು ರೈತರು ಬಂದು ಪಹಣಿ ಪತ್ರ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ವಕ್ಫ್ ಹೆಸರು ಕಿತ್ತು ಹಾಕಿ, ನಮ್ಮ ಆಸ್ತಿ ನಮ್ಮದೇ ಆಗಿರಬೇಕೆಂದು ಆಗ್ರಹಿಸಿದ್ದಾರೆ.

- Advertisement -

Latest Posts

Don't Miss