ಡಿಸೆಂಬರ್ 10ರಂದು ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮತ್ತೊಮ್ಮೆ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿವೆ. ಕಳೆದ ಕೆಲ ದಿನಗಳಿಂದ ಚಿನ್ನ–ಬೆಳ್ಳಿ ಮಾರುಕಟ್ಟೆಯಲ್ಲಿ ಹಾವು ಏಣಿ ಆಟ ಮುಂದುವರಿದಿದ್ದು, ಇಂದು ಬೆಳ್ಳಿ ಬೆಲೆ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿ 2 ಲಕ್ಷ ರೂ. ಸನಿಹಕ್ಕೆ ತಲುಪಿದೆ. ಚಿನ್ನದ ದರ ಕೂಡ ಏರಿಕೆ ದಾಖಲಾಗಿದೆ.
ಚಿನ್ನದ ಬೆಲೆ ಗರಿಷ್ಠ ಮಟ್ಟ 1 ಲಕ್ಷದ 30 ಸಾವಿರ ರೂಪಾಯಿಗೆ ತಲುಪಿದ್ದು, ಈ ವಾರ ಬೆಲೆಯಲ್ಲಿ ಏರಿಳಿತ ಕಾಣುತ್ತಿದೆ. ಬೆಳ್ಳಿ ಬೆಲೆ ಭಾರಿ ಹೆಚ್ಚಳ ಆಗಿದ್ದು, ಶೀಘ್ರದಲ್ಲಿ 2 ಲಕ್ಷ ರೂ ಮುಟ್ಟುವ ಸಾಧ್ಯತೆ ಇದೆ. 22 ಕ್ಯಾರೆಟ್ ಚಿನ್ನದ ಬೆಲೆ 22 ಕ್ಯಾರೆಟ್ 1 ಗ್ರಾಂ ಬೆಲೆ 11,945 ರೂಪಾಯಿ ಇದ್ದು, ಇಂದು 80 ರೂ ಏರಿಕೆ ಆಗಿದೆ. 10 ಗ್ರಾಂ ಬೆಲೆ 1,19,450 ರೂಪಾಯಿ ಇದೆ. ಇಂದು 10 ಗ್ರಾಂ ನಲ್ಲಿ 800 ರೂ ಹೆಚ್ಚಳ ಆಗಿದೆ.
ಹಾಗಾದ್ರೆ ಶುದ್ಧ ಚಿನ್ನದ ಇಂದಿನ ದರ ಎಷ್ಟಿದೆ? ಅನ್ನೋದನ್ನ ನೋಡೋದಾದ್ರೆ ಡಿಸೆಂಬರ್ 10 ಬುಧವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 13031 ರೂಪಾಯಿ ಇದ್ದು, ಇಂದು 87 ರೂಪಾಯಿ ಹೆಚ್ಚಳ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,30,310 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಇಂದು 870 ರೂ ಏರಿಕೆ ಆಗಿದೆ.
ಇನ್ನು ಇಂದಿನ ಬೆಂಗಳೂರಿನ ಚಿನ್ನ-ಬೆಳ್ಳಿ ದರ ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 13031 ರೂಪಾಯಿ ಇದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ 1,30,310 ರೂಪಾಯಿ ಇದೆ. ಈ ಬೆಲೆಯಲ್ಲಿ GST ಸೇರಿಲ್ಲ, ಹೀಗಾಗಿ ಮಳಿಗೆಗಳಲ್ಲಿ ವ್ಯತ್ಯಾಸ ಇರಲಿದೆ. ಅದೇರೀತಿ ಬೆಳ್ಳಿ ಬೆಲೆ ಇಂದು ಭಾರಿ ಏರಿಕೆ ಆಗಿದ್ದು, 9 ರೂ ಹೆಚ್ಚಳ ಆಗಿ ಬೆಲೆ 199 ರೂ ಆಗಿದ್ದು, ಕೆಜಿಗೆ 1,99,000 ರೂ ಇದೆ.
ವರದಿ : ಲಾವಣ್ಯ ಅನಿಗೋಳ




