ಹಬ್ಬದ ದಿನ ಕಿಚ್ಚನ ಅಭಿಮಾನಿಗಳಿಗೆ ಶಾಕ್..!

www.karnatakatv.net: ರಾಯಚೂರು : ರಾಜ್ಯಾದ್ಯಂತ ಸುದೀಪ್ ನಟಿಸಿರುವ ಕೋಟಿಗೊಬ್ಬ 3 ಸಿನಿಮಾ ರಿಲಿಸ್ ಆಗುವ ಮುನ್ನ ಅಭಿಮಾನಿಗಳಿಗೆ ಶಾಕ್ ನೀಡಿದೆ.

ಬೆಳಗಿನ ಜಾವ ಅಭಿಮಾನಿಗಳು ಸಂತೋಷದಿoದ ಟಿಯೆಟರ್ ಮುಂದೆ ಕಿಚ್ಚನ ಸಿನಿಮಾ ನೋಡಲು ಮುಗಿಬಿದ್ದಿದ್ರು, ಕೋಟಿಗೊಬ್ಬ 3 ಸಿನಿಮಾ ವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ ಜನರಿಗೆ ಶಾಕ್ ಏದುರಾಗಿದೆ. ತಾಂತ್ರಿಕ ಕಾರಣದಿಂದ ಸಿನೆಮಾ ಕ್ಯಾನ್ಸಲ್ ಆಗಿದ್ದು, ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ರಾಯಚೂರಿನಲ್ಲಿ ಜನರು ನೆಚ್ಚಿನ ನಟನ ಸಿನಿಮಾ ನೋಡಲು ಬಂದವರಲ್ಲಿ ಬೇಸರ ಉಂಟಾಗಿದೆ, ಕೆಲ ಅಭಿಮಾನಿಗಳು ಡಿಸ್ಟ್ರಿಬ್ಯೂಟರ್ಸ್ ಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು

About The Author