ರಾಜಸ್ಥಾನ: ಕಛೇರಿಗೆ ತಡವಾಗಿ ಬಂದಿದಕ್ಕೆ ತಡವಾಗಿ ಬರಲು ಸರಿಯಾದ ಕಾರಣ ನೀಡಿ ಎಂದು ಹಿರಿಯ ಅಧಿಕಾರಿಯೊಬ್ಬರು ಕಿರಿಯ ಅಧಿಕಾರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ ಅದಕ್ಕೆ ಉತ್ತರವಾಗಿ ಕಿರಿಯ ಅಧಿಕಾರಿಯೊಬ್ಬರು ನೀಡಿದ ಉತ್ತರಕ್ಕೆ ಹಿರಿಯ ಅಧಿಕಾರಿ ಬೆಪ್ಪಾಗಿದ್ದಾರೆ. ಅಂತಹದ್ದೇನಿದೆ ಆ ನೋಟಿಸ್ ನಲ್ಲಿ ಅಂತೀರಾ ?
ಇದು ನಡೆದಿರುವುದು ರಾಜಸ್ಥಾನದ ಜೈಪುರದ ವಿದ್ಯುತ್ ನಿಗಮ ಕಛೇರಿಯಲ್ಲಿ. ಕಿರಿಯ ಉದ್ಯೋಗಿಯಾದ ಅಜಿತ್ ಸಿಂಗ್ ಕಛೇರಿಗೆ ತಡವಾಗಿ ಬಂದಿದ್ದಕ್ಕೆ ಹಿರಿಯ ಅಧಿಕಾರಿಯಾದ ಜಿ ಎಸ್ ಬೈರವ ತಡವಾಗಿ ಬಂದಿದ್ದಕ್ಕೆ ಕಾರಣ ನೀಡಿ ಎಂದು ನೋಟಿಸ್ ಕಳುಹಿಸಿದ್ದಾರೆ ಅದಕ್ಕೆ ಉತ್ತರವಾಗಿ ಅಜಿತ್ ಸಿಂಗ್ ನೀವು ಕಛೇರಿಗೆ ದಿನಾಲೂ ತಡವಾಗಿ ಬರುತ್ತೀರಾ ಅದಕ್ಕೆ ನಾನು ಕೂಡಾ ತಡವಾಗಿ ಬಂದಿದ್ದೇನೆ ಎಂದು ಉತ್ತರ ನೀಡಿದ್ದಾನೆ
ಇನ್ನು ಈ ನೋಟಿಸ್ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ. ನಾವು ಇನ್ನೊಬ್ಬರನ್ನು ಪ್ರಶ್ನಿಸುವುದಕ್ಕಿಂತ ಮೊದಲು ನಾವು ಸರಿಯಿರಬೇಕು ಎನ್ನುವುದನ್ನು ಕಲಿಸಿಕೊಡುತ್ತದೆ ಈ ವಿಚಾರ.
INDIA : ಇಟಲಿ ಈಸ್ಟ್ INDIA ಕಂಪನಿಯ ಘೋಷಣೆಯಾಗಿದೆ: BJP ಟ್ವಿಟ್ ಸಮರ
Tuition center: ಮಗಳನ್ನು ಟ್ಯೂಷನ್‌ಗೆ ಬಿಡಲು ಬಂದ ತಂದೆಗೆ ಹೃದಯಾಘಾತ