Sunday, September 8, 2024

Latest Posts

‘ಪ್ರತಿಭಟನಾಕಾರರಿಗೆ ಗುಂಡಿಕ್ಕಿಬಿಡಿ’: ಅಷ್ಟಕ್ಕೂ ಯಾವ ಪ್ರೊಟೆಸ್ಟ್..? ಎಲ್ಲಿ ನಡೀತಿದೆ..?

- Advertisement -

ನಮ್ಮ ನಮ್ಮ ಹಕ್ಕುಗಳನ್ನು ಪಡೆಯಲು ಜನ ಪ್ರತಿಭಟನೆಯನ್ನ ನಡೆಸುತ್ತಾರೆ. ಕೆಲ ಪ್ರತಿಭಟನೆಗಳಿಗೆ ಗೆಲುವು ಸಿಗತ್ತೆ. ಕೆಲವೊಂದಕ್ಕೆ ಸಿಗಲ್ಲ. ಅದೇ ರೀತಿ ಖಜಕಿಸ್ತಾನದ ಜನ ತಮ್ಮ ಹಕ್ಕಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ತೀವ್ರವಾಗಿದ್ದು, ಅವರನ್ನೆಲ್ಲ ಗುಂಡಿಕ್ಕಿಬಿಡಿ ಎಂದು ಅಲ್ಲಿನ ಅಧ್ಯಕ್ಷರಾದ ಕಾಸಿಮ್ ಆದೇಶ ಹೊರಡಿಸಿದ್ದಾರೆ.

ಖಜಕಿಸ್ತಾನದ ಜನ, ಇಂಧನ ಬೆಲೆ ಏರುತ್ತಿರುವುದರ ವಿರುದ್ಧ ಪ್ರತಿಭಟನೆ ನಡೆಸಿ, ಇಂಧನ ಬೆಲೆ ಕಡಿಮೆ ಮಾಡಲು ಆಗ್ರಹಿಸಿದ್ದರು. ಆದ್ರೆ ಅಲ್ಲಿನ ಪರಿಸ್ಥಿತಿ ಕೈಮೀರಿ ಹೋಗಿದ್ದು, ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಮಾರಾಮಾರಿ ನಡೆದು, ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಸಾರ್ವಜನಿಕ ಕಟ್ಟಡಗಳು ಧ್ವಂಸ ಮಾಡಲಾಗಿದೆ. ಅದಕ್ಕೆ ಬೆಂಕಿ ಹಚ್ಚಲಾಗಿದೆ. ಈ ಎಲ್ಲ ಪ್ರತಿಭಟನೆಗೆ ಕಾರಣ ಭಯೋತ್ಪಾದಕರು, ಪ್ರತಿಭಟನಾಕಾರರಿಗೂ ಭಯೋತ್ಪಾದಕರಿಗೂ ಸಂಬಂಧವಿದೆ. ಅವರನ್ನೆಲ್ಲ ಗುಂಡಿಕ್ಕಿ ಕೊಂದು ಬಿಡಿ ಎಂದು ಆದೇಶ ಹೊರಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅಧ್ಯಕ್ಷ ಕಾಸಿಮ್, ದೇಶದಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿರುವವರನ್ನು ಸುಮ್ಮನೆ ಬಿಡುವುದಿಲ್ಲ. ಅವರನ್ನು ನಾಶ ಮಾಡಿಯೋ ಮಾಡುತ್ತೇವೆ. ಅಲ್ಲಿ ಗಲಾಟೆ ಮಾಡುತ್ತಿರುವ ಪ್ರತಿಭಟನಾಕಾರರಿಗೆ ಎಚ್ಚರಿಕೆಯೂ ಕೊಡುವ ಅವಶ್ಯಕತೆ ಇಲ್ಲ. ಅವರನ್ನು ಗುಂಡಿಕ್ಕಿ ಕೊಂದು ಬಿಡಿ ಎಂದು ಈಗಾಗಲೇ ಆದೇಶ ನೀಡಿದ್ದೇನೆಂದು ಹೇಳಿದರು.

ಇನ್ನು ಈ ಬಗ್ಗೆ ಕೆಲವರು ಹೇಳಿಕೆ ನೀಡಿದ್ದು, ಇಂಥ ಹೇಳಿ ಕೊಡುವುದು ತಪ್ಪು. ಅಧ್ಯಕ್ಷರು ಇಂಥ ಹೇಳಿಕೆ ಕೊಡುವ ಬದಲು, ಶಾಂತಿ ತರಲು ಪ್ರಯತ್ನಿಸಬೇಕು. ಬದಲಾಗಿ ಶಾಂತಿ ಕದಡುವ ಹೇಳಿಕೆ ಕೊಡಬಾರದೆಂದು ಹೇಳಿದ್ದಾರೆ.  ಇನ್ನು ಈಗಾಗಲೇ 26 ಆರೋಪಿಗಳಿಗೆ ಗುಂಡಿಕ್ಕಿದ್ದು, 3ಸಾವಿರ ಜನರನ್ನು ಅರೆಸ್ಟ್ ಮಾಡಲಾಗಿದೆ.

- Advertisement -

Latest Posts

Don't Miss