- Advertisement -
www.karnatakatv.net: ದೆಹಲಿಯ ರೋಹಿಣಿ ಕೋರ್ಟ್ ಆವರಣದಲ್ಲಿ ಇಂದು ಮಧ್ಯಾಹ್ನ ಗುಂಡಿನ ದಾಳಿ ನಡೆದಿದ್ದು, ಗ್ಯಾಂಗ್ ಸ್ಟರ್ ಜಿತೇಂದರ್ ಮನ್ ‘ಗೋಗಿ’ ಸೇರಿ ನಾಲ್ವರು ಮೃತಪಟ್ಟಿದ್ದಾರೆ.
ವಕೀಲರ ಸಮವಸ್ತ್ರ ಧರಿಸಿದ್ದ ಮೂವರು ದಾಳಿಕೋರರನ್ನು ರೋಹಿಣಿ ನ್ಯಾಯಾಲಯದಲ್ಲಿ ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ. ಇನ್ನು ಹತ್ಯೆಗೀಡಾಗಿರೋ ಜಿತೇಂದರ್ ಮನ್ ‘ಗೋಗಿ’ಯನ್ನು ಪೊಲೀಸರು ರೋಹಿಣಿ ಕೋರ್ಟ್ ಗೆ ವಿಚಾರಣೆಗೆ ಕರೆತರುವ ವೇಳೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ಪ್ರತಿದಾಳಿ ನಡೆಸಿದ ಪರಿಣಾಮ, ಮೂವರು ದಾಳಿಕೋರರು ಸಹ ಸಾವಿಗೀಡಾಗಿದ್ದಾರೆ.
ಇನ್ನು ಈ ದಾಳಿಯಿಂದಾಗಿ ರಾಜಧಾನಿ ದೆಹಲಿಯ ನ್ಯಾಯಾಲಯದ ಆವರಣದಲ್ಲಿ ಭದ್ರತೆಯ ಬಗ್ಗೆಯೇ ಜನರಲ್ಲಿ ಪ್ರಶ್ನೆ ಹುಟ್ಟುಹಾಕಿದೆ.
- Advertisement -