ರಾಯಚೂರು: ಬೇಸಿಗೆ ಶುರುವಾದಂತೆ ರಾಜ್ಯದ ಜನಕ್ಕೆ ವಿದ್ಯುತ್ ಶಾಕ್ ತಟ್ಟೊ ಲಕ್ಷಣಗಳು ಎದುರಾಗಿವೆ..ಇಡೀ ರಾಜ್ಯಕ್ಕೆ ಅತೀ ಹೆಚ್ಚು ವಿದ್ಯುತ್ ಪೂರೈಸೊ, ವಿದ್ಯುತ್ ಉತ್ಪಾದನಾ ಘಟಕಗಳು ಸ್ಥಗಿತಗೊಂಡಿವೆ..ಇಷ್ಟಕ್ಕೆಲ್ಲಾ ಕಾರಣ ಕಲ್ಲಿದ್ದಲು ಕೊರತೆ.
ಬಿರುಬೇಸಿಗೆಯಲ್ಲಿ ಇಡೀ ರಾಜ್ಯಕ್ಕೆ ವಿದ್ಯುತ್ ಶಾಕ್ ತಟ್ಟೊ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ..ಯಾಕಂದ್ರೆ, ಬೇಸಿಗೆ ಹಿನ್ನೆಲೆ ರಾಜ್ಯಾದ್ಯಂತ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ದಿನಬಳಕೆ, ಕೃಷಿ ಚಟುವಟಿಕೆ ಹಾಗೂ ಕಾರ್ಖಾನೆಗಳಿಗೂ ಬೇಸಿಗೆಯಲ್ಲಿ ಹೆಚ್ಚಿನ ವಿದ್ಯುತ್ ಅತ್ಯವಶ್ಯಕ..ಕಳೆದ ಬಾರೀ ಬೇಸಿಗೆಯಲ್ಲಿ13881 ಮೆಗಾವ್ಯಾಟ್ ವಿದ್ಯುತ್ನ ಬೇಡಿಕೆಯಿತ್ತು. ಆದ್ರೆ ಈ ಬಾರಿ ಮಾರ್ಚ್ ಆರಂಭದಲ್ಲೇ 14700 ಮೆಗಾವ್ಯಾಟ್ ವಿದ್ಯುತ್ ಬೇಡಿಕೆಯಿದೆ.. ಅಷ್ಟು ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಪೂರೈಕೆ ಮಾಡಲು ಕರ್ನಾಟಕ ವಿದ್ಯುತ್ ನಿಗಮ ಹೆಣಗಾಡ್ತಿದೆ.
ರಾಜ್ಯಕ್ಕೆ ಅತೀ ಹೆಚ್ಚು ಅಂದ್ರೆ, ಶೇಕಡಾ 40% ರಷ್ಟು ವಿದ್ಯುತ್ ಅನ್ನು ರಾಯಚೂರು ತಾಲ್ಲೂಕಿನ ಶಕ್ತಿನಗರದ ಆರ್ಟಿಪಿಎಸ್ ಹಾಗೂ ಯರಮರಸ್ನಲ್ಲಿರೊ ವೈಟಿಪಿಎಸ್ ಕೇಂದ್ರಗಳು ಪೂರೈಸುತ್ವೆ. ಬೇಸಿಗೆಯಲ್ಲಂತು ಮುಂಜಾಗ್ರತಾ ಕ್ರಮವಾಗಿ ಅತೀ ಹೆಚ್ಚು ಕಲ್ಲಿದ್ದಲ್ಲು ಸಂಗ್ರಹಣೆ ಮಾಡಬೇಕಿದ್ದ ಕೆಪಿಸಿ, ಅದನ್ನು ಮಾಡದೇ ದಿವ್ಯ ನಿರ್ಲಕ್ಷ ತೋರಿದೆ. ಇದೇ ಕಾರಣಕ್ಕೀಗ ರಾಯಚೂರಿನ ಆರ್ಟಿಪಿಎಸ್ ಹಾಗೂ ವೈಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಭಾರೀ ಪ್ರಮಾಣದ ಕಲ್ಲಿದ್ದಲು ಕೊರತೆ ಎದುರಾಗಿದೆ. ಹೀಗಾಗಿ ಆರ್ಟಿಪಿಎಸ್ನ 8 ಘಟಕಗಳಲ್ಲಿ ಮೂರು ವಿದ್ಯುತ್ ಉತ್ಪಾದನಾ ಘಟಕಗಳು ವಿದ್ಯುತ್ ಉತ್ಪಾದನೆ ಮಾಡದೇ ಸ್ಥಗಿತಗೊಂಡಿವೆ ಎಂದು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೇನನ್ ರಾಜೇಂದ್ರನ್ ಹೇಳುತ್ತಾರೆ.
ಹೌದು..ರಾಯಚೂರಿನ ಆರ್ಟಿಪಿಎಸ್ ಹಾಗೂ ವೈಟಿಪಿಎಸ್ನಲ್ಲಿ ಕಲ್ಲಿದ್ದಿಲು ಕೊರತೆಯಿಂದ ವಿದ್ಯುತ್ ಉತ್ಪಾದನೆಯಲ್ಲಿ ಭಾರೀ ಹಿನ್ನೆಡೆಯಾಗಿದೆ. ಆರ್ಟಿಪಿಎಸ್ನ 8 ಪ್ಲಾಂಟ್ಗಳಲ್ಲಿ 5 ರಲ್ಲಿ ಮಾತ್ರ ವಿದ್ಯುತ್ ಉತ್ಪಾದನೆಯಾಗ್ತಿದ್ದು, ಉಳಿದ ಮೂರು ಪ್ಲಾಂಟ್ ಸ್ಥಗಿತಗೊಂಡಿವೆ. ಆರ್ಟಿಪಿಎಸ್ನ 8 ಪ್ಲಾಂಟ್ಗಳಲ್ಲಿ ವಿದ್ಯುತ್ ಉತ್ಪಾದಿಸಬೇಕೆಂದ್ರೆ, ಒಟ್ಟು 24 ಸಾವಿರ ಟನ್ ಕಲ್ಲಿದ್ದಲು ಬೇಕು. ಆದ್ರೆ ಮೂರು ಘಟಕ ಸ್ಥಗಿತಗೊಂಡಿರೋದ್ರಿಂದ ಉಳಿದ ಐದು ಘಟಕಕ್ಕೆ 18 ಸಾವಿರ ಟನ್ ಕಲ್ಲಿದ್ದಲು ಬೇಕೇಬೇಕು. ವೈಟಿಪಿಎಸ್ಗೆ 17 ಸಾವಿರ ಟನ್ ಕಲ್ಲಿದ್ದಲು ಬೇಕಿದೆ. ಆದ್ರೆ ಸದ್ಯ ಆರ್ಟಿಪಿಎಸ್ನಲ್ಲಿ ಕೇವಲ 50.3 ಸಾವಿರ ಟನ್ ಹಾಗೂ ವೈಟಿಪಿಎಸ್ನಲ್ಲಿ 52.5 ಸಾವಿರ ಟನ್ ಕಲ್ಲಿದ್ದಲು ಮಾತ್ರ ಸ್ಟಾಕ್ ಇದೆ. ಅದ್ರಲ್ಲೂ ಈ ಹಿಂದೆ ನಿತ್ಯ 6-8 ರೇಕುಗಳಲ್ಲಿ ಸಪ್ಲೈ ಆಗ್ತಿದ್ದ ಕಲ್ಲಿದ್ದಲು ಈಗ 2-4 ರೇಕುಗಳಿಗೆ ಇಳಿದಿದೆ. ಇದೇ ಕಾರಣಕ್ಕೆ ಬೇಸಿಗೆಯಲ್ಲಿ ಬೇಡಿಕೆಗೆ ತಕ್ಕಂತೇ ವಿದ್ಯುತ್ ಉತ್ಪಾದನೆಯಾಗ್ತಿಲ್ಲ. ಆರ್ಟಿಪಿಎಸ್ ಹಾಗೂ ವೈಟಿಪಿಎಸ್ನಲ್ಲಿ ಬೆರಳೆಣಿಕೆಯ ದಿನಗಳಿಗಾಗುವಷ್ಟು ಕಲ್ಲಿದ್ದಲು ಮಾತ್ರ ಸ್ಟಾಕ್ ಇದೆ. ಇದು ಹೀಗೆ ಮುಂದುವರೆದ್ರೆ, ಇಡೀ ರಾಜ್ಯ ಕಗ್ಗತ್ತಲ್ಲಿ ಮುಳುಗೋಕೆ ಪಕ್ಕಾ ಅಂತ ಹೇಳಲಾಗ್ತಿದೆ..
ಹೀಗೆ ಕಲ್ಲಿದ್ದಲು ಸಮಸ್ಯೆ ಎದುರಾಗೋಕೆ ಕರ್ನಾಟಕ ವಿದ್ಯುತ್ ನಿಗಮ ಕಾರಣವಂತೆ..ಹೌದು ಕೆಪಿಸಿ, ಕಲ್ಲಿದ್ದಲು ಕಂಪೆನಿಗಳಿಗೆ ಕೊಡಬೇಕಿದ್ದ ಸಾವಿರಾರು ಕೋಟಿ ರೂ.ಬಾಕಿ ಉಳಿಸಿಕೊಂಡಿರೊ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ ಕಲ್ಲಿದ್ದಲು ಕೊರತೆ ಉಂಟಾಗಿದ್ದು, ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕಲ್ಲಿದ್ದಲು ಕೊರತೆಯನ್ನು ನೀಗಿಸಬೇಕಿದೆ. ಇಲ್ದಿದ್ರೆ, ಬೇಸಿಗೆಯಲ್ಲಿ ಇಡೀ ರಾಜ್ಯಕ್ಕೆ ವಿದ್ಯುತ್ ಶಾಕ್ ತಟ್ಟೋದು ಪಕ್ಕಾ.
ವರದಿ: ಅನಿಲ್ ಕುಮಾರ್, ಕರ್ನಾಟಕ ಟಿವಿ, ರಾಯಚೂರು




