Wednesday, October 15, 2025

Latest Posts

ವಿಲನ್ ಲವ್ವರ್ ಆಗಬಾರ್ದ? ವಸಿಷ್ಠಗೆ ಆ ಕೆಪಾಸಿಟಿ ಇದೆ: ಚೇತನ್ ಕೇಶವ್

- Advertisement -

Movie News: ಸದಾ ವಿಲನ್ ಪಾತ್ರದಲ್ಲಿ ಮಿಂಚಿರುವ ನಟ ವಸಿಷ್ಟ ಸಿಂಹ ಅವರನ್ನು ಲವ್ವರ್ ಬಾಯ್ ಆಗಿ ತೋರಿಸಿರುವ ಸಿನಿಮಾ ಅಂದ್ರೆ ಅದು ಲವ್‌ ಲೀ ಸಿನಿಮಾ. ಈ ಚಿತ್ರದ ಬಗ್ಗೆ ಚಿತ್ರದ ನಿರ್ದೇಶಕ ಚೇತನ್ ಕೇಶವ್ ಅವರು ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದಾರೆ.

ಶಾಲಾ ದಿನಗಳಿಂದಲೇ ಸಿನಿಮಾ ಬಗ್ಗೆ ಒಲವು ಹೊಂದಿದ್ದ ಚೇತನ್ ಕೇಶವ್, ಆಗಿಂದಲೇ ಕಥೆ ಬರೆಯಲು ಶುರು ಮಾಡಿದ್ದರು. ರಥಾವರ ಸಿನಿಮಾ ಬಂದ ಬಳಿಕ, ಮುರಳಿ ಅವರ ಬಳಿ, ತನ್ನ ಸಿನಿಮಾ ಕಥೆಯನ್ನು ಹೇಳಬೇಕು ಎಂದು ಚೇತನ್ ಕೇಶವ್ ಬಯಸಿದ್ದರು. ಎರಡ್ಮೂರು ತಿಂಗಳ ಬಳಿಕ, ಮುರುಳಿಯವರನ್ನು ಚೇತನ್ ಭೇಟಿಯಾಗಿ, ಸಿನಿಮಾ ಬಗ್ಗೆ ಮಾತನಾಡಿದರು.

ನಿರ್ದೇಶನದ ಬಗ್ಗೆ ಅರಿವೇ ಇಲ್ಲದಿದ್ದಾಗ, ಶ್ರೀಮುರುಳಿಯವರು ನಿರ್ದೇಶನದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಬಳಿಕ ಸಿನಿಮಾ ಮಾಡು ಎಂದು ಹೇಳಿದರು. ಬಳಿಕ ಚೇತನ್ ನಿರ್ದೇಶನದ ಬಗ್ಗೆ ಪೂರ್ತಿಯಾಗಿ ತಿಳಿದುಕೊಂಡು, ನರ್ತನ್ ಮತ್ತು ವಸಿಷ್ಠ ಸಿಂಹ ಅವರ ಬಳಿ ಚೇತನ್ ಕೆಲಸ ಮಾಡಲು ಶುರು ಮಾಡಿದರು. ಈ ರೀತಿ ಚೇತನ್ ಅವರ ಸಿನಿಮಾ ನಿರ್ದೇಶನದ ಜರ್ನಿ ಆರಂಭವಾಯಿತು.

ಬಳಿಕ ಮಾಸ್ ಮತ್ತು ರಗಡ್‌ ಲುಕ್‌ನಲ್ಲಿ ಪ್ರೇಕ್ಷಕರು ವಸಿಷ್ಟ ಸಿಂಹ ಅವರನ್ನು ನೋಡಿದ್ದಾರೆ ಇದೀಗ, ಲವ್ವರ್ ಬಾಯ್ ಲುಕ್‌ನಲ್ಲಿ ವಸಿಷ್ಟ ಅವರನ್ನು ನೋಡಲಿ ಎಂದು ಚೇತನ್ ಕೇಶವ್, ಲವ್‌ಲೀ ಸಿನಿಮಾ ಮಾಡಲು ನಿರ್ಧರಿಸಿದರು. ಬಳಿಕ ಏನಾಯ್ತು..? ಲವ್‌ಲೀ ಸಿನಿಮಾ ವಿಶೇಷತೆಗಳೇನು ಅಂತಾ ತಿಳಿಯಲು ಈ ವೀಡಿಯೋ ನೋಡಿ..

ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಗೇಂದ್ರ

ಅಯೋಧ್ಯೆ ಸದಾ ರಾಜನಿಗೆ ದ್ರೋಹವೇ ಆಗಿದೆ ಎಂದ ನಟ

ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಗೇಂದ್ರ

- Advertisement -

Latest Posts

Don't Miss