Friday, November 22, 2024

Latest Posts

150 ಜಾತಿಯ  ಸಿರಿಧಾನ್ಯ ಬೀಜ  ಸಂಗ್ರಹಿಸಿ ಬ್ರಾಂಡ್ ಅಂಬಾಸಿಡರ್ ಆದ ಬುಡಕಟ್ಟು ಮಹಿಳೆ “ಲಹರಿ ಬಾಯಿ”

- Advertisement -

national news

ಶ್ರೀ ಅನ್ನ ಎಂದು ಮರುನಾಮಕರಣ ಮಾಡಿರುವ ಸಿರಿಧಾನ್ಯವನ್ನು ಜಾಗತೀಕ ಮಟ್ಟದಲ್ಲಿ ಪ್ರಸಿದ್ದಿ ಪಡೆಯುವಂತೆ ಮಾಡಿದೆ. ಪ್ರಧಾನಿ ನರೆಂದ್ರ ಮೋದಿ ಸರ್ಕಾರ  ಸಿರಿಧಾನ್ಯವನ್ನು ಮುನ್ನಲೆಗೆ ತರುವತ್ತ ಶ್ರಮವಹಿಸುತ್ತಿರುವ ಹೊತ್ತಿನಲ್ಲಿ  ಮಧ್ಯ ಪ್ರದೇಶದ ದಿಂಡೋರಿ ಜಿಲ್ಲೆಯ ಬೈಗಾ ಬುಡಕಟ್ಟು ಸಮುದಾಯದ ಲಹರಿ ಭಾಯಿ ಎಂಬ ಮಹಿಳೆ  ಬರೋಬ್ಬರು 150 ಜಾತಿಯ ವಿವಿಧ ಬಗೆಯ ಸಿರಿಧಾನ್ಯ ಬೀಜಗಳನ್ನು ಸಂಗ್ರಹ ಮಾಡುವ ಮೂಲಕ  ಶ್ರೀ ಅನ್ನಕ್ಕೆ  ಅಂಬಾಸಿಡರ್ ಆಗಿ ಹೊರಹೊಮ್ಮಿದ್ದಾರೆ.

ಸಿಲ್ಪಾಡಿ ಗ್ರಾಮದ ಬೈಗಾ ಬುಡಕಟ್ಟು ಜನಾಂಗದವರಾದ ಲಹರಿ ಬಾಯಿ, ತನ್ನ ಹೆತ್ತವರೊಂದಿಗೆ ಎರಡು ಕೋಣೆಗಳ ಇಂದಿರಾ ಆವಾಸ್ ಮನೆಯಲ್ಲಿ ವಾಸಿಸುತ್ತಿದ್ದಾರೆ. ಒಂದು ಕೋಣೆಯನ್ನು ಲಿವಿಂಗ್ ರೂಮ್ ಮತ್ತು ಅಡುಗೆಮನೆಯಾಗಿ ಕಾರ್ಯನಿರ್ವಹಿಸಿದರೆ, ಇನ್ನೊಂದು ಸಿರಿಧಾನ್ಯ ಬೀಜಗಳ ಬ್ಯಾಂಕ್ ಆಗಿ ಮಾರ್ಪಟ್ಟಿದೆ. ಇದರಲ್ಲಿ ಕೊಡೋ, ಕುಟ್ಕಿ, ಸಾನ್ವಾ, ಮಾಧಿಯಾ, ಸಲ್ಹಾರ್ ಮತ್ತು ಕಾಗ್ ಬೆಳೆಗಳನ್ನು ಒಳಗೊಂಡಂತೆ ಸುಮಾರು 150-ಕ್ಕೂ ಹೆಚ್ಚು ಅಪರೂಪದ ಸಿರಿಧಾನ್ಯ ಬೀಜಗಳನ್ನು ಸಂರಕ್ಷಿಸಲಾಗಿದೆ.ಸಂಗಹ್ರಹಿಸಿದ ಬೀಜಗಳನ್ನು ತಮ್ಮ ಕೃಷಿ ಭೂಮಿಯ ಮೂಲೆಯಲ್ಲಿ ಬಿತ್ತಿದ್ದಾಳೆ .ಹಾಗೂ ಹೆಚ್ಚಾದ ಬೀಜಗಳನ್ನು  ಹಳ್ಳಿಯ ರೈತರಿಗೆ ಮತ್ತು ಇತರ 15-20 ಹಳ್ಳಿಗಳಲ್ಲಿ ಉಚಿತವಾಗಿ ವಿತರಿಸುತ್ತಿದ್ದಾರೆ. ಇದು 54 ಹಳ್ಳಿಗಳನ್ನೊಳಗೊಂಡ ಪ್ರಬಲ ಬೈಕಾ ಚಾಕ್ (ಬೈಗಾ ಬುಡಕಟ್ಟು ಜನಸಂಖ್ಯೆಯ ಸ್ಥಳೀಯ ಹಳ್ಳಿಗಳು) ಭಾಗವಾಗಿದೆ. ಪ್ರತಿಯಾಗಿ, ರೈತರು ತಮ್ಮ ಉತ್ಪನ್ನದ ಸ್ವಲ್ಪ ಭಾಗವನ್ನು ಆಕೆಗೆ ಉಡುಗೊರೆಯಾಗಿ ನೀಡುತ್ತಾರೆ.

ಶಿವಮೊಗ್ಗದಲ್ಲಿ ಏರ್ ಪೋರ್ಟ್ ಉದ್ಘಾಟನೆಗೆ ಮೋದಿ ಚಾಲನೆ..!

ಕೆಲಸಕ್ಕೆ ಇದ್ದ ಮನೆಯನ್ನೆ ಕಳ್ಳತನ ಮಾಡಿ ಪರಾರಿಯಾದ ನೇಪಾಳಿ ದಂಪತಿ

ಟೂರ್ನಿಯಿಂದ ಹಿಂದೆ ಸರಿಯುತ್ತಿರುವ ಅಗ್ರ ಕುಸ್ತಿ ಪಟುಗಳು

- Advertisement -

Latest Posts

Don't Miss