Wednesday, June 12, 2024

Latest Posts

ಲವ್ ಜಿಹಾದ್ ನಲ್ಲಿ ಸಿಲುಕಿರುವ ಹಿಂದೂ ಹೆಣ್ಣು ಮಕ್ಕಳ ರಕ್ಷಣೆಗಾಗಿ ಸಹಾಯವಾಣಿ ಆರಂಭಿಸಿದ ಶ್ರೀರಾಮಸೇನೆ

- Advertisement -

Hubli News: ಹುಬ್ಬಳ್ಳಿ: ಲವ್ ಜಿಹಾದ್‌ನಲ್ಲಿ ಸಿಲುಕಿರುವ ಹಿಂದೂ ಹೆಣ್ಣು ಮಕ್ಕಳ ರಕ್ಷಣೆಗಾಗಿ ಶ್ರೀರಾಮಸೇನೆ ಸಹಾಯವಾಣಿ ಆರಂಭಿಸಿದೆ.

ಹಿಂದೂ ಧರ್ಮದ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ಸಹಾಯವಾಣಿ ಆರಂಭಿಸಿದ್ದು, 9090443444 ಸಂಖ್ಯೆ ಮೊಬೈಲ್ ನಂಬರ್ ಸಹಾಯವಾಣಿ ಕಾರ್ಯಾರಂಭ ಮಾಡಿದೆ. ಹುಬ್ಬಳ್ಳಿಯ ಖಾಸಗಿ ಹೊಟೇಲ್‌ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ, ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಹಾಯವಾಣಿಗೆ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ನೇಹಾ ಕುಟುಂಬಸ್ಥರು, ಉತ್ತರ ಕರ್ನಾಟಕ ವಿವಿಧ ಜಿಲ್ಲೆಗಳ ಶ್ರೀರಾಮಸೇನೆ ಪದಾಧಿಕಾರಿಗಳು ಭಾಗಿಯಾಗಿದ್ದಾರೆ.

ಈ ವೇಳೆ ಮಾತನಾಡಿದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಪ್ರೀತಿ ಪ್ರೇಮದ ಹೆಸರಲ್ಲಿ ಹಿಂದೂ ಹೆಣ್ಮಕ್ಕಳ ಮತಾಂತರ,ಅತ್ಯಾಚಾರ ನಡೀತಿದೆ. ಘಜನಿ, ಘೊರಿ, ಟಿಪ್ಪು ಸುಲ್ತಾನ ವರೆಗೂ ಈ ಪ್ರಕ್ರಿಯೆ ಚಾಲನೆಯಲ್ಲಿದೆ. ಇಸ್ಲಾಂನ ಕ್ರೌರ್ಯ ಇತಿಹಾಸ ಇದೆ. ಅಲ್ಲಿಂದ ನೇಹಾವರೆಗೂ ತಲುಪಿದೆ. ನಾವು ಇವತ್ತು ಸಹಾಯವಾಣಿ ಉದ್ಘಾಟನೆ ಮಾಡಿದ್ದೇವೆ. ಹಿಂದೂ ಹುಡಗಿರಗೆ ನಾವು ಭರವಸೆ ಕೊಡ್ತೀದಿವಿ.

ನೀವು ಯಾವುದೇ ಸಮಸ್ಯೆ ಇದ್ರೂ ನಮಗೆ ತಿಳಿಸಬೇಕು. ನಾವು 24 ಗಂಟೆಯಲ್ಲಿ ಸಮಸ್ಯೆ ಬಗೆಹರಿಸುತ್ತೇವೆ. ಹಿಂದೂ ಹೆಣ್ಮಕ್ಕಳ ಸಾಯಬೇಡಿ,ನೀವ ಸಾಯಿಸೋ ಯೋಚನೆ ಮಾಡಬೇಕು. ನಾವು ನಿಮಗೆ ಟ್ರೇನಿಂಗ್ ಕೊಡ್ತೀವಿ. ಕ್ರೂರಿತನಕ್ಕೆ ಅಲ್ಲೆ ಉತ್ತರ ಕೊಡಬೇಕು, ದಯವಿಟ್ಟು ಯಾವ ಹಿಂದೂ ಹೆಣ್ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ನಾವು ಅನೇಕರ ಜೊತೆ ಚರ್ಚೆ ಮಾಡಿ ಸಹಾಯವಾಣಿ ಉದ್ಘಾಟನೆ ಮಾಡಿದ್ದೇವೆ. 24 ಗಂಟೆಯಲ್ಲಿ ಯಾವುದೇ ಸಮಯದಲ್ಲಿ ನೀವು ಕಾಲ್ ಮಾಡಬಹುದು. ಕರ್ನಾಟಕದಲ್ಲಿ ಆರು ಕೇಂದ್ರದಲ್ಲಿ ಸಹಾಯವಾಣಿ ಉದ್ಘಾಟನೆ ಮಾಡಿದ್ದೇವೆ.. ಅಂಜಲಿ ಮತ್ತು ನೇಹಾ ಪ್ರಕರಣದ ನಂತರ ನಾವು ತೀರ್ಮಾನ ಮಾಡಿದ್ದೇವೆ ಎಂದು ಮುತಾಲಿಕ್ ತಿಳಿಸಿದರು.

ಹಾಡುಹಗಲೆ ನೇಹಾ ಕೊಲೆಯಾಗತ್ತೆ ಅಂದ್ರೆ ಅವರಿಗೆ ಎಷ್ಟು ಟ್ರೇನಿಂಗ್ ‌ಕೊಟ್ಟಿರಬೇಕು…? ಹಿಂದೂ ಸಮಾಜ ಮುಸ್ಲಿಂರಿಗೆ ಉತ್ತರ ಕೊಡತ್ತೆ. ಹಿಂದೂ ಹುಡಗೀರನ್ಮ ಮುಟ್ಟಿದರೆ ಮುಸ್ಲಿಂ ಸಮಾಜವೇ ಕಾರಣ. ಕೋರ್ಟ್ ಇಲ್ಲ, ಪೊಲೀಸರು ಇಲ್ಲ. ನಾವೇ ಅವರಿಗೆ ಉತ್ತರ ಕೊಡ್ತೀವಿ. ಹಿಂದೂ ಹುಡಗಿಯರ ಪೋಷಕರ ಜವಾಬ್ದಾರಿಯೂ ಇದೆ. ಹುಡಗೀರನ್ನ ಹದ್ದು ಬಸ್ತಿನಲ್ಲಿಡಿ. ಪಬ್ ಕ್ಲಬ್ ಗೆ ಹೋಗ್ತಾರೆ ಎಂದು ಗಮನ ಕೊಡಿ. ಪಾಲಕರು ಗಮನ ಕೊಡಿ ಕಾಲೇಜ್ ಗೆ ಹೋಗಿ. ಹಿಂದೂ ಸಮಾಜದಲ್ಲಿ ಇರೋ ಸ್ವಾತಂತ್ರ್ಯ ಮುಸ್ಲಿಂ ಸಮಾಜದಲ್ಲಿ ಇಲ್ಲ. ಹಿಂದೂ ಹುಡಗೀ ನೀನು ಎಚ್ಚರ ಇರು, ಇದನ್ನ ಹಿಂದೂ ಸಂಘಟನೆ ಕಾಂಟ್ರಾಕ್ಟ್ ತಗೆದುಕೊಂಡಿಲ್ಲ. ನೀವ ಹಾಳಾಗೋದಲ್ಲ, ಹಿಂದೂ ಸಮಾಜ ಹಾಳಾಗ್ತಿದೆ. ಪ್ರೀತಿ ಪ್ರೇಮ ಬೇಡಾ ಅಂತಾ ನಾನ ಹೇಳಲ್ಲ, ಆದ್ರೆ ಯಾರ ಜೊತೆ ಅನ್ನೋದ ಮುಖ್ಯ.

ಅಂಜಲಿ ಹಂತಕನಿಗೂ ಗಲ್ಲು ಶಿಕ್ಷೆಯಾಗಬೇಕು. ಮುಸ್ಲಿಂರು ಜನಸಂಖ್ಯೆ ಹೆಚ್ಚು ಮಾಡಲು ಲವ್ ಜಿಹಾದ್. 14 ಪರ್ಸೆಂಟ್ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿದೆ. ಜನ ಸಂಖ್ಯೆ ಹೆಚ್ಚಾದರೆ ಏನು ಅನಾಹುತ ಆಗತ್ತೆ ಅನ್ನೋದ ಗೊತ್ತಿದೆ.. ಪೊಲೀಸ್ ಸ್ಟೇಶನ್ ಸುಡ್ತೀದಾರೆ,ಡಿಜೆ ಹಳ್ಳಿ ಕೆಜಿ ಹಳ್ಳಿ‌ ಮಾದರಿಯಲ್ಲಿ ಗಲಾಟೆ ಆಗಿದೆ. ರಾಜಕಾರಣಿಗಳೆ ಮಹಿಳೆಯರ ಮಾನ ಮರ್ಯಾದೆ ಕಳಿಬೇಡಿ. ಬಿಜೆಪಿ ಬೈಯೋದು,ಕಾಂಗ್ರೆಸ್ ಬೈಯ್ಯೋದು ಸರಿ ಅಲ್ಲ. ಫಯಾಜ್ ಹಾಗೂ ವಿಶ್ವ ರನ್ನ ಬಿಡುಗಡೆ ಮಾಡಿದ್ರೆ ನಾವು ಅವರಿಗೆ ಗಲ್ಲು ಶಿಕ್ಷೆ ಕೊಡ್ತೀವಿ ಎಂದು ಮುತಾಲಿಕ್ ಹೇಳಿದ್ದಾರೆ.

ಸಾಕ್ಷಿ ಇಲ್ಲ ಎಂದು ಹೊರಗಡೆ ಬಂದ್ರೆ ನಾವ ಬಿಡಲ್ಲ‌. ನೇಹಾ ಹಂತಕನನ್ನ ಬಿಡಲ್ಲ,ಅಂಜಲಿ ಹಂತಕ ನನ್ನ ಬಿಡಲ್ಲ. ಅತ್ಯಾಚಾರಕ್ಕೆ,ಕೊಲೆಗೆ ಕಾನೂನು ಕಾರಣ,ರಾಜಕಾರಣಿಗಳು ಕಾರಣ. ಇಂತಹ ವಿಷಯದಲ್ಲಿ ರಾಜಕಾರಣ ಮಾಡಬಾರದು. ಮೂರು ವರ್ಷದಲ್ಲಿ 40 ಸಾವಿರ ಹೆಣ್ಮಕ್ಕಳ ನಾಪತ್ತೆಯಾಗಿದೆ. 45 ಸಾವಿರ ಅಪ್ತಾಪ್ತ ಬಾಲಕಿಯರು ಗರ್ಭಿಣಿಯಾಗಿದ್ದಾರೆ. ಅಂಕಿ ಸಂಖ್ಯೆಯಿಂದ ಭಯ ಆಗಿದೆ ಎಂದು ಮುತಾಲಿಕ್ ಆತಂಕ ಹೊರಹಾಕಿದ್ದಾರೆ.

ಕಾನೂನಿನ ಭಯ ವೇ‌ ಇಲ್ಲವಾ,ರಾಜಕಾರಣಿಗಳು ಏನ ಮಾಡ್ತೀದಿರಿ..? ಕೋರ್ಟ್, ಪೊಲೀಸ್, ರಾಜಕಾರಣಿಗಳು‌ಎಲ್ಲರೂ ಜವಾಬ್ದಾರಿ ಇದೆ. ಮುಸ್ಲಿಂ ಸಮಾಜಕ್ಕೆ ಎಚ್ಚರಿಕೆ ಕೊಡ್ತೀನಿ. ಇಸ್ಲಾಂನಲ್ಲಿ ಮಹಿಳೆಯರಿಗೆ ಮಾನ ಇಲ್ಲ,ಗೌರವ ಇಲ್ಲ. ಮಹಿಳೆಯರು ಹೊಲ ( ಜಮೀನು ) ಇದ್ದ ಹಾಗೆ. ಎಷ್ಟು ಬೇಕು ಅಷ್ಟು ಬಿತ್ತನೆ ಮಾಡಿ ಬೆಳೆ ಬೆಳಿಬಹುದು ಎಂದ ಬುಕ್‌ ನಲ್ಲಿದೆ. ಕಾಂಗ್ರೆಸ್ ನಾಯಕರೇ ನೀವು ಮುಸ್ಲಿಂ ಮತಗಳಿಗಾಗಿ ಜೊಲ್ಲು ಸುರಿಸಬೇಡಿ. ಮುಸ್ಲಿಮರು ನಿಮ್ಮ ಹೆಣ್ಣುಮಕ್ಕಳನ್ನು ಬೀಡೋದಿಲ್ಲ. ಕೋರ್ಟ್, ಪೊಲೀಸ್, ಕಾಂಗ್ರೆಸ್ ನಾಯಕರ ಹೆಣ್ಣು ಮಕ್ಕಳನ್ನು ಸಹ ಇವರು ಬೀಡೋದಿಲ್ಲಾ ಎಂದು ಮುತಾಲಿಕ್ ಆಕ್ರೋಶ ಹೊರಹಾಕಿದ್ದಾರೆ.

ಸರ್ಕಾರ,ರಾಜಕಾರಣಿಗಳು ಫೇಲ್ ಆಗಿದ್ದಕ್ಕೆ ನಾವು ಇದಕ್ಕೆ ಮುಂದಾಗಿದ್ದೇವೆ. ಹೌದು ಇದು ನೈತಿಕ ಪೋಲಿಸ್ ಗಿರಿ. ಸರ್ಕಾರ ನೈತಿಕತೆ ಕಳೆದುಕೊಂಡಿದೆ ಹೀಗಾಗಿ ನಾವು ನೈತಿಕ ಪೊಲೀಸ್ ಗಿರಿ ಆರಂಭಿಸಿದ್ದೆವೆ. ನಾವು ಹಿಂದೂ ಹೆಣ್ಣುಮಕ್ಕಳಿಗೆ ಬರೀ ತ್ರಿಶೂಲ ಮಾತ್ರ ಅಲ್ಲಾ, ಗನ್, ಲಾಂಗ್ ಮಚ್ಚು ಟ್ರೈನಿಂಗ್ ನೀಡುತ್ತೆವೆ. ಇದು‌ ನೈತಿಕ ಪೊಲೀಸ್ ಗಿರಿನೇ ಎಂದು ಮುತಾಲಿಕ್ ಹೇಳಿದ್ದಾರೆ.

ಪ್ರಜ್ವರ್ ರೇವಣ್ಣ ಪ್ರಕರಣ ಭಯಾನಕ. SIT ರಚನೆ ಆಗಿದೆ,ಪ್ರಜ್ವಲ್ ರೇವಣ್ಣ ಬರ್ತಿನಿ‌ ಅಂದೀದಾರೆ. ರಾಜಕಾರಣಿಗಳ ಮಾತಿನಿಂದ ಪ್ರತಿನಿತ್ಯ ಮಹಿಳೆಯರ ಅತ್ಯಾಚಾರ ಆಗ್ತಿದೆ. ನಾವು ದೇಶ ಉಳಿಸಬೇಕಿದೆ, ಮುಸ್ಲಿಂರು ಜನಸಂಖ್ಯೆ ಹೆಚ್ಚು ಮಾಡಲು ಸಂಚು ಮಾಡಿದ್ದಾರೆ ಎಂದು ಮುತಾಲಿಕ್ ಆರೋಪಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಹಾಸಿಗೆ ದಿಂಬು ಹೊತ್ತೊಯ್ದ ಎಸ್‌ಐಟಿ ತಂಡ

Expressionless ಆ್ಯಕ್ಟಿಂಗ್‌ನಿಂದಾಗಿ ಟ್ರೋಲ್ ಆಗುತ್ತಿದ್ದಾರೆ ಹೀರಾಮಂಡಿ ನಟಿ ಶರ್ಮಿನ್ ಸೇಗಲ್

ಪಕ್ಕದ ಮನೆಯಿಂದ ಬರುವ ಹೆಗ್ಗಣಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ ವ್ಯಕ್ತಿ

- Advertisement -

Latest Posts

Don't Miss