ಖ್ಯಾತ ತಮಿಳು ನಟ `ಕಮಲ್ ಹಾಸನ್’ ಅವರ ಪುತ್ರಿ ಶೃತಿ ಹಾಸನ್ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕ ನಟಿ ಮತ್ತು ಹಿನ್ನಲೆ ಗಾಯಕಿ. ಹಲವಾರು ತಮಿಳು ಚಿತ್ರಗಳಲ್ಲಿ ನಟಿಸಿರುವ ಇವರು ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅಭಿನಯದ `ಪೃಥ್ವಿ’ ಚಿತ್ರದಲ್ಲಿ ಒಂದು ಹಾಡನ್ನು ಕೂಡ ಹಾಡಿದ್ದಾರೆ.
ನಟಿ ಶ್ರುತಿ ಹಾಸನ್, ಸಂತನು ಹಜಾರಿಕ ಎಂಬ ಡೂಡಲ್ ಮೇಕರ್ ಜೊತೆ ಪ್ರೀತಿಯಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ತಂದೆ ಕಮಲ್ ಹಾಸನ್ ಅವರ ಎರಡು ವಿಚ್ಛೇದನ ನೋಡಿರುವ ಶ್ರುತಿ ಹಾಸನ್ ಗೆ ಮದುವೆ ಎಂದರೆ ಭಯ ಆಗುತ್ತಂತೆ. ಶ್ರುತಿ ಹಾಸನ್ ಅವರು ಸಂದರ್ಶನವೊಂದರಲ್ಲಿ ತಮ್ಮ ಪ್ರೀತಿ ಹಾಗೂ ಮದುವೆ ಬಗ್ಗೆ ಮಾತನಾಡಿದ್ದಾರೆ.
ನನಗೂ ಸಂತನು ಗು ಕಾಮನ್ ಫ್ರೆಂಡ್ಸ್ ಇದ್ದರು. ಅಲ್ಲಿಂದ ನಮ್ಮ ಸ್ನೇಹ ಶುರುವಾಯ್ತು. ಇಬ್ಬರಿಗೂ ಸಂಗೀತ, ಕಲೆ, ಸಿನಿಮಾ ಬಗ್ಗೆ ಆಸಕ್ತಿಯಿದೆ. ಜನರು ಅವನನ್ನು ಇಷ್ಟಪಡೋದು ಅಪರೂಪ. ಆತ ಸಿಕ್ಕಾಪಟ್ಟೆ ಕರುಣಾಮಯಿ, ಪ್ರತಿಭಾವಂತ. ಸಂತನು ಹಜಾರಿಕ ಎಂಬ ಡೂಡಲ್ ಮೇಕರ್ ಜೊತೆಗೆ ಒರ್ವ ಕಲಾವಿದ. ನನಗೆ ಅವನ ಕಲೆ ಬಹಳ ಸ್ಫೂರ್ತಿ ತುಂಬಿತು. ನಮ್ಮ ಚಿತ್ರರಂಗದಲ್ಲಿ ಭೇಟಿ ಮಾಡಿದ ಕೆಲವರಲ್ಲಿ ಒಳ್ಳೆಯ ಗುಣ ಇರಲಿಲ್ಲ. ಅದರಲ್ಲಿಯೂ ನಾನು ಒಂದಷ್ಟು ಕಲಾವಿದರ ಜೊತೆ ಡೇಟ್ ಮಾಡಿದ್ದೆ, ಅದಂತೂ ಭಯಂಕರವಾಗಿತ್ತು. ನಾನು ಇಷ್ಟಪಡುವ ವಿಷಯವನ್ನು ನಾನು ಡೇಟ್ ಮಾಡಿದ ಕಲಾವಿದರು ಯಾರೂ ಇಷ್ಟಪಡಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ನನಗೆ ಮದುವೆ ಎನ್ನುವ ಪದ ಭಯ ಹುಟ್ಟಿಸುತ್ತದೆ. ನನ್ನ ತಂದೆ ಮದುವೆ ಬಗ್ಗೆ ಸುಂದರವಾದ ಉದ್ದೇಶ ಹೊಂದಿದ್ದರು. ಮದುವೆಯಲ್ಲಿ ಎಲ್ಲವೂ ಚೆನ್ನಾಗಿರಬಹುದು, ಚೆನ್ನಾಗಿರದೇ ಇರಬಹುದು. ಆದರೆ ನಾನು ಯಾವುದು ಒಳ್ಳೆಯದಿದೆಯೋ ಅದರ ಕಡೆಗೆ ಗಮನ ಕೊಡುವೆ. ನನ್ನ ತಂದೆಗೆ ಮದುವೆಯಾಗಿ ಚೆನ್ನಾಗಿ ಬಾಳಲಾಗಲಿಲ್ಲ ಅಂತ ನಾನು ಮದುವೆಯಾಗಬಾರದು ಅಂತಲ್ಲ. ಅವರಿಬ್ಬರು ಬುದ್ಧಿವಂತರಾಗಿದ್ದರು ಎಂದು ತಿಳಿಸಿದ್ದಾರೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ




